ಕಿನ್ನಿಗೋಳಿ ಗ್ರಾಮಸಭೆಯಲ್ಲಿ ನೀರಿಗೆ ಹಾಹಕಾರ

ಕಿನ್ನಿಗೋಳಿ: ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಿಡಿ ನೀರಿನ ಅಭಾವ ತೀವ್ರವಾಗುತ್ತಿದ್ದು ಹಾಗೂ ನೆನೆಗುದಿಗೆ ಬಿದ್ದ ೧೭ ಗ್ರಾಮಗಳಿಗೆ ನೀಡಲಾಗುವ ಕಿನ್ನಿಗೋಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಬಗ್ಗೆ ಜಿಲ್ಲಾಡಳಿತ ತ್ವರಿತ ಕ್ರಮಕೈಗೊಳ್ಳದಿರುವ ಬಗ್ಗೆ ಸೋಮವಾರ ಕಿನ್ನಿಗೋಳಿ ಗ್ರಾಮ ಪಂಚಾಯಿತಿಯ 2015-2016ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆಯಲ್ಲಿ ನೀರಿನ ಅಭಾವದ ಬಗ್ಗೆ ಗ್ರಾಮಸ್ಥರು ದನಿಯೆತ್ತಿದರು.
ಆದರೆ ಇಲಾಖಾಧಿಕಾರಿಗಳು ತಡವಾಗಿ ಸಭೆಗೆ ಆಗಮಿಸಿದ್ದು ಗ್ರಾಮಸ್ತಾರ ಆಕ್ರೋಶಕ್ಕೆ ಕಾರಣವಾಗಿತ್ತು.
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ ಅಧ್ಯಕ್ಷತೆ ವಹಿಸಿದ್ದರು. 2011 ರಲ್ಲಿ ಕಾಮಗಾರಿ ಪೂರ್ತಿಗೊಂಡು ಕಿನ್ನಿಗೋಳಿ ಪರಿಸರದ 17 ಗ್ರಾಮಗಳಿಗೆ ನೀರುಪೂರೈಕೆಯಾಗಬೇಕಿದ್ದು 5 ವರ್ಷವಾದರೂ ಯೋಜನೆ ಆರಂಭಕ್ಕೆ ಮೀನಮೇಷ ಆಗುತ್ತದೆ. ಯಾವ ಜನಪ್ರತಿನಿಧಿಗಳು ಹಾಗೂ ಇಲಾಖಾಧಿಕಾರಿಗಳು ಕೇವಲ ಜನರಿಗೆ ಆಶ್ವಾಸನೆ ಕೊಟ್ಟು ಮಂಕುಬೂದಿ ಎಅರಚುತ್ತಾರೆ. ಕಿನ್ನಿಗೋಳಿ ಗ್ರಾಮ ಪಂಚಾಯಿತಿಯ ನಳ್ಳಿ ನೀರು ಬಳಕೆದಾರರಾದ 3 ನೇ ವಾರ್ಡು, ಗೋಳಿಜೋರ, ಎಸ್.ಕೋಡಿ, ತಾಳಿಪಾಡಿ, ಶಾಂತಿಪಲ್ಕೆ ಪರಿಸರದ ಜನರಿಗೆ ನೀರಿನ ಸಮಸ್ಯೆ ಹೆಚ್ಚು ಕಾಡುತ್ತಿದ್ದು ಪರಿಹಾರ ಕಾಣುತ್ತಿಲ್ಲ. ಗ್ರಾಮ ಪಂಚಾಯಿತಿ ಇನ್ನಾದರೂ ಸ್ಪಂದನ ನೀಡಿ ಸಮಸ್ಯೆ ತರುವ ನೀರು ಬಿಡುವವರನ್ನು ಬದಾಲಾಯಿಸಿ ಎಂದು ಮೋಹನ್ ತಿಳಿಸಿದಾಗ ಉತ್ತರಿಸಿದ ಅಧ್ಯಕ್ಷೆ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಿ ಕ್ರಮಕೈಗೊಳ್ಳಲಾಗುವುದು ಎಂದರು. ಸಮಸ್ಯೆ ಪರಿಹಾರ ಮಾಡಿ ಇಲ್ಲವೇ ಟ್ಯಾಂಕರ್ ಮೂಲಕ ನೀರು ಕೊಡಿ ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಎಸ್.ಕೋಡಿಯಲ್ಲಿ ಕಸ ತ್ಯಾಜ್ಯ
ಎಸ್. ಕೋಡಿ ಪರಿಸರದಲ್ಲಿ 100 ಮನೆಗಳ ಅಗ್ರಹಾರವಿದೆ ಹಾಗೂ ಅದರ ಹತ್ತಿರ ಹಲವಾರು ಮನೆ ನಿವೇಶನಗಳು ನಿರ್ಮಾಣಗೊಳ್ಳುತ್ತಿದೆ. ಇಲ್ಲಿನ ಇಂಗು ಗುಂಡಿಯ ಹತ್ತಿರ ಘನ ತ್ಯಾಜ್ಯವನ್ನು ರಸ್ತೆಯ ಪಕ್ಕ ರಾಶಿ ಹಾಕಲಾಗುತ್ತಿದೆ ಕೊಳೆತು ದುರ್ನಾತ ಬೀರುತ್ತಿದೆ. ಈ ಬಗ್ಗೆ ಹಲವು ವರ್ಷಗಳಿಂದ ಪಂಚಾಯಿತಿಗೆ ಮನವಿ ಮಾಡಿದರೂ ಪಂಚಾಯಿತಿ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಯಾಕೆ? ಕಿನ್ನಿಗೋಳಿ ಪೇಟೆಯಲ್ಲಿ ಮಾತ್ರ ಕಸ ವಿಲೇವಾರಿ ಆಗುತ್ತಿದೆ ರಾಜ್ಯ ಹೆದ್ದಾರಿಯ ಸಮೀಪದ ಈ ಪ್ರದೇಶದಲ್ಲಿ ವ್ಯವಸ್ಥೆ ಯಾಕೇ ಮಾಡುತ್ತಿಲ್ಲ ಹಾಗೂ ಎಸ್ . ಕೋಡಿ ಪರಿಸರದಲ್ಲಿ ಕುಡಿಯುವ ನೀರು ಸರಿಯಾಗಿ ಬರುತ್ತಿಲ್ಲ ಸಬೂಬು ನೀಡದೆ ಸಮಸ್ಯೆ ಪರಿಹಾರ ಮಾಡಿ ಎಂದು ಸ್ಥಳೀಯ ರಾಘವೇಂದ್ರ ರಾವ್ ತಿಳಿಸಿದಾಗ ಪಿಡಿಓ ಮಾತನಾಡಿ ಮುಂದಿನ ಆರು ತಿಂಗಳೊಳಗೆ ಕಸತ್ಯಾಜ್ಯ ವಿಲೇವಾರಿ ಘಟಕ ಆರಂಭಿಸಲಾಗುವುದು ಪ್ರಸ್ತುತ ಕಸ ವಿಲೇವಾರಿಗೆ ಸ್ಥಳದ ಸಮಸ್ಯೆ ಇದೆ ಎಂದು ತಿಳಿಸಿದರು.

