ಅಂಗರಗುಡ್ಡೆ ಸೌಹಾರ್ದ ಸಮಾವೇಶ

ಕಿನ್ನಿಗೋಳಿ : ಮಾನವನಲ್ಲಿ ಐಕ್ಯತೆ ಸೌಹಾರ್ಧತೆ ಮೂಡಿಸುವ ದೀವಟಿಕೆಯೇ ಕುರಾನ್ ಇಸ್ಲಾಂ ಜಾತಿಯಲ್ಲ. ಅದು ಆದರ್ಶಮಾತ್ರ. ಕುರ್‌ಆನ್ ಮನುಷ್ಯನನ್ನು ಎಲ್ಲಾ ರೀತಿಯ ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ದೀಪ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯಾಧ್ಯಕ್ಷ ಕೆ.ಎಂ. ಶರೀಫ್ ಹೇಳಿದರು.
ಅಲ್ ಮದ್ರಸತುಲ್ ಬದ್ರಿಯಾ ಜುಮಾ ಮಸೀದಿ ಜಮಾಅತ್ ಕಮಿಟಿ (ರಿ) ಅಂಗರಗುಡ್ಡೆ ಆಶ್ರಯದಲ್ಲಿ 2 ನೇ ವರ್ಷದ ಸೌಹಾರ್ಧ ಸಮಾವೇಶ ಉದ್ಘಾಟಿಸಿ ಮಾತನಾಡಿದರು. .
ಅತ್ರಾಡಿಯ ಸಂಯುಕ್ತ ಖಾಝಿ ಅಲ್ ಹಾಜಿ ಅಬೂಬಕರ್ ಮುಸ್ಲಿಯಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕೃಷ್ಣಾಪುರ ಖಾಝಿ ಅಲ್ ಹಾಜ್ ಇ.ಕೆ. ಇಬ್ರಾಹೀಂ ಮುಸ್ಲಿಯಾರ್ ಮುಖ್ಯ ಪ್ರಭಾಷಣ ಗೈದರು. ಅಸೈಯ್ಯದ್ ಇಬ್ರಾಹೀಂ ಅಲ್ ಹಾದಿ ತಂಙಳ್ ಸ್ವಾಗತಿಸಿ, ಪ್ರಸ್ತಾವಣೆ ಗೈದರು.
ಸೈಯದ್ ಯಾಹ್ಯಾ ತಂಙಳ್ ಪೊಲ್ಯ, ಸೈಯದ್ ಅನಸ್ ತಂಙಳ್ ಗಂಡಿಬಾಗಿಲು, ಸದರ್ ಮುಅಲ್ಲಿಮ್ ಟಿ.ಕೆ.ಇಬ್ರಾಹೀಂ ಮುಸ್ಲಿಯಾರ್, ಇಕ್ಬಾಲ್ ಅಹ್ಮದ್ ಮುಲ್ಕಿ, ಇನಾಯತ್ ಅಲಿ ಮುಲ್ಕಿ, ಎಪಿಎಂಸಿ ಸದಸ್ಯ ಪ್ರಮೋದ್ ಕುಮಾರ್, ರೋಟರಿ ಕಿನ್ನಿಗೋಳಿಯ ಮಾಜಿ ಅಧ್ಯಕ್ಷ ಜೊಸ್ಸಿ ಪಿಂಟೋ, ಉದ್ಯಮಿ ಎಂ. ರಿಜ್ವಾನ್ ಬಪ್ನಾಡ್, ಮುಸ್ತಫಾ, ಎ.ಕೆ.ಅಶ್ರಫ್, ಮುಬಾರಕ್ ಪುನರೂರು, ಮುಮ್ತಾಝ್ ಅಂಗರಗುಡ್ಡೆ, ಶ್ರೀ ರಾಮ ಭಜನಾ ಮಂದಿರದ ಜೀವನ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-23041606

Comments

comments

Comments are closed.

Read previous post:
Kinnigoli-23041605
ಕಟೀಲು ಶತಮಾನೋತ್ಸವ ಉದ್ಘಾಟನೆ

ಕಿನ್ನಿಗೋಳಿ : ಸ್ವಾಭಿಮಾನ ಹಾಗೂ ಸಮಾಜದಲ್ಲಿ ಸಮಾನತೆ ಗಳಿಸಲು ಶಿಕ್ಷಣ ಪೂರಕವಾಗಿದೆ. ಕಟೀಲಿನಂತಹ ಗ್ರಾಮೀಣ ಪ್ರದೇಶದಲ್ಲಿ ಶಾಲೆ ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಕಡಿಮೆ ಖರ್ಚಿನಲ್ಲಿ ವಿದ್ಯಾಬ್ಯಾಸ ನೀಡಿ ಶಾಲೆಯನ್ನು ನಡೆಸುತ್ತಿರುವ...

Close