ನೂತನ ಬೋರ್‌ವೆಲ್ ಕಿಡಿಗೇಡಿಗಳಿಂದ ಹಾನಿ

ಕಿನ್ನಿಗೋಳಿ: ಮುಲ್ಕಿ ಹೋಬಳಿಯ ಪಡುಪಣಂಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಕೂರು ಸುಬ್ರಹ್ಮಣ್ಯ ಹಿರಿಯ ಪ್ರಾಥಮಿಕ ಶಾಲೆಯ ಪರಿಸರ ಹೊಸದಾಗಿ ನಿರ್ಮಿಸಿದ ಬೋರ್ ವೆಲ್ ಗೆ ದುಷ್ಕರ್ಮಿಗಳು ಹಾನಿಯನ್ನುಂಟು ಮಾಡಿದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.
ಪಡುಪಣಂಬೂರು ಗ್ರಾಮ ಪಂಚಾಯಿತಿ ಹಾಗೂ ಇದಕ್ಕೆ ತಾಗಿಕೊಂಡಿರುವ ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಬೇಸಿಗೆ ಮಳೆ ಬರದ ಕಾರಣ ನೀರಿನ ಹಾಹಾಕಾರ ಹೆಚ್ಚುತ್ತಿದ್ದು ಪಡುಪಣಂಬೂರು ಗ್ರಾಮ ಪಂಚಾಯಿತಿ ಗ್ರಾಮಸ್ಥರ ನೀರಿನ ಬವಣೆ ನೀಗಿಸಲು ಕಳೆದ ಕೆಲವು ತಿಂಗಳ ಹಿಂದೆ ಈ ಪರಿಸರದ ಬೊರೆವೆಲ್ ಕೆಟ್ಟು ಹೋಗಿತ್ತು ಹಾಗಾಗಿ ಕಳೆದ ತಿಂಗಳು ಗ್ರಾಮಸ್ಥರಿಗೆ ನೀರಿನ ಅಭಾವವಾಗದಂತೆ ನೋಡಿಕೊಳ್ಳಲು ಪಡುಪಣಂಬೂರು ಪಂಚಾಯಿತಿ ಆಡಳಿತ ತೀರ್ಮಾನಿಸಿ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬೋರ್ ವೆಲ್ ಕೊರೆಯಲು ತಯಾರಿ ನಡೆಸಿತ್ತು. ಆ ಸಮಯ ಸಮೀಪದ ಮನೆಯವರೊಬ್ಬರು ತೀವ್ರ ವಿರೋಧ ವ್ಯಕ್ತಪಡಿಸಿದ ಕಾರಣ ಈ ಯೋಜನೆ ಕೈಬಿಡಲಾಗಿತ್ತು. ಬೇಸಿಗೆ ಮಳೆ ಬರದೆ ಇದ್ದರಿಂದ ಈ ಪರಿಸರದಲ್ಲಿ ಮಾರ್ಚ್ ಮೂರನೇ ವರದಿಂದಲೇ ನೀರಿನ ಅಭಾವ ಕಂಡು ಬಂದ ಕಾರಣ ಹಾಗೂ ಪರಿಸರದ ಸುಮಾರು 200 ಕ್ಕೂ ಮಿಕ್ಕಿ ಮನೆಯವರಿಗೆ ಹಾಗೂ ಪರಿಶಿಷ್ಟ ಜಾತಿ ಕಾಲನಿಗೆ ನೀರು ಪೊರೈಸುವ ಸಲುವಾಗಿ
ಸುಮಾರು 1 ಲಕ್ಷ ರೂ. ವೆಚ್ಚದಲ್ಲಿ ಶುಕ್ರವಾರ ನೂತನ ಬೋರ್‌ವೆಲ್ ಕೊರೆಸಿದಾಗ
ಮೂರು ಇಂಚಿನಷ್ಟು ಯಥೇಷ್ಟ ನೀರು ಸಿಕ್ಕಿದ್ದು ಇದಕ್ಕೆ ಪಂಪ್ ಅಳವಡಿಸಿದರೆ ಪರಿಸರದವರ ನೀರಿನ ಸಮಸ್ಯೆ ಬಹಳಷ್ಟು ಕಡಿಮೆಯಾಗುತ್ತಿತ್ತು. ಆದರೆ ಶುಕ್ರವಾರ ರಾತ್ರಿ ಮಾನವೀಯತೆ ಇಲ್ಲದ ಕಿಡಿಗೇಡಿಗಳು ಬೋರ್‌ವೆಲ್‌ಗೆ ಹಾಕಲಾದ ಕಬ್ಬಿಣದ ಮುಚ್ಚಳವನ್ನು ಮುರಿದು ಹಾಕಿ ಹಾನಿಗೊಳಿಸಿದ್ದಾರೆ.