ಕಿನ್ನಿಗೋಳಿ ಪೇಟೆಯ ದ್ರವ ತ್ಯಾಜ್ಯಗಳು ತೆರೆದ ಚರಂಡಿಯಲ್ಲಿ ಕಿನ್ನಿಗೋಳಿ ಬಿತ್ತುಲ್ ಪರಿಸರದಲ್ಲಿ ಹರಿಯುತ್ತಿರುವುದರಿಂದ ಸೊಳ್ಳೆ ಕಾಟ ಹೆಚ್ಚಾಗಿದೆ. ಫಾಗಿಂಗ್ ಮಾಡಿ ಎಂದು ಅಲ್ಲಿನ ಗ್ರಾಮಸ್ಥರು ಒತ್ತಾಯಿಸಿದಾಗ ಫಾಗಿಂಗ್ ಬೇಕಾದ ಕೆಮಿಕಲ್ ವಿತರಣೆಯಾಗುತ್ತಿಲ್ಲ ಮಲೇರಿಯ ದಂತಹ ಪ್ರಕರಣ ದಾಖಲು ಆಗಿದ್ದರೆ ಮಾತ್ರ ಫಾಗಿಂಗ್ ನೀಡಲಾಗುವುದು ಎಂದು ಆರೋಗ್ಯ ಇಲಾಖಾ ಅಕಾರಿ ತಿಳಿಸಿದರು ಮುಂದಿನ ದಿನಗಳಲ್ಲಿ ಫಾಗಿಂಗ್ ಮಾಡುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ತಾಳಿಪಾಡಿ ಪುನರೂರು ಸಾಗ್ ಬಳಿಯ ಕಾಲು ಸಂಕ ಹಳತಾಗಿದ್ದು ಕಲ್ಲು ಕುಸಿದು ಹೋಗಿ ಶಾಲಾ ಮಕ್ಕಳಿಗೆ ದನಕರುಗಳಿಗೆ ನಡೆದಾಡಲು ಕಷ್ಟವಾಗಿದೆ ಮುಂದಿನ ಮಳೆಗಾಲದಲ್ಲಿ ಅನಾಹುತವಾಗುವ ಮೊದಲು ಸಮಸ್ಯೆ ಬಗೆಹರಿಸಿ ಅಲ್ಲದೆ ಪಕ್ಕದಲ್ಲಿ ನಿರ್ಮಾಣವಾದ ಕಿಂಡಿ ಅಣೆಕಟ್ಟುವಿಗೆ ಕಾಂಕ್ರೀಟ್ ಹಲಗೆಗಳನ್ನು ಇಲಾಖೆ ನೀಡಿತ್ತು ಈ ಸಲದ ಮಳೆಗಾಲದ ಬಳಿಕ ನೀರು ಸಂಗ್ರಹಣೆಗೆಂದು ಹಾಕಿದ ಹಲಗೆಗಳು ಒಂದೇ ದಿನದಲ್ಲಿ ಕೊಚ್ಚಿಹೋಗಿದೆ ಎಂದು ಸ್ಥಳೀಯ ಗ್ರಾಮಸ್ಥ ಆಲ್ವಿನ್ ಪಿರೇರಾ ಪಂಚಾಯಿತಿಯ ಗಮನ ಸೆಳದರು. ಈ ಬಗ್ಗೆ ಪಂಚಾಯತ್ ಗಮನಕ್ಕೆ ಬಂದಿಲ್ಲ ಇಲಾಖೆಯ ಗಮನಕ್ಕೆ ತಂದು ಕಾಲು ಸಂಕ ದುರಸ್ತಿ ಮಾಡಲಾಗುವುದು ಎಂದು ಪಿಡಿಓ ಅರುಣ್ ಪ್ರದೀಪ್ ಡಿಸೋಜ ತಿಳಿಸಿದರು.

