ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನೆ

ಕಿನ್ನಿಗೋಳಿ : ಅಭಿವೃದ್ಧಿ ಕೆಲಸ ಕಾರ್ಯಗಳು ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ಅನುಷ್ಠಾನಗೊಳಿಸಿದಾಗ ಗ್ರಾಮ ಸಮಗ್ರ ಅಭಿವೃದ್ಧಿ ಹೊಂದುತ್ತದೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನೆ ಮೂಲಕ ಸರಕಾರ ಇಂತಹ ಕಾರ್ಯಗಾರಗಳ ಆಯೋಜನೆ ಮಾಡಿದೆ. ಎಂದು ಎಸ್.ಐ.ಆರ್.ಡಿ. ತರಬೇತುದಾರ ಉಮಾನಾಥ ಶೆಟ್ಟಿ ಹೇಳಿದರು.
ಶನಿವಾರ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಕಿನ್ನಿಗೋಳಿ, ಐಕಳ, ಅತಿಕಾರಿಬೆಟ್ಟು, ಬಳ್ಕುಂಜೆ, ಕಿಲ್ಪಾಡಿ, ಕಟೀಲು , ಮೆನ್ನಬೆಟ್ಟು , ಸೂರಿಂಜೆ, ಕೆಮ್ರಾಲ್, ಚೇಳ್ಯಾರು ಮತ್ತು ಎಕ್ಕಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳ ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನೆ ತಯಾರಿಸಲು ಪ್ರತಿ ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ಗುರುತಿಸಿರುವ ಸಂಪನ್ಮೂಲ ವ್ಯಕ್ತಿಗಳಿಗೆ ತರಬೇತಿ ನೀಡುವ ಕಾಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಪಂಚಾಯಿತಿಗಳಲ್ಲಿ ಸಿಗುವ ಅನುದಾನಗಳನ್ನು ವ್ಯವಸ್ಥಿತ ಹಾಗೂ ಪಾರದರ್ಶಕವಾಗಿ ರೂಪಿಸಿ ಜನರಿಗೆ ಸದುಪಯೋಗವಾಗುವಂತೆ ಗ್ರಾಮಗಳನ್ನು ಅಭಿವೃದ್ಧಿ ಪಡಿಸಬೇಕಾಗಿದೆ ಎಂದು ಸಂಪನ್ಮೂಲ ವ್ಯಕ್ತಿ ಮಂಗಳೂರು ವಲಯ ಅರಣ್ಯಾಧಿಕಾರಿ ಮನೋಹರ್ ಹೇಳಿದರು.
ತಾ. ಪಂ. ಸಹಾಯಕ ನಿರ್ದೇಶಕ ಸದಾನಂದ ಗ್ರಾಮಾಭಿವೃದ್ದಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ಕಾರ್ಯದಶಿಗಳಾದ ಜಲಜ, ರಮೇಶ್ ರಾಥೋಡ್, ದೀಪಿಕಾ, ರಕ್ಷಿತಾ, ನಾಗರತ್ನ, ಕೇಶವ ದೇವಾಡಿಗ, ಯೋಗೀಶ್, ನಿತ್ಯಾನಂದ, ಪ್ರಕಾಶ್ ಬಿ. ಅಬೂಬಕ್ಕರ್ ಮತ್ತಿತರರಿದ್ದರು.
ಸಂಪನ್ಮೂಲ ವ್ಯಕ್ತಿ ರಮ್ಯ ಕಾರ್ಯಕ್ರಮ ನಿರೂಪಿಸಿದರು.

Kinnigoli-19041606

Comments

comments

Comments are closed.