ಕಟೀಲು ಸಾಮೂಹಿಕ ವಿವಾಹ

ಕಿನ್ನಿಗೋಳಿ : ಉಚಿತ ಸಾಮೂಹಿಕ ಮದುವೆಗಳಿಂದ ಸಮಾಜದ ಬಡ ಕುಟುಂಬಗಳಿಗೆ ಸಹಾಯವಾಗಬಲ್ಲುದು. ಇಂತಹ ಪುಣ್ಯ ಕಾರ್ಯ ನಿರಂತರ ನಡೆಯಬೇಕು ಎಂದು ಮೂಡಬಿದಿರೆ ಉದ್ಯಮಿ ನಾರಾಯಣ ಪಿ. ಎಂ. ಹೇಳಿದರು.
ಬುಧವಾರ ಸಂಜೆ ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಟ್ರಸ್ಟ್ ಹಾಗೂ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಅಭಿನಂದನಾ ಸಮಿತಿ ಕಟೀಲು ಆಶ್ರಯದಲ್ಲಿ ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸಭಾಭವನದಲ್ಲಿ ನಡೆದ 8 ನೇ ವರ್ಷದ ಸಾಮೂಹಿಕ ವಿವಾಹ ಸಮಾರಂಭದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಸುಲೋಚನಾ ಪದ್ಮಶಾಲಿ ಮುಂಬಯಿ ಕಾರ್ಯಕ್ರಮ ಉದ್ಘಾಟಿಸಿದರು.
ಬಂಟ್ವಾಳದ ರಮೇಶ್ ಹಾಗೂ ಪುಷ್ಪ, ಕಾರ್ಕಳದ ದಿನೇಶ್ ಹಾಗೂ ಉಷಾ, ಸುಳ್ಯದ ಜನಾರ್ದನ ಹಾಗೂ ಶೇಷಮ್ಮ, ಮಂಗಳೂರಿನ ರವಿ ಹಾಗೂ ಸಂಧ್ಯಾ, ತಿರುವೈಲಿನ ಆನಂದ ಹಾಗೂ ಪೂರ್ಣಿಮಾ, ಮಡಿಕೇರಿಯ ಪ್ರತೀಶ್ ಹಾಗೂ ಲೋಲಾಕ್ಷಿ , ಮಂಗಳೂರಿನ ಸಂತೋಷ್ ಹಾಗೂ ಶಶಿಕಲಾ ಒಟ್ಟು 7 ಜೋಡಿಗಳಿಗೆ ಮದುವೆ ನಡೆಯಿತು. ಮುಂಬಯಿ ಉದ್ಯಮಿ ಐಕಳ ಗುಣಪಾಲ ಶೆಟ್ಟಿ, ಮುಂಬಯಿ ಉದ್ಯಮಿ ಕೇಶವ ಅಂಚನ್, ಮೈಸೂರು ಸೆಂಟ್ರಲ್ ಇನ್ನರ್‌ವೀಲ್ ಚಂದ್ರಿಕಾ ಸುಧೀರ್, ಧರ್ಮದರ್ಶಿ ಹರಿಕೃಷ್ಣ ಪುನರೂರು, ಮೂಡಬಿದಿರೆ ಉದ್ಯಮಿ ಶ್ರೀಪತಿ ಭಟ್, ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಗೋಪಾಲಕೃಷ್ಣ ಆಸ್ರಣ್ಣ, ದೇವಪ್ರಸಾದ್ ಪುನರೂರು, ಮೋಹನ್ ಮೆಂಡನ್ ಮತ್ತಿತರರು ಉಪಸ್ಥಿತರಿದ್ದರು.
ಸಂಘಟಕ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಸ್ವಾಗತಿಸಿದರು. ಪಿ. ಸತೀಶ್ ರಾವ್ ವಂದಿಸಿದರು. ರಮ್ಯ ರವಿತೇಜ್ ಕಾರ್ಯಕ್ರಮ ನಿರೂಪಿಸಿದರು.

Kinnigoli-28041602

Comments

comments

Comments are closed.

Read previous post:
Kinnigoli 28041601
ಯುವಕ ಮಂಡಲ 46ನೇ ವಾರ್ಷಿಕೋತ್ಸವ

ಕಿನ್ನಿಗೋಳಿ : ಯುವ ಜನತೆ ಸಂಘ ಸಂಸ್ಥೆಗಳ ಜೊತೆಗೆ ಕೈ ಜೋಡಿಸಿ ಗ್ರಾಮದ ಸಮಾಜದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕು ಕಿನ್ನಿಗೋಳಿ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ಅಧ್ಯಕ್ಷ ನಿಡ್ಡೋಡಿ ಚಾವಡಿ...

Close