ಕ್ರೀಡೆಯಿಂದ ಶಾರೀರಿಕ ಬೆಳವಣಿಗೆ ಸಾದ್ಯ

ಮೂಲ್ಕಿ: ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ,ಕ್ರೀಡಾಭಾವನೆಯನ್ನು ಮೈಗೂಡಿಸಿಕೊಂಡು ಪಂದ್ಯಗಳಲ್ಲಿ ಭಾಗವಹಿಸಬೇಕು.ಕ್ರೀಡೆಯಿಂದ ಶಾರೀರಿಕ ಬೆಳವಣಿಗೆ ಸಾದ್ಯ ಎಂದು ಕ್ರೀಡಾ ಸಚಿವ ಅಭಯಚಂದ್ರ ಹೇಳಿದರು.

ಫ್ರೆಂಡ್ಸ್ ಕಿಲ್ಪಾಡಿ ಮೂಲ್ಕಿ ಇದರ ಆಶ್ರಯದಲ್ಲಿ ನಡೆದ ಕ್ರಿಕೆಟ್ ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಮೂಲ್ಕಿ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಗೋಪೀನಾಥ ಪಡಂಗ ವಹಿಸಿದ್ದರು. ಕಿಲ್ಪಾಡಿ ಕಲ್ಲಾಪುವಿನ ನಾರಾಯಣ ಭಟ್ ಆಶೀರ್ವಚನ ನೀಡಿದರು. ವೇದಿಕೆಯಲ್ಲಿ ಮೂಲ್ಕಿ ನ.ಪಂ. ಸದಸ್ಯರಾದ ಹರ್ಷರಾಜ ಶೆಟ್ಟಿ, ಪುತ್ತುಬಾವ, ಕುಳಾಯಿ ಬಷೀರ್, ಉದ್ಯಮಿ ರಂಗನಾಥ ಶೆಟ್ಟಿ, ಕಿಲ್ಪಾಡಿ ಪಂಚಾಯತಿ ಸದಸ್ಯರಾದ ಶರೀಫ್ ಕಿಲ್ಪಾಡಿ, ಮನೋಹರ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು. ಫ್ರೆಂಡ್ಸ್ ಕಿಲ್ಪಾಡಿಯ ಶಂಕರ್ ಪಡಂಗ ಸ್ವಾಗತಿಸಿದರು, ಚಿದಾನಂದ ಕೊಲೆಕಾಡಿ ಕಾರ್ಯಕ್ರಮ ನಿರೂಪಿಸಿದರು.

Kateel-02051603

Comments

comments

Comments are closed.

Read previous post:
Kateel-02051602
ಕಟೀಲು 120 ದಾಖಲೆ ಮದುವೆ

ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಭಾನುವಾರ ದೇವಸ್ಥಾನದ ಎದುರು ಪ್ರಾಗಾಂಣದಲ್ಲಿ 101  ಮದುವೆ ಹಾಗೂ ದೇವಸ್ಥಾನದ ಪಕ್ಕದಲ್ಲಿರುವ 7 ಎಳು ಹಾಲ್‌ಗಳಲ್ಲಿ 19 ಮದುವೆ ನಡೆದಿದೆ....

Close