ಬೀಡಿ ಉದ್ದಿಮೆ ಸ್ಥಗಿತ

beedi_1091825g

ಕಿನ್ನಿಗೋಳಿ: ಕೇಂದ್ರ ಸರಕಾರ ಬೀಡಿ ಉದ್ದಿಮೆಯ ಮೇಲೆ ವಿಧಿಸಿರುವ ನಿಯಮಗಳು ಕಾಂಟ್ರಾಕ್ಟರ್‌ಗಳನ್ನು ಕಂಗೆಡಿಸಿದ್ದು ಬೀಡಿ ಉದ್ದಿಮೆ ಸ್ಥಗಿತಗೊಳಿಸುವಂತಾಗಿದೆ. ಇದರಿಂದಾಗಿ ಕೇಂದ್ರ ಸರಕಾರ ದ.ಕ. ಜಿಲ್ಲೆಯ ಸುಮಾರು 2.5 ಲಕ್ಷ ಬೀಡಿ ಕಾರ್ಮಿಕರನ್ನು ಬೀದಿ ಪಾಲು ಮಾಡಿದೆ ಎಂದು ಕರಾವಳಿ ಬೀಡಿ ಕಾಂಟ್ರಾಕ್ಟರ್‌ದಾರರ ಸಂಘ (ರಿ) ಮಂಗಳೂರು ಇದರ ಉಪಾಧ್ಯಕ್ಷ ಅಬ್ದುಲ್ ಖಾದರ್ ಕಿನ್ನಿಗೋಳಿ ತಿಳಿಸಿದರು.
ಬುಧವಾರ ಕಿನ್ನಿಗೊಳಿಯಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಬೀಡಿ ಪೊಟ್ಟಣದಲ್ಲಿ ಶೇ.85 ಭಾಗ ಆರೋಗ್ಯಕ್ಕೆ ಹಾನಿಕರ ಘೋಶಣೆಯ ವಾಕ್ಯ ಮುದ್ರಿಸಿದರೆ ಬೀಡಿ ಕಂಪೆನಿಗಳ ಹೆಸರು ಬಳಸಲು ಸ್ಥಳಾವಾಕ ಇಲ್ಲದಾಗುತ್ತದೆ. ಅಲ್ಲದೆ, ನಿಗದಿತ ಸಮಯಗಳಲ್ಲಿ ಮಾರಾಟ ಮಾಢುವಂತೆ ಒತ್ತಡ ಏರುತ್ತಿರುವುದು ಬೀಡಿ ಕಾಂಟ್ರಾಕ್ಟರ್‌ಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಈ ಕಾರಣಗಳಿಂದಾಗಿ ಬೀಡಿ ಉದ್ದಿಮೆಯನ್ನೇ ಸ್ಥಗಿತ ಗೊಳಿಸಿಲಾಗಿದೆ ಎಂದರು.
ಬೀಡಿ ಉದ್ದಿಮೆ ಸ್ಥಗಿತ ಗೊಂಡ ಪರಿಣಾಮ ಕಾಂಟ್ರಾಕ್ಟರ್‌ದಾರರು ಅಲ್ಲದೆ, ಬಡ ಬೀಡಿಕಾರ್ಮಿಕರು ಕೆಲಸವಿಲ್ಲದೆ, ಉಪವಾಸ ಮಾಡುವಂತಾಗಿದೆ. ಅಲ್ಲದೆ, ಉದ್ದಿಮೆ ಸ್ಥಗಿತ ಗೊಂಡಿರುವ ಕಾರಣ ದೇಶದಲ್ಲಿ ತಿಂಗಳಿಗೆ 350 ಕೋಟಿ ರೂ. ನಷ್ಟ ಸಂಭವಿಸಿದೆ, ಅವಿಭಜಿತ ದ.ಕ ಜಿಲ್ಲೆಯಾಧ್ಯಂತ ಸುಮಾರು 75 ಲಕ್ಷ ರೂ. ನಷ್ಟ ಸಂಭವಿಸುವಂತಾಗಿದೆ ಎಂದರು.
ಈ ಸಂಬಂಧ ಮಂಗಳೂರಿನಲ್ಲಿ ಈಗಾಗಲೇ ಬೃಹತ್ ಪ್ರತಿಭಟನೆ ಹಮ್ಮಿಕೊಂಡು ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಗಿದೆ. ಈ ವರೆಗೆ ಯಾವುದೇ ಪ್ರತ್ಯತ್ತರ ಬಂದಿರುವುದಿಲ್ಲ ಎಂದು ಆರೋಪಿಸಿರುವ ಅವರು, ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಸಂಪರ್ಕಸಿ ಚರ್ಚಿಸಲಾಗಿದ್ದು, ಸೂಕ್ತ ಪರಿಹಾರ ಕಲ್ಪಿಸುವ ಬಗ್ಗೆ ಭರವಸೆ ನೀಡಲಾಗಿದೆ ಎಂದರು.
ಮುಂದಿನ ಸೋಮವಾರದ ಒಳಗಾಗಿ ಕೇಂದ್ರ ಸರಕಾರ ವಿಧಿಸಿರುವ ಶರತ್ತುಗಳನ್ನು ಹಿಂಪಡೆದುಕೊಂಡು ಬೀಡಿ ಉದ್ದಿಉಮೆ ಗೆ ಅವಕಾಶ ಕಲ್ಪಿಸುವ ಜೊತೆಗೆ ಬಡಬೀಡಿ ಕಾರ್ಮಿಕರ ಕಷ್ಟಕ್ಕೆ ಸ್ಪಂದಿಸುವಂತಾಗ ಬೇಕು ಇಲ್ಲವಾದಲ್ಲಿ, ಪ್ರತೀ ಹಳ್ಳಿ ಗ್ರಮಗಳಲ್ಲಿ ಬೀಡಿ ಕಾರ್ಮಿಕರನ್ನು ಸಂಘಟಿಸಿಕೊಂಡು ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಕೃಷ್ಣ ರೈ, ಎಚ್ ಎಮ್ ಎಸ್ ಸಂಘಟನಾ ರಾಜ್ಯಾಧ್ಯಕ್ಷ ಸುರೇಶ್ ಚಂದ್ರ ಶೆಟ್ಟಿ, ಕಾರ್ಯದರ್ಶಿ ಮುಹಮ್ಮದ್ ಕಲ್ಯಾ, ಕಾರ್ಯಾಧ್ಯಕ್ಷ ಹಮೀದ್ ಅಲಿ, ಕೋಶಾಧಿಕಾರಿ ಬಿ.ಎಂ. ರಫೀಕ್, ಅಹ್ಮದ್ ಬಾವಾ, ಹೈದರ್ ಆಲಿ ಉಪಸ್ಥಿತರಿದ್ದರು.

Comments

comments

Comments are closed.

Read previous post:
Kinnigoli-15041603
ಕಟೀಲು ಆಪ್ ಬಿಡುಗಡೆ

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಪ್‌ನ್ನು ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ ಬಿಡುಗಡೆಗೊಳಿಸಿದರು. ಕಟೀಲು ದೇಗುಲದ ಸೇವೆಗಳ ವಿವರ, ಉತ್ಸವ, ವಿಶೇಷ ದಿನಗಳ ವಿವರಗಳನ್ನೊಳಗೊಂಡಿದೆ ಎಂದು...

Close