ಶಾಲಾ ಶತಮಾನೋತ್ಸವ : ಗುರುವಂದನೆ

ಕಿನ್ನಿಗೋಳಿ ; ಜಾತಿ ಮತ ಧರ್ಮ ಬೇಧವಿಲ್ಲದೆ ಹೋಗುವ ಪಾಠ ಶಾಲೆಯೇ ಮಾನವರ ನಿಜವಾದ ದೇಗುಲ ಎಂದು ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಯೋಗಾನಂದ ಸರಸ್ವತೀ ಸ್ವಾಮೀಜಿ ಹೇಳಿದರು.
ಶನಿವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಕೇಂದ್ರ ಸರಕಾರದ ಆರ್ಥಿಕ ಸಮಿತಿಯ ಅಧ್ಯಕ್ಷ ವೀರಪ್ಪ ಮೊಯ್ಲಿ ಮಾತನಾಡಿ ಅಜ್ಞಾನದಿಂದ ಜ್ಞಾನದೆಡೆಗೆ ನಮ್ಮ ಬದುಕು ಸಾಗಬೇಕು. ಮಾತೃಭಾಷೆ ಕನ್ನಡದಲ್ಲಿ ಕಲಿಯುವುದರಿಂದ ಮಕ್ಕಳು ವಿಷಯಗಳನ್ನು ಬೇಗ ಗ್ರಹಿಸುತ್ತಾರೆ. ಮಕ್ಕಳ ಆಸಕ್ತಿಗೆ ತಕ್ಕಂತೆ ಪ್ರೋತ್ಸಾಹ ನೀಡಿ ವಿದ್ಯಾವಂತರನ್ನಾಗಿ ಮಾಡುವುದು ಹೆತ್ತವರ ಕರ್ತವ್ಯ ಎಂದರು.
ಯುವ ಸಬಲೀಕರಣ ಕ್ರೀಡಾ ಮತ್ತು ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿದ್ದರು.
ಕಳೆದ ನೂರು ವರುಷಗಳಲ್ಲಿ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನಲ್ವತ್ತಕ್ಕೂ ಹೆಚ್ಚು ಮುಖ್ಯೋಪಾಧ್ಯಾಯರು, ಶಿಕ್ಷಕರನ್ನು ಹಾಗೂ ಸಾಧಕರು ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭ ೭೦ವರ್ಷ ದಾಟಿದ ಶಾಲೆಯ ಹಳೆಯ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಕಾವೂರು ಆದಿಚುಂಚನಗಿರಿ ಮಹಾಸಂಸ್ಥಾನಂ ಶ್ರೀ ಧರ್ಮಪಾಲನಾಥ ಸ್ವಾಮೀಜಿ, ಪುತ್ತೂರು ಶಾಸಕಿ ಶಕುಂತಲಾ ಶೆಟ್ಟಿ, ದಕ ಜಿಲ್ಲಾ ಸಾಹಿತ್ಯಪರಿಷತ್ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ, ಶಾರದಾ ವಿದ್ಯಾಲಯದ ಎಂ. ಬಿ. ಪುರಾಣಿಕ್, ಅಣ್ಣು ಧೀರಜ್ ಶೆಟ್ಟಿ, ಪದ್ಮನಾಭ ಭಟ್, ಸಂತೋಷ್ ಶೆಟ್ಟಿ, ಯಾದವಕೃಷ್ಣ ಶೆಟ್ಟಿ, ಪದ್ಮನೂರು ನೀಲಯ್ಯ ಶೆಟ್ಟಿಗಾರ್, ಮಧ್ಯ ಮೋಹನ ಶೆಟ್ಟಿ, ಕುಡ್ತಿಮಾರು ಭಾಸ್ಕರ ಶೆಟ್ಟಿ, ಮುಖ್ಯ ಶಿಕ್ಷಕ ಗೋಪಾಲ ಶೆಟ್ಟಿ, ಶತಮಾನೋತ್ಸವ ಸಮಿತಿ ಕಾರ್ಯಾಧ್ಯಕ್ಷ ಅನಂತಪದ್ಮನಾಭ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ ಮತ್ತಿತರಿದ್ದರು.

Kateel-25041601Kateel-25041604 Kateel-25041603

Comments

comments

Comments are closed.

Read previous post:
ಎಪ್ರಿಲ್ 24ರಿಂದ 25 ಕಿನ್ನಿಗೋಳಿ ವಿಶ್ವ ಬ್ರಾಹ್ಮಣ ಸಮಾಜ ಸಂಘದ ತ್ರಿದಶಮಾನೋತ್ಸವ

ಕಿನ್ನಿಗೋಳಿ : ಕಿನ್ನಿಗೋಳಿ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದ ತ್ರಿದಶಮಾನೋತ್ಸವ ಸಮಾರಂಭ ಎಪ್ರಿಲ್ 24 ರಿಂದ 25 ರವರೆಗೆ ಕಿನ್ನಿಗೋಳಿಯ ರಾಜರತ್ನಪುರದ ಸರಾಫ್ ಅಣ್ಣಯಾಚಾರ್ಯ ಸಭಾ ಭವನದಲ್ಲಿ ನಡೆಯಲಿದೆ ಎಂದು...

Close