ಯುವಕ ಮಂಡಲ 46ನೇ ವಾರ್ಷಿಕೋತ್ಸವ

ಕಿನ್ನಿಗೋಳಿ : ಯುವ ಜನತೆ ಸಂಘ ಸಂಸ್ಥೆಗಳ ಜೊತೆಗೆ ಕೈ ಜೋಡಿಸಿ ಗ್ರಾಮದ ಸಮಾಜದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕು ಕಿನ್ನಿಗೋಳಿ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ಅಧ್ಯಕ್ಷ ನಿಡ್ಡೋಡಿ ಚಾವಡಿ ಮನೆ ಜಗನ್ನಾಥ ಶೆಟ್ಟಿ ಹೇಳಿದರು.
ಸುರಗಿರಿ ಶ್ರೀ ಮಹಾಲಿಂಗೇಶ್ವರ ಜಾತ್ರೆ ಪ್ರಯುಕ್ತ ಸುರಗಿರಿ ಯುವಕ ಮಂಡಲದ ೪೬ ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭ ಕೋಡು ಗುರುರಾಜ ಭಟ್ ಪ್ರಶಸ್ತಿಯನ್ನು ಹಿರಿಯ ಧಾರ್ಮಿಕ ಮುಂದಾಳು ವೈ. ಯೋಗೀಶ್ ರಾವ್ ಅವರಿಗೆ ನೀಡಲಾಯಿತು.
ವೇಣೂರು ಸಾಮಾಜಿಕ ಕಾರ್ಯಕರ್ತ ಕೃಷ್ಣ ಕಾರಂತ, ಐಕಳ ಪೊಂಪೈ ಪದವಿ ಕಾಲೇಜು ಉಪನ್ಯಾಸಕ ಜಗದೀಶ ಹೊಳ್ಳ , ಸುರಗಿರಿ ದೇವಳ ಆಡಳಿತ ಮೊಕ್ತೇಸರ ಸೀತಾರಾಮ ಶೆಟ್ಟಿ , ಸುರಗಿರಿ ಯುವಕ ಮಂಡಲ ಅಧ್ಯಕ್ಷ ಸಚಿನ್ ಶೆಟ್ಟಿ, ಸುರಗಿರಿ ಯುವತಿ ಮಂಡಲ ಅಧ್ಯಕ್ಷೆ ನಿರ್ಮಲ ವಿ. ನಾಯಕ್, ಕಿನ್ನಿಗೋಳಿ ಯಕ್ಷಲಹರಿ ಅಧ್ಯಕ್ಷ ಪಿ. ಸತೀಶ್ ರಾವ್ ಉಪಸ್ಥಿತರಿದ್ದರು.
ಕೃಷ್ಣರಾಜ್ ಭಟ್ ಸ್ವಾಗತಿಸಿದರು. ದಯಾನಂದ ಶೆಟ್ಟಿ ವರದಿ ವಾಚಿಸಿದರು. ಧೀರಜ್ ಶೆಟ್ಟಿ , ಅಜಯ್ ಕುಮಾರ್ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಅರ್ಪಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಜನಾರ್ದನ ಕಿಲೆಂಜೂರು ವಂದಿಸಿದರು.

Kinnigoli 28041601

Comments

comments

Comments are closed.

Read previous post:
Mulki-27041601
ಶ್ರೀ ನಾಗ ಪ್ರತಿಷ್ಠಾ ವಾರ್ಷಿಕ ವರ್ಧಂತ್ಯುತ್ಸವ

ಮೂಲ್ಕಿ: ಭಕ್ತಿ ಶೃದ್ಧೆಯಿಂದ ನಡೆಯುವ ಎಲ್ಲಾ ಕಾರ್ಯಗಳಲ್ಲಿ ದೇವರ ದಯೆ ಲಭಿಸುವ ಪರಿಣಾಮ ಉತ್ತರೋತ್ತರ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದು ಆಗಮ ಶಾಸ್ತ್ರ ವಿದ್ವಾಂಸ ಪಂಜ ಭಾಸ್ಕರ ಭಟ್...

Close