ಮೌಲ್ಯಾಧಾರಿತ ಶಿಕ್ಷಣ ಅಗತ್ಯ ಯು.ಟಿ. ಖಾದರ್

ಕಿನ್ನಿಗೋಳಿ : ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಸ್ಕಾರ, ಸಹಬಾಳ್ವೆ, ಸರಳತೆ, ದೇಶಪ್ರೇಮವನ್ನು ಬೆಳೆಸುವ ಶಿಕ್ಷಣ ಅಗತ್ಯವಿದೆ. ಹೆಚ್ಚು ಅಂಕ ಗಳಿಸುವುದಷ್ಟೇ ಶಿಕ್ಷಣವಲ್ಲದೆ ಉತ್ತಮ ನಡವಳಿಕೆ ವ್ಯವಹಾರ ಲಕ್ಷಣಗಳನ್ನು ತಿಳಿಸುವ ಮೌಲ್ಯಾಧಾರಿತ ಶಿಕ್ಷಣ ಇಂದಿನ ಕಾಲದಲ್ಲಿ ನೀಡಬೇಕಾಗಿದೆ. ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು. ಟಿ. ಖಾದರ್ ಹೇಳಿದರು.
ಶುಕ್ರವಾರ ನಡೆದ ಕಟೀಲು ಅನುದಾನಿತ ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಶಾಲೆಯ ಹಳೇ ವಿದ್ಯಾರ್ಥಿಗಳಾಗಿದ್ದು, ಉತ್ತಮ ಸಾಧನೆಗೈದ ನಿವೃತ್ತ ನ್ಯಾಯಾಧೀಶ ಬಿ.ಎನ್. ಬಾಲಕೃಷ್ಣ ಶೆಟ್ಟಿ, ನಿವೃತ್ತ ಸೈನ್ಯಾಧಿಕಾರಿ ರಘುಪತಿ ಭಟ್, ನಿವೃತ್ತ ಪ್ರಿನ್ಸಿಪಾಲ್ ಉಮೇಶ ರಾವ್ ಎಕ್ಕಾರು, ಪ್ರಖ್ಯಾತ ವೈದ್ಯ ಸಮಾಜ ಸೇವಕ ಡಾ. ಸುರೇಶ್ ರಾವ್, ಪತ್ರಕರ್ತೆ ವಿಜಯಲಕ್ಷ್ಮೀ ಶಿಬರೂರು, ಖ್ಯಾತ ನಾಗಸ್ವರ ವಾದಕ ಲಿಂಗಪ್ಪ ಸೇರಿಗಾರ, ಶಾಲೆಯ ಕ್ರೀಡಾ ಸಾಧಕರಾದ ಬಾಲಕೃಷ್ಣ ಶೆಟ್ಟಿ, ಶ್ವೇತಾ ಶೆಟ್ಟಿ, ದಿನೇಶ ಗಿಡಿಗೆರೆ, ಅನುಜ್ಞಾ ಭಟ್, ಸುಪ್ರೀತಾ, ಜನ್ನಪ್ಪ, ಸಂತೋಷ, ಸೌಂಯಾ, ಗೀತಾ ಕಲ್ಲಕುಮೇರು, ಮಾನಸ, ಕಾವ್ಯ, ಪ್ರಜ್ಞಾ, ಶ್ರೀವಲ್ಲಿ ಆಸ್ರಣ್ಣ, ಕೃತಿಕಾ, ಅನನ್ಯಾ ಅವರನ್ನು ಸನ್ಮಾನಿಸಲಾಯಿತು.
ಶ್ರೀಧಾಮ ಮಾಣಿಲದ ಮೋಹನದಾಸ ಸ್ವಾಮೀಜಿ, ಶಿಬರೂರು ವೇದವ್ಯಾಸ ತಂತ್ರಿ, ಶಾಸಕ ಮೊಯ್ದಿನ್ ಬಾವಾ, ಮಾಜಿ ಶಾಸಕ ದಯಾನಂದ ರೆಡ್ಡಿ, ಡಾ. ಕದ್ರಿ ಗೋಪಾಲನಾಥ್, ರಾಜೇಶ್ ಚೌಟ, ಕೊಕ್ರಾಡಿ ದೇವೇಂದ್ರ ಹೆಗ್ಡೆ, ವಿರಾರ್ ಶಂಕರ ಶೆಟ್ಟಿ, ಕಟೀಲು ರಾಘವ ಚೌಟ, ಕಟೀಲು ದೇವಳ ಅರ್ಚಕರಾದ ವೆಂಕಟರಮಣ ಆಸ್ರಣ್ಣ, ಕಮಲಾದೇವಿಪ್ರಸಾದ ಆಸ್ರಣ್ಣ, ಕಟೀಲು ಪ್ರಥಮ ದರ್ಜೆ ಕಾಲೇಜು ಪ್ರಿನ್ಸಿಪಾಲ್ ಎಂ. ಬಾಲಕೃಷ್ಣ ಶೆಟ್ಟಿ, ಶಾಲಾ ಶತಮಾನೋತ್ಸವ ಸಮಿತಿ ಕಾರ್ಯಾಧ್ಯಕ್ಷ ಅನಂತ ಪದ್ಮನಾಭ ಆಸ್ರಣ್ಣ ಮತ್ತಿತರರು ಉಪಸ್ಥಿತರಿದ್ದರು. ಸಾಯಿನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-23041608

Comments

comments

Comments are closed.

Read previous post:
ಮಾರಡ್ಕ ದೇವಳ ಎ.24-27 ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ಮಾರಿ ಪೂಜೆ

ಕಿನ್ನಿಗೋಳಿ : ಮಾರಡ್ಕ ಶ್ರೀ ಮಾರಿಯಮ್ಮ ದೇವಳದಲ್ಲಿ ಎ. 24 ರಿಂದ ಎ. 27 ರ ತನಕ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ವರ್ಷಾವಧಿ ಮಾರಿ ಪೂಜೆ ನಡೆಯಲಿದೆ. ಎ. 25 ರಂದು ಪ್ರತಿಷ್ಠಾ...

Close