ತಾತ್ಕಲಿಕ ರಸ್ತೆ ನಿರ್ಮಾಣಕ್ಕೆ ವಿರೋಧ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ರಾಜಾರತ್ನಪುರ ವಿಶ್ವಬ್ರಾಹ್ಮಣ ಸೇವಾ ಸಂಘ ತ್ರಿದಶಮಾನೋತ್ಸವ ಹಾಗೂ ಸಭಾ ಭವನದ ಪಂಚಮ ವರ್ಷದ ಸವಿನೆನಪಿಗಾಗಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ವಿಶ್ವಕರ್ಮ ಸಮಾಜದ ಸಂಘ ಸಂಸ್ಥೆಗಳ ಜಿಲ್ಲಾ ಮಟ್ಟದ ಸಾಂಸ್ಕ್ರತಿಕ ಸ್ಪರ್ಧೆ 24 ರಂದು ಉಚಿತ ಸಾಮೂಹಿಕ ಉಪನಯನ ಎಪ್ರೀಲ್ 25 ರಂದು ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ಜಗದ್ಗುರು ಶ್ರೀ ಕಾಳ ಹಸ್ತೇಂದ್ರ ಸರಸ್ವತಿ ಸ್ವಾಮೀಜಿ, ಸಚಿವ ಅಭಯಚಂದ್ರ ಜೈನ್, ಮಾಜಿ ಮುಖ್ಯ ಮಂತ್ರಿ ಜಗದೀಶ್ ಶೆಟ್ಟರ್ ಆಗಮಿಸಲಿದ್ದು ಪೂರ್ವ ತಯಾರಿಯಂತೆ ರಸ್ತೆ ತಡೆ ಹಾಗೂ ಸಂಚಾರದಲ್ಲಿ ವ್ಯತ್ಯಯ ಆಗದಂತೆ ಕಾರ್ಯಕ್ರಮ ನಡೆಯಲಿದ್ದ ಸರಫ್ ಅಣ್ಣಾಯ್ಯಾಚಾರ್ಯ ಸಭಾ ಭವನಕ್ಕೆ ಸಂಪರ್ಕ ಕಲ್ಪಿಸಲು ಕಾಲು ದಾರಿಯ ಪರಂಬೋಕು ಸ್ಥಳದಲ್ಲಿ ಸುಮಾರು 30 ಅಡಿ ಉದ್ದದ ತಾತ್ಕಲಿಕ ರಸ್ತೆಯನ್ನು ನಿರ್ಮಿಸಲಾಗಿದ್ದು ಮೆನ್ನಬೆಟ್ಟು ಪಂಚಾಯಿತಿ ಆಡಳಿತಕ್ಕೆ ಮಾಹಿತಿಯನ್ನು ನೀಡಲಾಗಿತ್ತು. ರಸ್ತೆಯು ಹಾಲು ಉತ್ಪಾದಕರ ಮಹಿಳಾ ಸಂಘದ ಮುಂಬಾಗದಿಂದ ಹಾದು ಹೋಗುತ್ತಿದ್ದು ಮಹಿಳಾ ಸಂಘದಿಂದ ವಿರೋಧ ವ್ಯಕ್ತವಾಗಿ ಮಹಿಳಾ ಸಂಘದಿಂದ ಸಂಭಂದ ಪಟ್ಟ ಅಧಿಕಾರಿಗಳಿಗೆ ದೂರನ್ನು ನೀಡಲಾಗಿತ್ತು. ಬುಧವಾರ ಸ್ಥಳಕ್ಕೆ ಮುಲ್ಕಿ ವಿಶೇಷ ತಹಶಿಲ್ದಾರ್ ಮಹಮ್ಮದ್ ಇಸಾಕ್, ಕಂದಾಯ ನಿರೀಕ್ಷಕ ನಿತ್ಯಾನಂದ ದಾಸ್ ಮತ್ತು ಗ್ರಾಮಕರಣೀಕ ಕಿರಣ್ ಭೇಟಿ ನೀಡಿ ಪರೀಶೀಲಿಸಿದರು.
ಈ ಮದ್ಯೆ ವಿಶ್ವ ಬ್ರಾಹ್ಮಣ ಸೇವಾ ಸಂಘದ ಸದಸ್ಯರು ತಹಸೀಲ್ದಾರ್ ಬಳಿ ಸಂಚಾರ ದಟ್ಟಣೆ ನಿಯಂತ್ರಿಸಲು ತಾತ್ಕಾಲಿಕ ರಸ್ತೆಯನ್ನು ಎಪ್ರೀಲ್ 25 ರ ಕಾರ್ಯಕ್ರಮದ ವರೆಗೆ ನೀಡಿ ನಂತರ ಸರಿಪಡಿಸುತ್ತೇವೆ ಎಂದು ಮನದಟ್ಟು ಮಾಡಿದರು. ಇದಕ್ಕೆ ಉತ್ತರಿಸಿದ ತಹಶೀಲ್ದಾರ್ ರಸ್ತೆ ನಿರ್ಮಾಣದ ಬಗ್ಗೆ ಸಂಬಂಧ ಪಟ್ಟವರಲ್ಲಿ ಅಧಿಕೃತವಾಗಿ ಅನುಮತಿ ಪಡೆಯಬೇಕಿತ್ತು. ಮೆಲಾಧಿಕಾರಿಯವರ ಆದೇಶ ಪ್ರಕಾರ ಜಾಗವನ್ನು ಹಿಂದಿನಂತೆಯೇ ಕಾಲು ದಾರಿಯ ಪ್ರಕಾರ ಸರಿಪಡಿಸಬೇಕು ಎಂದು ಉತ್ತರಿಸಿದರು.

Kinnigoli-130416013

Comments

comments

Comments are closed.

Read previous post:
Kinnigoli-130416012
ಮೀರಾ ಎಮ್. ನಾಯಕ್

ಕಿನ್ನಿಗೋಳಿ : ಮೂರುಕಾವೇರಿ ದಿ. ಮಾಧವ ನಾಯಕ್ ಅವರ ಧರ್ಮ ಪತ್ನಿ ಮೀರಾ ಎಮ್. ನಾಯಕ್ (75ವ.) ಅಲ್ಪ ಕಾಲದ ಅಸೌಖ್ಯದಿಂದ ಸೋಮವಾರ ನಿಧನರಾದರು. ಮೃತರು ನಾಲ್ಕು ಗಂಡು...

Close