ಅಸ್ಪ್ರಶ್ಯತ ನಿರ್ಮೂಲನ ಅಭಿಯನ

 ಕಿನ್ನಿಗೋಳಿ : ಕುಲ ಕುಲವೆಂದು ಹೊಡೆದಾಡದಿರಿ ಎಲ್ಲರ ಕುಲವೂ ಒಂದೆ ಅದು ಮನುಕುಲ ಎಂದು ಸಾರುತ್ತ ಅಸ್ಪ್ರಶ್ಯತ ನಿರ್ಮೂಲನ ಅಭಿಯನ ದ. ಕ. ಜಿಲ್ಲಾ ಆಡಳಿತ , ಜಿಲ್ಲಾ ಪಂಚಾಯತು , ಮತ್ತು ಉಪ ನಿರ್ದೇಶಕರು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಹಾಗು ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಕಲ್ಯಾಣ ಕಾರ್ಯಕ್ರಮಗಳ ಮಾಹಿತಿ ರಥ ಅಭಿಯಾನ ಸುರತ್ಕಲ್ ಗಿರೀಶ ನಾವಡ ಬಳಗದವರಿಂದ ಮನುಕುಲ ಒಂದೇ ಬೀದಿ ನಾಟಕ ಬುಧವಾರ ಕಿನ್ನಿಗೋಳಿ ಪರಿಸರದಲ್ಲಿ ಜರಗಿತು. ಈ ಅಭಿಯಾನ ರಥವು ದ.ಕ. ಜಿಲ್ಲಾದಂತ್ಯ ಸಂಚರಿಸಲಿದೆ. ಸರಕಾರದ ಸಮಾಜ ಕಲ್ಯಾಣ ಇಲಾಖೆಯ ಕಲ್ಯಾಣ ಯೋಜನೆಗಳಾದ ಅಸ್ಪ್ರಶ್ಯತೆ ನಿವಾರಣೆ, ದೌರ್ಜನ್ಯ ನಿರ್ಮೂಲನ, ಸರಳ ವಿವಾಹ, ಅಂತರ್ಜಾತಿ ವಿವಾಹ, ವಿದ್ಯಾರ್ಥಿ ವೇತನ, ಪ್ರತಿಭಾವಂತರಿಗೆ ಪ್ರೋತ್ಸಹಧನ, ಉಚಿತ ವಾಹನ ತರಬೇತಿ ಮುಂತಾದ ಹಲವು ಯೋಜನೆಗಳ ಮಾಹಿತಿಗಳನ್ನು ನೀಡಲಾಯಿತು.

Kinnigoli-19041602

Comments

comments

Comments are closed.

Read previous post:
Kinnigoli-19041601
ಕಿನ್ನಿಗೋಳಿ ರೋಗ ತಪಾಸಣಾ ಶಿಬಿರ

ಕಿನ್ನಿಗೋಳಿ : ಕರಾವಳಿಯ ದ. ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಬಿಸಿಲು ಹಾಗೂ ವಿಪರೀತ ಸೆಕೆಯ ಕಾರಣ ಹಾಗೂ ನೀರನ್ನು ಕಡಿಮೆ ಕುಡಿಯುವುದರಿಂದ ದೇಹದಲ್ಲಿ ನೀರಿನಂಶ ವ್ಯತ್ಯಯವಾಗಿ ಕಿಡ್ನಿಯಲ್ಲಿ...

Close