ಕಿನ್ನಿಗೋಳಿ ರೋಗ ತಪಾಸಣಾ ಶಿಬಿರ

ಕಿನ್ನಿಗೋಳಿ : ಕರಾವಳಿಯ ದ. ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಬಿಸಿಲು ಹಾಗೂ ವಿಪರೀತ ಸೆಕೆಯ ಕಾರಣ ಹಾಗೂ ನೀರನ್ನು ಕಡಿಮೆ ಕುಡಿಯುವುದರಿಂದ ದೇಹದಲ್ಲಿ ನೀರಿನಂಶ ವ್ಯತ್ಯಯವಾಗಿ ಕಿಡ್ನಿಯಲ್ಲಿ ಕಲ್ಲು ಹಾಗೂ ಮೂತ್ರಕೋಶದ ಸಮಸ್ಯೆಗಳು ಮನುಷ್ಯನಲ್ಲಿ ಕಾಣಿಸುತ್ತದೆ ಹಾಗಾಗಿ ಆರೋಗ್ಯದ ಬಗ್ಗೆ ನಿಗಾ ಅಗತ್ಯ ಎಂದು ಯುರೋಲಜಿ ತಜ್ಞ ಡಾ. ನಿಶ್ಚಿತ್ ಡಿಸೋಜ ಹೇಳಿದರು.
ಗುರುವಾರ ಕಿನ್ನಿಗೋಳಿ ಕನ್ಸೆಟ್ಟಾ ಆಸ್ಪತ್ರೆ, ಸಂಜೀವಿನಿ ಹಾಗೂ ಕಿನ್ನಿಗೋಳಿ ರೋಟರಿ ಕ್ಲಬ್ ಆಶ್ರಯದಲ್ಲಿ ಮೂತ್ರಪಿಂಡ ರೋಗಗಳ ಉಚಿತ ತಪಾಸಣಾ ಶಿಬಿರದಲ್ಲಿ ಮಾಹಿತಿ ನೀಡಿ ಮಾತನಾಡಿದರು.
ಕಿನ್ನಿಗೋಳಿ ರೋಟರಿ ಅಧ್ಯಕ್ಷ ಎಂ. ಬಾಲಕೃಷ್ಣ ಶೆಟ್ಟಿ , ಕಾರ್ಯದರ್ಶಿ ಜೆರಾಲ್ದ್ ಮಿನೇಜಸ್, ರಾಬರ್ಟ್ ರೋಸಾರಿಯೊ, ಮೈಕಲ್ ಪಿಂಟೊ, ಗಂಗಾಧರ ಶೆಟ್ಟಿ, ಕನ್ಸೆಟ್ಟಾ ಆಸ್ಪತ್ರೆ ಮುಖ್ಯಸ್ಥೆ ಡಾ. ಜೀವಿತಾ, ಸಂಜೀವಿನಿಯ ಸಂಯೋಜಕಿ ಭಗಿನಿ ಹೋಪ್, ದಾದಿಯರ ಮೇಲ್ವಿಚಾರಕಿ ಭಗಿನಿ ಸೋಫಿಯ, ಜಯಪಾಲ ಶೆಟ್ಟಿ , ಲಲಿತಾ ಭಾಸ್ಕರ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-19041601

Comments

comments

Comments are closed.

Read previous post:
Kateel-18041601
ಕಟೀಲು ಸಮಿತಿ ಕಾರ್ಯಾಲಯ ಉದ್ಘಾಟನೆ

ಕಿನ್ನಿಗೋಳಿ : ಕಟೀಲು ಶ್ರೀದುರ್ಗಾಪರಮೇಶ್ವರೀ ಅನುದಾನಿತ ಪ್ರಾಥಮಿಕ ಶಾಲೆಯು ಶತಮಾನೋತ್ಸವ ಆಚರಣೆಯಲ್ಲಿದ್ದು ಶತಮಾನೋತ್ಸವ ಸಮಿತಿಯ ಕಾರ್ಯಾಲಯದ ಉದ್ಘಾಟನೆ ಗುರುವಾರ ಕಟೀಲಿನಲ್ಲಿ ನಡೆಯಿತು. ಕಟೀಲು ದೇವಳದ ಮೊಕ್ತೇಸರ ವಾಸುದೇವ...

Close