ಪಕ್ಷಿಕೆರೆ ಉಚಿತ ನೇತ್ರ ಚಿಕಿತ್ಸಾ ಶಿಬಿರ

ಕಿನ್ನಿಗೋಳಿ : ಜನರು ನಿಯಮಿತವಾಗಿ ವೈದ್ಯಕೀಯ ತಪಾಸಣೆ ಮಾಡಿದಾಗ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಕಸ್ತೂರಿ ಪಂಜ ಹೇಳಿದರು ಕಿನ್ನಿಗೋಳಿ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ, ಸಂಚಾರಿ ನೇತ್ರ ಘಟಕ ವೆನ್‌ಲಾಕ್ ಆಸ್ಪತ್ರೆ, ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ ಮಂಗಳೂರು, ಶ್ರೀ ಹರಿಪಾದ ಜಾರಂದಾಯ ಯುವಕ ಮತ್ತು ಯುವತಿ ಮಂಡಲ ಪಂಜ ಕೊಕುಡೆ ಸಹಯೋಗದಲ್ಲಿ ಪಂಜ ಶ್ರೀ ಹರಿಪಾದ ಜಾರಂದಾಯ ಯುವಕ ಮತ್ತು ಯುವತಿ ಮಂಡಲದ ವಠಾರದಲ್ಲಿ ನಡೆದ ಉಚಿತ ನೇತ್ರ ಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದರು.
ಅಂಗಡಿಮಾರು ಕೃಷ್ಣ ಭಟ್ ಶಿಬಿರ ಉದ್ಘಾಟಿಸಿದರು.
ಕಿನ್ನಿಗೋಳಿ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ಅಧ್ಯಕ್ಷ ನಿಡ್ಡೋಡಿ ಚಾವಡಿ ಮನೆ ಜಗನ್ನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಪಂಜ ಶ್ರೀ ಹರಿಪಾದ ಜಾರಂದಾಯ ಯುವಕ ಮಂಡಲದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್, ಯುವತಿ ಮಂಡಲದ ಅಧ್ಯಕ್ಷೆ ಲೋಲಾಕ್ಷಿ, ತಾ.ಪಂ. ಸದಸ್ಯೆ ವಜ್ರಾಕ್ಷಿ ಶೆಟ್ಟಿ, ಪಂಜ ಶ್ರೀ ಹರಿಪಾದ ಜಾರಂದಾಯ ಯುವಕ ಮಂಡಲದ ಗೌರವಾಧ್ಯಕ್ಷ ವಾಸುದೇವ ಭಟ್, ಕೆಮ್ರಾಲ್ ಗ್ರಾ. ಪಂ. ಅಧ್ಯಕ್ಷ ನಾಗೇಶ್, ವೆನ್‌ಲಾಕ್ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ಅನಿಲ್ ಕುಮಾರ್, ಡಾ. ಬಿಂದು ಮತ್ತಿತರರು ಉಪಸ್ಥಿತರಿದ್ದರು.
ಸ್ವಾಮಿ ವಿವೇಕನಂದ ಸೇವಾ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಸೀತಾರಾಮ ಎಳತ್ತೂರು ಕಾರ್ಯಕ್ರಮ ನಿರೂಪಿಸಿ, ದನ್ಯವಾದ ಗೈದರು.

Kinnigoli-23041604

Comments

comments

Comments are closed.

Read previous post:
Kinnigoli-23041603
ನವಚೈತನ್ಯ ಫ್ರೆಂಡ್ಸ್ ಕ್ರಿಕೆಟ್ ಟ್ರೋಫಿ- 2016

ಕಿನ್ನಿಗೋಳಿ: ಗುತ್ತಕಾಡು ನವಚೈತನ್ಯ ಫ್ರೆಂಡ್ಸ್ ವತಿಯಿಂದ 8 ನೇ ವರ್ಷದ ಅಂತರ್ ಜಿಲ್ಲಾ ಮಟ್ಟದ ಕ್ರಿಕೆಟ್ ಟ್ರೋಫಿ- 2016 ಪಂದ್ಯಾಟವನ್ನು ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ...

Close