ಬೋರ್‌ವೆಲ್ ಮುಚ್ಚಳವನ್ನು ಮುರಿ ಹಾಕಿ ವಿಷಪದಾರ್ಥ ಸೇರಿಸಿರುವ ಬಗ್ಗೆ ಸಾರ್ವಜನಿಕರು ಗುಮಾನಿ ಶಂಕೆಯನ್ನು ಸ್ಥಳೀಯರು ವ್ಯಕ್ತ ಪಡಿಸುತ್ತಿದ್ದಾರೆ. ಈ ಬಗ್ಗೆ ಮುಲ್ಕಿ ಪೊಲೀಸ್ ಠಾಣಾಧಿಕಾರಿ ಅವರು ನಿಪಕ್ಷಪಾತವಾಗಿ ತನಿಖೆ ನಡೆಸಿ ಸೂಕ್ತ ನ್ಯಾಯ ಒದಗಿಸಿ ಪರಿಸರದ ಜನರ ನೀರ ಬವಣೆ ನೀಗಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಬೊಳ್ಳೂರು, ತಾಲೂಕು ಪಂಚಾಯಿತಿ ಸದಸ್ಯ ದಿವಾಕರ ಕರ್ಕೆರ, ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್‌ದಾಸ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ರಾಜು ಕುಂದರ್ ಭೇಟಿ ನೀಡಿದ್ದಾರೆ.
ನೀರಿನ ಅಭಾವವನ್ನು ಪರಿಗಣಿಸಿ ಪಂಚಾಯಿತಿ ಗ್ರಾಮಸ್ಥರಿಗೆ ನೀರು ಒದಗಿಸುವ ತೀರ್ಮಾನ ಕೈಗೊಂಡಿರುವುದು ಶ್ಲಾಘನೀಯ ಆದರೆ ಕಿಡಿಗೇಡಿಗಳ ಕೃತ್ಯ ಖಂಡನೀಯ ಕೆಲವರ ವಿಘ್ನ ಸಂತೋಷದಿಂದಾಗಿ ಇಡೀ ಗ್ರಾಮಸ್ಥರಿಗೆ ನೀರು ಸಿಗದಂತಾಗಿದೆ. ಜಿಲ್ಲಾಡಳಿತ ಹಾಗೂ ಪೋಲೀಸ್ ಇಲಾಖೆ ಈ ಬಗ್ಗೆ ತ್ವರಿತವಾಗಿ ಕ್ರಮ ಕೈಗೊಂಡು ಜನರಿಗೆ ನೀರು ಸದುಪಯೋಗವಾಗುವಂತೆ ನೋಡಿಕೊಳ್ಳಬೇಕು.
ಸ್ಥಳೀಯ ಗ್ರಾಮಸ್ಥರು.
ತೋಕೂರು

Kinnigoli-13041603 Kinnigoli-13041604 Kinnigoli-13041605 Kinnigoli-13041606

 

Comments

comments

Comments are closed.

Read previous post:
Kinnigoli-13041602
ಬಳ್ಕುಂಜೆ ಶಾಲೆ ಶತಮಾನೋತ್ಸವ ಸಮಿತಿ ಸಭೆ

ಕಿನ್ನಿಗೋಳಿ: ಬಳ್ಕುಂಜೆ ಅನುದಾನಿತ ಸಂತ ಪೌಲರ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಸಂಭ್ರಮದಲ್ಲಿದ್ದು ೨೦೧೬ ಡಿಸೆಂಬರ್ ತಿಂಗಳಿನಲ್ಲಿ ಆಚರಣೆ ನಡೆಯಲಿದೆ. ಆ ಪ್ರಯುಕ್ತ ಪ್ರಸಕ್ತ ಸಾಲಿನಲ್ಲಿ ವಿವಿಧ ಯೋಜನೆಗಳನ್ನು...

Close