ಶ್ರೀ ನಾಗ ಪ್ರತಿಷ್ಠಾ ವಾರ್ಷಿಕ ವರ್ಧಂತ್ಯುತ್ಸವ

ಮೂಲ್ಕಿ: ಭಕ್ತಿ ಶೃದ್ಧೆಯಿಂದ ನಡೆಯುವ ಎಲ್ಲಾ ಕಾರ್ಯಗಳಲ್ಲಿ ದೇವರ ದಯೆ ಲಭಿಸುವ ಪರಿಣಾಮ ಉತ್ತರೋತ್ತರ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದು ಆಗಮ ಶಾಸ್ತ್ರ ವಿದ್ವಾಂಸ ಪಂಜ ಭಾಸ್ಕರ ಭಟ್ ಹೇಳಿದರು. ಮೂಲ್ಕಿ ಕವತ್ತಾರು ಗುಡ್ಡೆ ಅಂಗಡಿಯ ದೇವಾಡಿಗ ಸಮಾಜದ ಅಡ್ಯರಣ್ಣ ಮೂಲಸ್ಥಾನದಲ್ಲಿ ಬುಧವಾರ ನಡೆದ ಶ್ರೀ ನಾಗ ಪ್ರತಿಷ್ಠಾ ವಾರ್ಷಿಕ ವರ್ಧಂತ್ಯುತ್ಸವ, ಧರ್ಮ ದೇವತೆಗಳ ನೇಮೋತ್ಸವ, ನಾಗ ಗುಡಿಗೆ ಮೇಲ್ಛಾವಣಿಯ ಸಮರ್ಪಣೆ ಮತ್ತು ನಾಮ ಫಲಕ ಅನಾವರಣ ಕಾರ್ಯಕ್ರಮ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಉಡುಪಿ ಬಡಗು ಪೇಟೆಯ ಶ್ರೀ ವಾಸುಕಿ ಅನಂತಪದ್ಮನಾಭ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಕಾಂತ ಸಾಮಗರವರು ಆಶೀರ್ವಚನ ನೀಡಿ ಸತ್‌ಕಾರ್ಯವು ಶೀಘ್ರ ಉತ್ತಮ ಫಲ ನೀಡುತ್ತದೆ. ಸ್ವಾರ್ಥ ರಹಿತ ಭಕ್ತಿಗೆ ದೇವರು ಅತೀ ಬೇಗ ಮೆಚ್ಚುತ್ತಾನೆ ಇದಕ್ಕೆ ನಿದರ್ಶನವಾಗಿ ಈ ಕ್ಷೇತ್ರ ಸಣ್ಣ ಅವಧಿಯಲ್ಲಿ ಬೆಳೆದು ನಿಂತಿರುವುದು ಸಾಕ್ಷಿಯಾಗಿದೆ ಎಂದರು.
ಈ ಸಂದರ್ಭ ನಾಗ ಕ್ಷೇತ್ರದ ಮೇಲ್ಛಾವಣಿಯ ದಾನಿ ಮಲ್ಲಿಕಾ ನಾರಾಯಣ ದೇವಾಡಿಗ ದೀಪ ಬೆಳಗಿಸಿ ದೇವರಿಗೆ ಸಮರ್ಪಿಸಿದರು. ಅವರನ್ನು ಕ್ಷೇತ್ರದ ವತಿಯಿಂದ ಸನ್ಮಾನಿಸಲಾಯಿತು. ಸಭಾಗ್ರಹ ದಾನಿಗಳಾದ ಗೋಪಾಲ ಮೊಲಿ ದಂಪತಿ, ವೇದಿಕೆಯ ದಾನಿ ದಿ. ಮಂಜು ದೇವಾಡಿಗಾ ರವರ ಪರವಾಗಿ ಅವರ ಪತ್ನಿ ಅಮ್ಮಣ್ಣಿ ಮಂಜು ದೇವಾಡಿಗ ,ಶ್ರಂಗಾರ ಕೊಟಡಿಯದಾನಿ ಸೀತಾ ಶಿವ ಶ್ರೀಯಾನ್ ಮುಂಬೈ, ಇಂಜಿನಿಯರ್ ಸಂದೀಪ್.ಆರ್ ದೇವಾಡಿಗಾ ರವರನ್ನು ಗೌರವಿಸಲಾಯಿತು.
ಅತಿಥಿಗಳಾಗಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅರ್ಚಕ ಶ್ರೀಪತಿ ಉಪಾದ್ಯಾಯ,ಕಾರ್ನಾಡು ಶ್ರೀ ಹರಿಹರ ಕ್ಷೇತ್ರದ ಆಡಳಿತ ಮೊಕ್ತೇಸರ ಎಂ.ಎಚ್.ಅರವಿಂದ ಪೂಂಜಾ,ಅಖಿಲ ಭಾರತ ತುಳು ಕೂಟ ಮುಂಬೈ ಅಧ್ಯಕ್ಷ ಧರ್ಮಪಾಲ ಯು. ದೇವಾಡಿಗ, ಮುಂಬೈ ದೇವಾಡಿಗರ ಸಂಘದ ಅಧ್ಯಕ್ಷ ವಾಸು.ಎಸ್.ದೇವಾಡಿಗ,ಉದ್ಯಮಿ ಎಚ್.ಮೋಹನ್ ದಾಸ್ ಮುಂಬೈ , ಕ್ಷೇತ್ರದ ಗೌ.ಅಧ್ಯಕ್ಷ ಗಣೇಶ್ ದೇವಾಡಿಗ,ಉಪಾಧ್ಯಕ್ಷ ಶಿವಾಜಿ ದೇವಾಡಿಗ ಚಿತ್ರಾಪುರ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ವೈ.ಸ್ಯಾಮ ಮೊಲಿ ಪಣಿಯೂರು,ಉಪಾಧ್ಯಕ್ಷ ವೆಂಕಪ್ಪ ದೇವಾಡಿಗ ಮಾನಂಪಾಡಿ,ಪ್ರಧಾನ ಕಾರ್ಯದರ್ಶಿಗಳಾದ ಸಂಜೀವ ದೇವಾಡಿಗ ಮತ್ತು ಅಶೋಕ್ ಕುಮಾರ್ ಹೆಜಮಾಡಿ,ಉಪಸ್ಥಿತರಿದ್ದರು. ಕವತ್ತಾರು ಅಡ್ಯರಣ್ಣ ಮೂಲಸ್ಥಾನದ ಅಧ್ಯಕ್ಷ ಸಂಜೀವ ಮೊಲಿ ವಾಮಂಜೂರು ಅಧ್ಯಕ್ಷತೆ ವಹಿಸಿದ್ದರು.
ಸಂಜೀವ ಮೊಲಿ ಸ್ವಾಗತಿಸಿದರು.ಬಿ.ಅಶೋಕ್ ಕುಮಾರ್ ಹೆಜ್ಮಾಡಿ ನಿರೂಪಿಸಿದರು. ಮೀರಾ ಬೈ ಪಾವಂಜೆ ವಂದಿಸಿದರು.

Mulki-27041601

Comments

comments

Comments are closed.

Read previous post:
Kinnigoli-26041608
ಎಳತ್ತೂರು ಹಗಲು ರಥೋತ್ಸವ

ಕಿನ್ನಿಗೋಳಿ: ಮಂಗಳವಾರ ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಜಾತ್ರೆಯ ಅಂಗವಾಗಿ ಹಗಲು ರಥೋತ್ಸವ ನಡೆಯಿತು.

Close