ಕಿನ್ನಿಗೋಳಿ ಶೃದ್ಧಾಂಜಲಿ ಸಭೆ

ಕಿನ್ನಿಗೋಳಿ: ಸಂದರ್ಭಕ್ಕೆ ತಕ್ಕುದಾದ ಹಾಸ್ಯ, ಹಿರಿಕಿರಿಯ ಕಲಾವಿದರೊಂದಿಗೆ ಹೊಂದಿಕೊಂಡು ಹೋಗುವ ಚಾತುರ್ಯ, ತುಳು ಮತ್ತು ಪೌರಣಿಕ ಕಥೆಗಳ ಜ್ಞಾನದಿಂದಾಗಿ ಯಕ್ಷಗಾನ ಕ್ಞೇತ್ರವನ್ನು ಶ್ರೀಮಂತವಾಗಿಸಿದ್ದಾರೆ. ಅತ್ಯಂತ ಬಡಕುಟುಂಬ ಕುಡುಬಿ ಜನಾಂಗದಲ್ಲಿ ಹುಟ್ಟಿ ಜೀವನೋಪಾಯಕ್ಕಾಗಿ ಕೃಷಿ ಹಾಗೂ ಯಕ್ಷಗಾನಕ್ಕಾಗಿ ಮುಡಿಪಾಗಿಟ್ಟಿದ್ದರು. ಎಂದು ಯಕ್ಷಗಾನ ತಾಳಮದ್ದಲೆ ಅರ್ಥಧಾರಿ ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದರು.
ಗುರುವಾರ ಕಿನ್ನಿಗೊಳಿ ಯುಗಪುರುಷ ಸಭಾಭವನದಲ್ಲಿ ಕಿನ್ನಿಗೋಳಿ ಯಕ್ಷಲಹರಿ ಕಿನ್ನಿಗೋಳಿ ಆಶ್ರಯದಲ್ಲಿ ಹಾಸ್ಯ ಕಲಾವಿದ ದಿ.ಮಿಜಾರು ಅಣ್ಣಪ್ಪ, ಯುಗಪುರುಷ ಮಾಸ ಪತ್ರಿಕೆಯ ಗೌರವ ಸಂಪಾದಕಿ ದಿ. ಕಮಲಾಕ್ಷಿ ಉಡುಪ ಅವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಿಜಾರು ಅಣ್ಣಪ್ಪ ಯಕ್ಷಗಾನದ ಹಾಸ್ಯಕ್ಕೆ ನೆಲೆ ತಂದು ಕೊಟ್ಟವರು. ೬೮ ವರ್ಷಗಳಿಂದ ಯಕ್ಷಲೋಕಕ್ಕೆ ಸೇವೆಗೈದಿದ್ದಾರೆ. ಒಂದು ಸಿನೆಮಾದಲ್ಲಿ ಅವರು ಅಭಿನಯಿಸಿದ್ದು ಮುಂದೆ ಬಹಳಷ್ಟು ಸಿನೆಮಾಗಳ ಅವಕಾಶ ಇದ್ದರೂ ಯಕ್ಷಗಾನ ಪ್ರೇಕ್ಷಕರ ಹಾಗೂ ಯಜಮಾನರ ಅಭಿಮಾನದಿಂದ ನಯವಾಗಿ ತಿರಸ್ಕರಿಸಿದ್ದರು ಎಂದರು.

ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಮಾತನಾಡಿ ಕಿನ್ನಿಗೋಳಿಯ ಯುಗಪುರುಷ ಸಂಸ್ಥೆಯನ್ನು ಕಟ್ಟಿ ಬೆಳಸಿದ ದಿ. ಕೊಡೆತ್ತೂರು ಅನಂತಪದ್ಮನಾಭ ಉಡುಪರ ಧರ್ಮಪತ್ನಿ ದಿ. ಕಮಲಾಕ್ಷಿ ಉಡುಪ ಅವರು ಯುಗಪುರುಷ ಸಂಸ್ಥೆಯನ್ನು ಕಟ್ಟಿ ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ ಎಂದರು.
ಈ ಸಂದರ್ಭ ಹಿರಿಯ ಯಕ್ಷಗಾನ ಕಲಾವಿದರಾದ ದಿ. ದರ್ಣಪ್ಪ ಶೆಟ್ಟಿ ಹಾಗೂ ದಿ. ಕೇಶವ ಶೆಟ್ಟಿಗಾರ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮೂಡಬಿದಿರೆ ಉದ್ಯಮಿ ಕೆ. ಶ್ರೀಪತಿ ಭಟ್ ಉಪಸ್ಥಿತರಿದ್ದರು.
ಯಕ್ಷಲಹರಿ ಅಧ್ಯಕ್ಷ ಪಿ ಸತೀಶ್ ರಾವ್ ಪ್ರಸ್ತಾವನೆಗೈದು ಸ್ವಾಗತಿಸಿದರು. ಉಪಾಧ್ಯಕ್ಷ ಪಶುಪತಿ ಶಾಸ್ತ್ರೀ ವಂದಿಸಿದರು. ವಸಂತ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.

Kinnigoli-13041601

Comments

comments

Comments are closed.

Read previous post:
Kateel-Durga-Parameshwari-Temple-View3
 ಕಟೀಲು ಜಾತ್ರೆ

ಕಟೀಲು : ಪುರಾಣ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ತಾ. 13ರಂದು ಧ್ವಜಾರೋಹಣದೊಂದಿಗೆ ಉತ್ಸವ ಆರಂಭವಾಗಲಿದೆ. ದಿನಂಪ್ರತಿ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ತಾ. 13ರಂದು...

Close