ಪಕ್ಷಿಕೆರೆ – ಸಹಾಯ ಹಸ್ತ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಪಕ್ಷಿಕೆರೆ -ಪಂಜ ಕಾಪಿಕಾಡು ನಿವಾಸಿ ಪೂವಪ್ಪ ಅವರು ಕೆಲವು ದಿನಗಳ ದಿಂದ ಆಕಸ್ಮಿಕವಾಗಿ ಮೃತ ಪಟ್ಟಿದ್ದು ಪೂವಪ್ಪ ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ತಲಾ ಒಂದು ಲಕ್ಷರೂ.ಗಳ ಚೆಕ್ಕನ್ನು ಸ್ಥಳೀಯ ನಿವಾಸಿ ಮಹಮ್ಮದ್ ಕುಂಜ್ಞಿ ಗುರುವಾರ ಹಸ್ತಾಂತರಿಸಿದರು. ಈ ಸಂಧರ್ಭ ಬಸ್ಸು ಮಾಲಕರ ಸಂಘದ ಅಧ್ಯಕ್ಷ ದುರ್ಗಾಪ್ರಸಾದ್ ಹೆಗ್ಡೆ, ಬಸ್ಸು ಚಾಲಕ ನಿರ್ವಾಹಕರ ಸಂಘದ ಅಧ್ಯಕ್ಷ ಭಾಸ್ಕರ ಪೂಜಾರಿ, ಗೌರವಾಧ್ಯಕ್ಷ ಕೆ. ಭುವನಾಭಿರಾಮ ಉಡುಪ, ನ್ಯಾಯವಾದಿ ಶಶಿಧರ ಅಡ್ಕತ್ತಾಯ, ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಎಮ್. ಅಂಚನ್, ಕೆಮ್ರಾಲ್ ಗ್ರಾ. ಪಂ. ಸದಸ್ಯರಾದ ಮಯ್ಯದ್ದಿ ಪಕ್ಷಿಕೆರೆ, ಪ್ರಮೀಳಾ ಶೆಟ್ಟಿ , ಜಯರಾಮ ಆಚಾರ್ಯ, ಸೇಸಪ್ಪ, ಮಾಜಿ. ಜಿ. ಪಂ. ಸದಸ್ಯ ಈಶ್ವರ್ ಕಟೀಲ್, ಕೋರ‍್ದಬ್ಬು ದೈವಸ್ಥಾನದ ಅಧ್ಯಕ್ಷ ಶೀನ ಸ್ವಾಮಿ , ಗುಲಾಂ ಹುಸೈನ್, ರಮೇಶ್, ಕೋನಿ, ಸುಲೈಮಾನ್, ರಾಜೇಶ್ ಮೂಡಬಿದಿರೆ, ಮಹಮ್ಮದ್ ಮತ್ತಿತರರಿದ್ದರು.

Kinnigoli-28041603

Comments

comments

Comments are closed.

Read previous post:
Kinnigoli-28041602
ಕಟೀಲು ಸಾಮೂಹಿಕ ವಿವಾಹ

ಕಿನ್ನಿಗೋಳಿ : ಉಚಿತ ಸಾಮೂಹಿಕ ಮದುವೆಗಳಿಂದ ಸಮಾಜದ ಬಡ ಕುಟುಂಬಗಳಿಗೆ ಸಹಾಯವಾಗಬಲ್ಲುದು. ಇಂತಹ ಪುಣ್ಯ ಕಾರ್ಯ ನಿರಂತರ ನಡೆಯಬೇಕು ಎಂದು ಮೂಡಬಿದಿರೆ ಉದ್ಯಮಿ ನಾರಾಯಣ ಪಿ. ಎಂ. ಹೇಳಿದರು....

Close