ಹೋರಾಟಗಾರರಿಗೆ ಮೂಲ್ಕಿಯಲ್ಲಿ ಬಂಧನ

ಮೂಲ್ಕಿ: ಜೀವನಾಡಿಯಾಗಿರುವ ನೇತ್ರಾವತಿ ನದಿಯನ್ನು ಎತ್ತಿನಹೊಳೆ ಯೋಜನೆಯ ಮೂಲಕ ಬತ್ತಿಸುವ ಹುನ್ನಾರವನ್ನು ವಿರೋಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಮಂಗಳೂರಿಗೆ ಬರುವ ಸಂದರ್ಭ ಪ್ರತಿಭಟಿಸಲು ಸಿದ್ದತೆ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ಪೋಲೀಸರು ಸುರತ್ಕಲ್ ಬಳಿ ವಶಕ್ಕೆ ಪಡೆದು ಮೂಲ್ಕಿಯ ಬಪ್ಪನಾಡು ದೇವಸ್ಥಾನದ ಬಳಿಗೆ ತಂದು ಅನ್ನಪೂರ್ಣ ಹಾಲ್‌ನಲ್ಲಿ ಕೂಡಿಹಾಕಿ ಬಂಧಿಸಿದರು. ಪ್ರತಿಭಟನಾಕಾರರು ಪೋಲೀಸರ ಒತ್ತಡಕ್ಕೂ ಜಗ್ಗದೆ ದೇವಳದ ಎದುರು ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಯೋಜನೆಯ ವಿರುದ್ದ ಖಾಲಿ ಕೊಡಪಾನಗಳನ್ನು ಬಡಿದು ಪ್ರತಿಭಟಿಸಿದರು.
ಮೂಲ್ಕಿ ನಿರೀಕ್ಷಕ ರಾಮಚಂದ್ರ ನಾಯ್ಕ್ ರವರು ಪ್ರತಿಭಟನಾಕಾರರನ್ನು ಅನ್ನಪೂರ್ಣ ಹಾಲ್‌ನಲ್ಲಿ ಬಂಧಿಸಿದರು.
ಈ ಸಂದರ್ಭ ಎತ್ತಿನಹೊಳೆ ವಿರೋಧಿ ಹೋರಾಟ ಸಮಿತಿಯ ಪಿ.ಎ.ರಹೀಮ್ , ಸತ್ಯಜೀತ್ ಸುರತ್ಕಲ್,ರಾಮಚಂದ್ರ ಬೈಕಂಪಾಡಿ, ಶಶಿಕಾಂತ ಶೆಟ್ಟಿ ಕೊಳಂಬೆ, ಕೆ.ಎಚ್.ಅಬೂಬಕ್ಕರ್ ಬಂಟ್ವಾಳ, ದಿಲೀಪ ಮುಂಚೂರು ಮತ್ತಿತರರು ಉಪಸ್ಥಿತರಿದ್ದರು.

Kateel-22041604

Comments

comments

Comments are closed.

Read previous post:
Kateel-21041606
ಅತ್ತೂರು-ಕೊಡೆತ್ತೂರು ಗ್ರಾಮ ಮಧ್ಯೆ ತೂಟೆದಾರ

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ವರ್ಷಂಪ್ರತಿ ನಡೆಯುವ ಜಾತ್ರಾ ಮಹೋತ್ಸವ ವೇಳೆ ಚಿನ್ನದ ಪಲ್ಲಕ್ಕಿಯಲ್ಲಿ ಶ್ರೀ ದೇವೀ ಉತ್ಸವ ಮೆರವಣಿಗೆ, ರಥೋತ್ಸವ, ಅತ್ತೂರು ಮತ್ತು ಕೊಡೆತ್ತೂರು...

Close