ಕಿನ್ನಿಗೋಳಿ ಪುಟ್‌ಪಾತ್ ಸಮಸ್ಯೆ, ಪಾರ್ಕಿಂಗ್ ಸಮಸ್ಯೆ, ಬಸ್ ನಿಲುಗಡೆ ಸಮಸ್ಯೆ ಎಳತ್ತೂರು ಶೌಚಾಲಯ ಕಟ್ಟಿಸಿಕೊಡಿ, ಶಾಂತಿಪಲ್ಕೆ ಅಂಗನವಾಡಿ ಆರಂಭಿಸಿ ಎಂದು ಹಲವು ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು.
ಮಂಗಳೂರು ತಾಲೂಕು ಪಂಚಾಯಿತಿ ಗ್ರಾಮೀಣ ಉದ್ಯೋಗ ಯೋಜನಾಕಾರಿ ಸದಾನಂದ ನೋಡೆಲ್ ಅಕಾರಿಯಾಗಿ ಕಾರ್ಯ ನಿರ್ವಹಿಸಿದರು.

Kinnigoli-25041609

Comments

comments

Comments are closed.

Read previous post:
Kinnigoli-25041608
ಕಿನ್ನಿಗೋಳಿ ಉಚಿತ ಸಾಮೂಹಿಕ ಉಪನಯನ

ಕಿನ್ನಿಗೋಳಿ : ಪುರಾಣ ಕಾಲದಿಂದ ಭಾರತೀಯರು ತಮ್ಮ ಜೀವನದಲ್ಲಿ ಸಂಸ್ಕಾರಗಳನ್ನು ರೂಡಿಸಿ ಆಚರಣೆಗೆ ತಂದುಕೊಂಡ ಸಂಧ್ಯಾ ವಂದನೆಯನ್ನು ತಪ್ಪದೆ ಆಚರಿಸುವುದರಿಂದ ದೇಹ, ಮನಸ್ಸು, ಮತ್ತು ಬುದ್ಧಿ ಶುದ್ದಿಗೊಳ್ಳುತ್ತದೆ. ಎಂದು...

Close