ಸುರಗಿರಿ ಮಹಿಳಾ ಮಂಡಲ ವಾರ್ಷಿಕೋತ್ಸವ

ಕಿನ್ನಿಗೋಳಿ : ಆರ್ಥಿಕವಾಗಿ ಶೈಕ್ಷಣಿಕವಾಗಿ ಮಹಿಳೆ ಸಮಾಜದಲ್ಲಿ ಸಾಕಷ್ಟು ಮುಂದುವರಿದರೂ ಶೋಷಣೆಯಿಂದ ಇನ್ನೂ ಮುಕ್ತವಾಗಿಲ್ಲ ಸಂಘಟನಾ ಶಕ್ತಿಯಿಂದ ಸಮಾಜದ ಅಭಿವೃದ್ದಿ ಮಹಿಳೆಯರನ್ನು ಸುಶಿಕ್ಷಿತರನ್ನಾಗಿ ಮಾಡಬಹುದು. ಎಂದು ಮೂಲ್ಕಿ ವಿಜಯಾ ಕಾಲೇಜು ಆಡಳಿತ ಮಂಡಳಿಯ ಶಮೀನ ಆಳ್ವಾ ಹೇಳಿದರು.
ಸೋಮವಾರ ಸುರಗಿರಿಯಲ್ಲಿ ನಡೆದ ಸುರಗಿರಿ ಮಹಿಳಾ ಹಾಗೂ ಯುವತಿ ಮಂಡಲ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭ ಅತ್ತೂರು ಭಂಡಾರ ಮನೆ ಕೃಷಿಕೆ ಲಕ್ಷ್ಮೀಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ದೇವಳದ ಪ್ರಧಾನ ಅರ್ಚಕ ವಿಶ ಭಟ್, ಆಡಳಿತ ಮೊಕ್ತೇಸರ ಸೀತಾರಾಮ ಶೆಟ್ಟಿ , ಪತ್ರಕರ್ತೆ ದೀಪ್ತಿಬಾಲಕೃಷ್ಣ ಭಟ್, ಸುರಗಿರಿ ಯುವಕ ಮಂಡಲ ಅಧ್ಯಕ್ಷ ಸಚಿನ್ ಶೆಟ್ಟಿ , ಬಾಲಾದಿತ್ಯ ಆಳ್ವ ಉಪಸ್ಥಿತರಿದ್ದರು.
ಸುರಗಿರಿ ಯುವತಿ ಮಂಡಲ ಅಧ್ಯಕ್ಷೆ ನಿರ್ಮಲಾ ನಾಯಕ್ ಸ್ವಾಗತಿಸಿದರು. ಗೀತಾ ಬಿ. ಆಳ್ವ ವರದಿ ವಾಚಿಸಿದರು. ಶೋಭಾ ವಂದಿಸಿದರು. ಪ್ರತಿಮಾ ಕಾರ್ಯಕ್ರಮ ನಿರೂಪಿಸಿದರು.

Kinnigoli-26041606

Comments

comments

Comments are closed.

Read previous post:
Kinnigoli-26041605
ಎಳತ್ತೂರು ಪಡ್ಲಕ್ಯಾರ್ ವಾರ್ಷಿಕೋತ್ಸವ

 ಕಿನ್ನಿಗೋಳಿ : ಸಂಘ ಸಂಸ್ಥೆಗಳು ಜನಹಿತ ಕಾಳಜಿ ಮೂಲಕ ಸಮಾಜದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಾಗ ಸಮಾಜದ ಏಳಿಗೆ ಸಾಧ್ಯ ಎಂದು ಉಡುಪಿ ಸಾಯಿರಾಧಾ ಸಮೂಹ ಸಂಸ್ಥೆ ಮಾಲಕ ಮನೋಹರ ಶೆಟ್ಟಿ...

Close