ಕೆರೆಕಾಡು ಧಾರ್ಮಿಕ ಸಭೆ

ಕಿನ್ನಿಗೋಳಿ: ತುಳುನಾಡಿನ ದೈವಾರಾಧನೆ ಹಾಗೂ ಜನಪದೀಯ ಆಚರಣೆಗಳು ಗ್ರಾಮೀಣ ಪರಿಸರದ ಜನರಲ್ಲಿ ಹಾಸು ಹೊಕ್ಕಾಗಿದ್ದು ಇದರಿಂದ ಸೌಹಾರ್ದಯುತ ಜೀವನ ನೆಲೆ ಕಂಡಿದೆ ಎಂದು ಯುವಜನ ಕ್ರೀಡಾ ಹಾಗೂ ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು.
ಕಿನ್ನಿಗೋಳಿ ಸಮೀಪದ ಕೆರೆಕಾಡು ಶ್ರೀ ಕೋಟೆ ಬಬ್ಬು ದೈವಸ್ಥಾನದ ವಾರ್ಷಿಕ ನೇಮ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಈ ಸಂದರ್ಭ ಶಾಸಕರ ನಿಧಿಯಿಂದ ದೈವಸ್ಥಾನದ ಅಂಗಳಕ್ಕೆ ಹಾಕಿರುವ ಇಂಟರ್‌ಲಾಕ್ ಉದ್ಘಾಟಿಸಲಾಯಿತು.
ಕಚ್ಚೂರು ಶ್ರೀ ಬಬ್ಬು ಸ್ವಾಮಿ ಕ್ಷೇತ್ರ ಗೌರವಾಧ್ಯಕ್ಷ ಚೆನ್ನಪ್ಪ ಅಧ್ಯಕ್ಷತೆ ವಹಿಸಿದ್ದರು.
ಕಿಲ್ಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಕಾಂತ್ , ಉದ್ಯಮಿ ಶ್ರೀನಾಥ್, ಮೂಲ್ಕಿ ನಗರ ಪಂ. ಮಾಜಿ ಅಧ್ಯಕ್ಷ ಬಿ. ಎಂ. ಅಸೀಫ್, ದೈವಸ್ಥಾನ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಪರಮೇಶ್ವರ ಸುವರ್ಣ ಉಪಸ್ಥಿತರಿದ್ದರು.
ದೈವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ರೋನಾಲ್ದ್ ಡಿಸೋಜ ಸ್ವಾಗತಿಸಿದರು. ರವೀಂದ್ರ ಕುಮಾರ್ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.

Kinnigoli-03051605

Comments

comments

Comments are closed.

Read previous post:
Kinnigoli-03051604
ಗುತ್ತಕಾಡು- ನ್ಯೂಸ್ಟಾರ್ ಟ್ರೋಫಿ- 2016

ಕಿನ್ನಿಗೋಳಿ: ಗುತ್ತಕಾಡು -ಶಾಂತಿನಗರ ಶಾಲಾ ಮೈದಾನದಲ್ಲಿ ನ್ಯೂ ಸ್ಟಾರ್ ಕ್ರಿಕೆಟರ್ಸ್ಆಶ್ರಯದಲ್ಲಿ ನಡೆದ ಚತುರ್ಥ ವರ್ಷದ ಕ್ರಿಕೆಟ್ ಪಂದ್ಯಾಟ ನ್ಯೂಸ್ಟಾರ್ ಟ್ರೋಫಿ- 2016 ಜೈಮಾತ ಕುಳಾಯಿ ತಂಡ ಟ್ರೋಫಿ ಪಡೆದು...

Close