ಬಾವಿ ಶುಚಿಗೊಳಿಸಲು ಹೋಗಿ ಇಬ್ಬರು ಅಸ್ವಸ್ಥ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಪಕ್ಷಿಕೆರೆ ಕಾಪಿಕಾಡು ಬಳಿಯ ಮನೆಯೊಂದರಲ್ಲಿ ಬಾವಿ ಶುಚಿಗೊಳಿಸಲು ಮತ್ತು ಪಂಪು ರಿಪೇರಿಗೆ ಇಳಿದಿದ್ದ ನಾಲ್ಕು ಮಂದಿ ಕಾರ್ಮಿಕರು ಉಸಿರುಗಟ್ಟಿ ಅಸ್ವಸ್ಥರಾದ ಘಟನೆ ಶುಕ್ರವಾರ ನಡೆದಿದೆ.
ಮಹಮ್ಮದ್ ಕುಂಜ್ಞಿ ಎಂಬುವರ ಮನೆ ಆವರಣದಲ್ಲಿ ಸುಮಾರು ೫೦ ಅಡಿ ಆಳದ ಬಾವಿಯ ಪಂಪು ರಿಪೇರಿ ಹಾಗೂ ಸ್ವಚ್ಚಗೊಳಿಸಲು ಅವರ ಮಕ್ಕಳಾದ ಮುಹಮ್ಮದ್ ಮತ್ತು ಮುನೀರ್ ಹಾಗೂ ಪಕ್ಕದ ಮನೆಯ ಪೂವಪ್ಪ ಬಾವಿಗೆ ಇಳಿದಿದ್ದು ಆಮ್ಲಜನಕದ ಕೊರತೆಯಿಂದಾಗಿ ಮೇಲೆ ಬರಲಾಗದೆ ಉಸಿರುಗಟ್ಟುತ್ತಿದ್ದುದನ್ನು ನೋಡಿದ ಅಬ್ದುಲ್ ನಝೀರ್ ಎಂಬವರು ಬಾವಿಗೆ ಇಳಿದು ಅವರನ್ನು ಎತ್ತುವ ಪ್ರಯತ್ನ ನಡೆಸಿದರು. ಬಾವಿಯೊಳಗೆ ಆಮ್ಲಜನಕ ಕೊರತೆ ಇದ್ದಕಾರಣ ಕೆಳಗಿಳಿದವರು ಉಸಿರುಗಟ್ಟಿ ಸಹಾಯಕ್ಕಾಗಿ ಕೂಗಿದಾಗ ಸ್ಥಳೀಯರು, ಮುಲ್ಕಿ ಪೋಲೀಸರು ಹಾಗೂ ಅಗ್ನಿಶಾಮಕ ದಳದವರು ಬಂದು ನಾಲ್ಕು ಮಂದಿಯನ್ನು ಪಾರು ಮಾಡಿದ್ದಾರೆ. ತೀವ್ರ ಅಸ್ವಸ್ಥಗೊಂಡ ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Kinnigoli-19041605

Comments

comments

Comments are closed.

Read previous post:
Kinnigoli-19041604
ಡಾ.ಬಿ.ಆರ್.ಅಂಬೇಡ್ಕರ್ 125 ಜನ್ಮ ದಿನಾಚರಣೆ

ಕಿನ್ನಿಗೋಳಿ : ಬಿ.ಜೆ.ಪಿ ಮೂಲ್ಕಿ ಮೂಡಬಿದಿರೆ ಮಂಡಲದ ಆಶ್ರಯದಲ್ಲಿ ಸಂವಿಧಾನ ಶಿಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರ 125 ಜನ್ಮ ದಿನಾಚರಣೆಯನ್ನು ಗುರುವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ...

Close