ಕಿನ್ನಿಗೋಳಿ ಉಚಿತ ಸಾಮೂಹಿಕ ಉಪನಯನ

ಕಿನ್ನಿಗೋಳಿ : ಪುರಾಣ ಕಾಲದಿಂದ ಭಾರತೀಯರು ತಮ್ಮ ಜೀವನದಲ್ಲಿ ಸಂಸ್ಕಾರಗಳನ್ನು ರೂಡಿಸಿ ಆಚರಣೆಗೆ ತಂದುಕೊಂಡ ಸಂಧ್ಯಾ ವಂದನೆಯನ್ನು ತಪ್ಪದೆ ಆಚರಿಸುವುದರಿಂದ ದೇಹ, ಮನಸ್ಸು, ಮತ್ತು ಬುದ್ಧಿ ಶುದ್ದಿಗೊಳ್ಳುತ್ತದೆ. ಎಂದು ಪರಮ ಪೂಜ್ಯ ಜಗದ್ಗುರು ಶ್ರೀ ಆನೆಗೊಂದಿ ಸಂಸ್ಥಾನ ಸರಸ್ವತೀ ಪೀಠಾದೀಶ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು
ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸೇವಾ ಸಂಘದ ತ್ರಿದಶಮಾನೋತ್ಸವ ಸಮಾರಂಭ ಹಾಗೂ ತ್ರಿದಶಮಾನೋತ್ಸವ ಸ್ಮಾರಕ ಸಭಾ ಭವನಕ್ಕೆ ಶಿಲಾನ್ಯಾಸ ನೆರವೇರಿಸಿ ಆಶೀರ್ವಚನ ನೀಡಿ ಮಾತನಾಡಿದರು.
ಈ ಸಂದರ್ಭ ವಿಶ್ವಬ್ರಾಹ್ಮಣ ಸಮಾಜದ 42 ಮಂದಿ ವಟುಗಳಿಗೆ ಉಚಿತ ಸಾಮೂಹಿಕ ಉಪನಯನ ನಡೆಯಿತು
ಕಾರ್ಕಳ ಶ್ರೀ ನೆಕ್ಲಜೆ ಕಾಳಿಕಾಂಬಾ ದೇವಳದ ಆಡಳಿತ ಮೊಕ್ತೇಸರ ಹರೀಶ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.
ಕಟಪಾಡಿ ಶ್ರೀ ನಾಗಧರ್ಮೇಂದ್ರ ಸ್ವಾಮಿ ಸೇವಾ ಸಮಿತಿ ಅದ್ಯಕ್ಷ ಪಿ ವಿ ಸುಂದರ್ ಆಚಾರ್ಯ, ಮಂಗಳೂರು ಕಾಳಿಕಾಂಬಾ ವಿನಾಯಕ ದೇವಳ ಮೋಕ್ತೇಸರ ಉದಯಕುಮಾರ್ ಆಚಾರ್ಯ, ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ಅಧ್ಯಕ್ಷ ಶಿಲ್ಪಿ ಶಿವಪ್ರಸಾದ್ ಆಚಾರ್ಯ, ಕಿನ್ನಿಗೋಳಿ ಸರಾಫ್ ಅಣ್ಣಾಯ್ಯಚಾರ್ಯ ಸಭಾಭವನ ಸಮಿತಿ ಅಧ್ಯಕ್ಷ ಎಂ ಪ್ರಥ್ವೀರಾಜ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
ನಂತರ ಜಿಲ್ಲೆಯ ಖ್ಯಾತ ಯಕ್ಷಗಾನ ಕಲಾವಿದರಿಂದ ಯಕ್ಷಗಾನ ನಾಟ್ಯ ವೈಭವ ನಡೆಯಿತು.

Kinnigoli-25041608

Comments

comments

Comments are closed.

Read previous post:
Kinnigoli-25041607
ಶ್ರೀ ಮಾರಿಯಮ್ಮ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

ಕಿನ್ನಿಗೋಳಿ : ಕಿನ್ನಿಗೋಳಿಯ ಮೂರುಕಾವೇರಿ ಸಮೀಪದ ಮಾರಡ್ಕ ಶ್ರೀ ಮಾರಿಯಮ್ಮ ದೇವಳದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಟೀಲು ದೇವಳ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಉಪಸ್ಥಿತಿಯಲ್ಲಿ ಮತ್ತು ಪಂಜ...

Close