ಎಳತ್ತೂರು ಪಡ್ಲಕ್ಯಾರ್ ವಾರ್ಷಿಕೋತ್ಸವ

 ಕಿನ್ನಿಗೋಳಿ : ಸಂಘ ಸಂಸ್ಥೆಗಳು ಜನಹಿತ ಕಾಳಜಿ ಮೂಲಕ ಸಮಾಜದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಾಗ ಸಮಾಜದ ಏಳಿಗೆ ಸಾಧ್ಯ ಎಂದು ಉಡುಪಿ ಸಾಯಿರಾಧಾ ಸಮೂಹ ಸಂಸ್ಥೆ ಮಾಲಕ ಮನೋಹರ ಶೆಟ್ಟಿ ಹೇಳಿದರು.
ಸೋಮವಾರ ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ನಡೆದ ಎಳತ್ತೂರು ಫ್ರೆಂಡ್ಸ್ ಕ್ಲಬ್ , ಪಡ್ಲಕ್ಯಾರ್ ಇದರ 5 ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭ ಕ್ಷೇತ್ರದ ನಿಕಟಪೂರ್ವ ಅರ್ಚಕ ಬಿ. ನರಸಿಂಹ ಭಟ್, ರಂಗಕರ್ಮಿ ಪುಪ್ಪರಾಜ್ ಶೆಟ್ಟಿ ಶಿಮಂತೂರು ಹಾಗೂ ಜಿ. ಪಂ. ಸದಸ್ಯರಾಗಿ ಆಯ್ಕೆಯಾದ ವಿನೋದ್ ಬೊಳ್ಳೂರು, ತಾ. ಪಂ. ಸದಸ್ಯ ಶರತ್ ಕುಬೆವೂರು, ದಿವಾಕರ ಕರ್ಕೇರ ಅವರನ್ನು ಗೌರವಿಸಲಾಯಿತು ಅಶಕ್ತ ಮಗು ವಿಶಾಲ್ ಕುಟುಂಬ ಹಾಗೂ ದಿ. ಸತೀಶ್ ಶೆಟ್ಟಿ ಕುಟುಂಬಕ್ಕೆ ಆರ್ಥಿಕ ಸಹಾಯ ಹಸ್ತ ನೀಡಲಾಯಿತು.
ಗುತ್ತಕಾಡು ಮಸೀದಿ ಮಾಜಿ ಖತೀಬರಾದ ಪಿ. ಜೆ. ಅಹಮ್ಮದ್ ಮದನಿ, ಪೊಂಪೈ ಪದವಿ ಕಾಲೇಜು ಪ್ರಿನ್ಸಿಪಾಲ್ ಡಾ. ಜೋನ್ ಕ್ಲಾರೆನ್ಸ್ ಮಿರಾಂದ, ಯುಗಪುರುಷ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಎಳತ್ತೂರು ಫ್ರೆಂಡ್ಸ್ ಕ್ಲಬ್ ಗೌರವಾಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ , ಕಿನ್ನಿಗೋಳಿ ಗ್ರಾ. ಪಂ. ಸದಸ್ಯ ಪ್ರಕಾಶ್ ಹೆಗ್ಡೆ, ಮುಂಬಯಿ ಉದ್ಯಮಿ ಉದಯ ಶೆಟ್ಟಿ ಕೆರೆಗುತ್ತು, ದಿನೇಶ್ ಶೆಟ್ಟಿ ತಾಳಿಪಾಡಿಗುತ್ತು ಉಪಸ್ಥಿತರಿದ್ದರು.
ಸಾಹಿತಿ ಶ್ರೀಧರ ಡಿ. ಎಸ್ ಅಭಿನಂದನಾ ಬಾಷಣಗೈದರು. ಶಶಿಕಾಂತ್ ರಾವ್ ಸ್ವಾಗತಿಸಿ ಶ್ಯಾಮಸುಂದರ ಶೆಟ್ಟಿ ವಂದಿಸಿದರು. ದಿವಾಕರ್ ಕಾರ್ಯಕ್ರಮ ನಿರೂಪಿಸಿದರು.

Kinnigoli-26041605

Comments

comments

Comments are closed.

Read previous post:
Kinnigoli-26041604
ಪರಿಶ್ರಮ ಸಂಘಟನೆ – ಸ್ವಾಭಿಮಾನದ ಸಮಾಜ

ಕಿನ್ನಿಗೋಳಿ : ಒಗ್ಗಟ್ಟು ಪರಿಶ್ರಮ ಸಂಘಟನೆಯಿಂದ ವಿಶ್ವಬ್ರಾಹ್ಮಣ ಸಮಾಜ ಸ್ವಾಭಿಮಾನದ ಸಮಾಜವನ್ನು ಕಟ್ಟಿಕೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಜಗದೀಶ ಶೆಟ್ಟರ್ ಹೇಳಿದರು. ಕಿನ್ನಿಗೋಳಿ ವಿಶ್ವಬ್ರಾಹ್ಮಣ...

Close