ಸುಂದರ ರಾಮ ಶೆಟ್ಟಿ ಸಮಾಜಕ್ಕೆ ದೊಡ್ಡ ಕೊಡುಗೆ

ಮೂಲ್ಕಿ: ಸುಂದರ ರಾಮ ಶೆಟ್ಟಿ ಅವರು ಸಮಾಜಕ್ಕೆ ದೊಡ್ಡ ಕೊಡುಗೆಯಾಗಿದ್ದು ವಿಜಯ ಬ್ಯಾಂಕ್ ಸ್ಥಾಪಿಸುವ ಮೂಲಕ ಹಲವಾರು ಬಡ ಕುಟುಂಬಗಳಿಗೆ ಆಧಾರ ಸ್ಥಂಭವಾಗಿದ್ದರು ಅವರಿಂದ ಪ್ರಯೋಜನ ಪಡೆದವರು ಸಮಾಜಕ್ಕೆ ಕೊಡುಗೆ ನೀಡುವ ಮೂಲಕ ಅವರು ಖುಣ ತೀರಿಸುವ ಕಾರ್ಯ ಮಾಡಬೇಕೆಂದು ನಿಟ್ಟೆ ವಿ ವಿ ಕುಲಪತಿ ಡಾ ಎನ್ ವಿನಯ ಹೆಗ್ಡೆ ಹೇಳಿದರು.
ಮೂಲ್ಕಿ ಸುಂದರ ರಾಮ ಶೆಟ್ಟಿ ಸ್ಮಾರಕ ಚಾರಿಟೇಬಲ್ ಟ್ರಸ್ತ್ ಆಶ್ರಯದಲ್ಲಿ ಮೂಲ್ಕಿ ಸುಂದರ ರಾಮ್ ಶೆಟ್ಟಿಯವರ 101 ನೇ ಜನ್ಮ ದಿನಾಚರಣೆ ಮೂಲ್ಕಿ ಕೊಲ್ನಾಡುವಿನ ರಾಷ್ತ್ರೀಯ ಹೆದ್ದಾರಿ ಬಳಿ ನಿರ್ಮಾಣವಾಗಲಿರುವ ಮೂಲ್ಕಿ ಸುಂದ ರಾಮ್ ಶೆಟ್ಟಿ ಕನ್ವೆನ್ಷನ್ ಹಾಲ್ ನ ನಿಯೋಜಿತ ಸೈಟ್ ನಲ್ಲಿ ಜರಗಿದ ಮೂಲ್ಕಿ ಸುಂದರ ರಾಮ ಶೆಟ್ಟಿ ಅವರ 101ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಸುಂದರ ರಾಮ ಶೆಟ್ಟಿಯವರ ನೆನಪು ಸದಾ ಉಳಿಯುವ ನಿಟ್ಟಿನಲ್ಲಿ ಅವರ ಹೆಸರಿನಲ್ಲಿ ಸಭಾಂಗಣ ಸೇರಿದಂತೆ ಸುಮಾರು 35 ಕೋಟಿ ವೆಚ್ಚದ ಯೋಜನೆಯನ್ನು ಹಮ್ಮಿಕೊಂಡಿದ್ದು ಇದಕ್ಕೆ ಸಮಾಜದ ಎಲ್ಲರ ಸಹಕಾರ ಅಗತ್ಯವೆಂದು ಹೇಳಿದರು.
ಆರ್ ಎನ್ ಶೆಟ್ಟಿ ಸಮೂಹ ಸಂಸ್ಥೆಯ ಮುಖ್ಯಸ್ಥ ಡಾ ಆರ್ ಎನ್ ಶೆಟ್ಟಿ ಉದ್ಘಾಟಿಸಿದರು.
ಮುಂಬೈ ಆಲ್ ಕಾರ್ಗೊ ಲಾಜಿಸ್ತಿಕ್ ಲಿಮಿಟೆಡ್ ಡಾ ಶಶಿ ಕಿರಣ್ ಶೆಟ್ಟಿ, ಬೆಂಗಳೂರು ಎಂ ಆರ್ ಸಿ ಗ್ರೂಫ್ ಕೆ ಪ್ರಕಾಶ್ ಶೆಟ್ಟಿ, ವಿಜಯ ಬ್ಯಾಂಕ್ ನಿವೃತ್ತ ಆಡಳಿತ ನಿರ್ದೇಶಕ ಕೆ ಸದಾನಂದ ಶೆಟ್ಟಿ, ದೇರಳಕಟ್ಟೆ ನಿಟ್ಟೆ ವಿ ವಿ ಉಪ ಕುಲಪತಿ ಡಾ ಕೆ ಶಾಂತರಾಮ್ ಶೆಟ್ಟಿ, ರಾಜ್ಯ ಯುವಜನ ಮತ್ತು ಮೀನುಗಾರಿಕಾ ಸಚಿವ ಕೆ ಅಭಯಚಂದ್ರ ಜೈನ್, ಪಡಪಣಂಬೂರು ಪಂಚಾಯಿತಿ ಅಧ್ಯಕ್ಷ ಮೋಹನ್ ದಾಸ್, ಬೆಳಗಾಂ ರಾಮ್ ದೇವ್ ಹೋಟೇಲ್ ರಘರಾಮ ಕೆ ಶೆಟ್ಟಿ, ಮಂಗಳೂರು ಬಂಟರ ಯಾಣೆ ನಾಡವರ ಸಂಘದ ಮಾಜಿ ಅಧ್ಯಕ್ಷ ಶ್ರೀನಾಥ ಹೆಗ್ಡೆ ಮತ್ತಿತರರು ಉಅಪಸ್ಥಿತರಿದ್ದರು.
ಏರ್ಯ ಬಾಲಕೃಷ್ಣ ಹೆಗ್ಡೆ ಸ್ವಾಗತಿಸಿದರು. ಟ್ರಸ್ತ್ ಕಾರ್ಯದರ್ಶಿ ರವಿರಾಜ್ ಶೆಟ್ಟಿ ವಂದಿಸಿದರು. ನವೀನ್ ಶೆಟ್ಟಿ ಎಡ್ಮೆ ಮಾರು ನಿರೂಪಿಸಿದರು.

Mulki-30041601 Mulki-30041602 Mulki-30041603

Comments

comments

Comments are closed.

Read previous post:
Kinnigoli-30041601
ಮಚ್ಚಾರಿನಲ್ಲಿ ಯಕ್ಷಗಾನದ ಕಲಾವಿದರಿಗೆ ಸನ್ಮಾನ

ಕಟೀಲು:  ಮಚ್ಚಾರಿನಲ್ಲಿ ನಡೆದ ಕಟೀಲು ಮೇಳದ ಯಕ್ಷಗಾನದ ಸಂದರ್ಭ ಕಲಾವಿದರಾದ ಕುಬಣೂರು ಶ್ರೀಧರ ರಾವ್, ರವಿಶಂಕರ ವಳಕ್ಕುಂಜ, ವಿಷ್ಣು ಶರ್ಮ, ಉಮಾಮಹೇಶ್ವರರನ್ನು ಸಂಮಾನಿಸಲಾಯಿತು. ಈ ಸಂದರ್ಭ ಕಟೀಲು...

Close