ಕಟೀಲು ಶತಮಾನೋತ್ಸವ ಉದ್ಘಾಟನೆ

ಕಿನ್ನಿಗೋಳಿ : ಸ್ವಾಭಿಮಾನ ಹಾಗೂ ಸಮಾಜದಲ್ಲಿ ಸಮಾನತೆ ಗಳಿಸಲು ಶಿಕ್ಷಣ ಪೂರಕವಾಗಿದೆ. ಕಟೀಲಿನಂತಹ ಗ್ರಾಮೀಣ ಪ್ರದೇಶದಲ್ಲಿ ಶಾಲೆ ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಕಡಿಮೆ ಖರ್ಚಿನಲ್ಲಿ ವಿದ್ಯಾಬ್ಯಾಸ ನೀಡಿ ಶಾಲೆಯನ್ನು ನಡೆಸುತ್ತಿರುವ ದೇವಳದ ಶ್ರಮ ಅಭಿನಂದನೀಯ ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.
ಕಟೀಲು ದುರ್ಗಾಪರಮೇಶ್ವರೀ ದೇವಳದ ವತಿಯಿಂದ ನಡೆಸಲ್ಪಡುವ ಅನುದಾನಿತ ಶ್ರೀ ದುರ್ಗಾಪರಮೇಶ್ವರೀ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ದ.ಕ. ಸಂಸದ ನಳಿನ್ ಕುಮಾರ್ ಮಾತನಾಡಿ ಡೊನೇಷನ್ ರಹಿತವಾಗಿ ನಡೆಸಲ್ಪಡುತ್ತಿರುವ ಕಟೀಲು ಸಮೂಹ ಶಿಕ್ಷಣ ಸಂಸ್ಥೆಗಳ ಸೇವೆ, ಸಾಧನೆ ಅನನ್ಯ ಎಂದರು.
ಕಟೀಲು ಜಿ.ಪಂ. ಸದಸ್ಯೆ ಕಸ್ತೂರಿ ಪಂಜ, ಕಟೀಲು ಗ್ರಾ.ಪಂ. ಅಧ್ಯಕ್ಷೆ ಗೀತಾ ಸುವರ್ಣ, ಉಪಾಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ಬಡಗ ಎಡಪದವು ಶಾಸ್ತಾವು ಭೂತನಾಥೇಶ್ವರ ದೇವಳದ ಆಡಳಿತ ಮೊಕ್ತೇಸರ ವಿಜಯನಾಥ ವಿಠಲ ಶೆಟ್ಟಿ, ಉದ್ಯಮಿ ಪಾಪ್ಯುಲರ್ ಜಗದೀಶ ಶೆಟ್ಟಿ, ಮುಂಬೈ ಬಂಟರ ಸಂಘದ ಮಾಜಿ ಅಧ್ಯಕ್ಷ ಐಕಳ ಹರೀಶ ಶೆಟ್ಟಿ,
ಮುಂಬೈ ಬಂಟರ ಸಂಘದ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಮಾಜಿ ಅಧ್ಯಕ್ಷ ಐಕಳ ಗಣೇಶ ಶೆಟ್ಟಿ, ಬಜಪೆ ರಾಘವೇಂದ್ರ ಆಚಾರ‍್ಯ, ಬೊಂಡಾಲ ಸತೀಶ್ಚಂದ್ರ ಹೆಗ್ಡೆ, ನಮ್ಮ ಕುಡ್ಲದ ಲೀಲಾಕ್ಷ ಕರ್ಕೇರ, ಬಜಪೆ ರಾಘವೇಂದ್ರ ಆಚಾರ‍್ಯ, ಐಕಳ ಗುಣಪಾಲ ಶೆಟ್ಟಿ, ಜೆ.ಸಿ ಕುಮಾರ್, ಎಕ್ಕಾರು ಕೃಷ್ಣ ಶೆಟ್ಟಿ, ಕಟೀಲು ದೇವಳದ ಮೊಕ್ತೇಸರ ವಾಸುದೇವ ಆಸ್ರಣ್ಣ, ಶತಮಾನೋತ್ಸವ ಸಮಿತಿ ಕಾರ್ಯಾಧ್ಯಕ್ಷ ಅನಂತಪದ್ಮನಾಭ ಆಸ್ರಣ್ಣ, ಕಾರ್ಯದರ್ಶಿ ಈಶ್ವರ ಕಟೀಲ್, ಮುಂಬೈ ಸಮಿತಿಯ ಸಾಂತ್ಯ ಭಾಸ್ಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಕಟೀಲು ದೇವಳ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿದರು. ಶಾಲಾ ಮುಖ್ಯ ಶಿಕ್ಷಕ ಗೋಪಾಲ ಶೆಟ್ಟಿ ವರದಿ ವಾಚಿಸಿದರು. ನಿವೃತ್ತ ಮುಖ್ಯ ಶಿಕ್ಷಕ ವಾಸುದೇವ ಶೆಣೈ ಕಾರ್ಯಕ್ರಮ ನಿರೂಪಿಸಿದರು.
ಕಟೀಲು ಪ್ರಾಥಮಿಕ ಹಾಗೂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ವಿವಿಧ ನೃತ್ಯ ಯಕ್ಷಗಾನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

Kinnigoli-23041605

Comments

comments

Comments are closed.

Read previous post:
Kinnigoli-23041604
ಪಕ್ಷಿಕೆರೆ ಉಚಿತ ನೇತ್ರ ಚಿಕಿತ್ಸಾ ಶಿಬಿರ

ಕಿನ್ನಿಗೋಳಿ : ಜನರು ನಿಯಮಿತವಾಗಿ ವೈದ್ಯಕೀಯ ತಪಾಸಣೆ ಮಾಡಿದಾಗ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಕಸ್ತೂರಿ ಪಂಜ ಹೇಳಿದರು ಕಿನ್ನಿಗೋಳಿ ಸ್ವಾಮಿ ವಿವೇಕಾನಂದ ಸೇವಾ...

Close