ಗುತ್ತಕಾಡು- ನ್ಯೂಸ್ಟಾರ್ ಟ್ರೋಫಿ- 2016

ಕಿನ್ನಿಗೋಳಿ: ಗುತ್ತಕಾಡು -ಶಾಂತಿನಗರ ಶಾಲಾ ಮೈದಾನದಲ್ಲಿ ನ್ಯೂ ಸ್ಟಾರ್ ಕ್ರಿಕೆಟರ್ಸ್ಆಶ್ರಯದಲ್ಲಿ ನಡೆದ ಚತುರ್ಥ ವರ್ಷದ ಕ್ರಿಕೆಟ್ ಪಂದ್ಯಾಟ ನ್ಯೂಸ್ಟಾರ್ ಟ್ರೋಫಿ- 2016 ಜೈಮಾತ ಕುಳಾಯಿ ತಂಡ ಟ್ರೋಫಿ ಪಡೆದು ಕೊಂಡಿತು. ಗ್ರೀನ್‌ಸ್ಟಾರ್  ಕ್ರಿಕೆಟರ್ಸ್  ಗುತ್ತಕಾಡು ದ್ವಿತೀಯ ಪ್ರಶಸ್ತಿ ಪಡೆದು ಕೊಂಡಿತು. ಜೈಮಾತ ತಂಡದ ಸಚಿನ್ ಹಾಗೂ ಯತೀಶ್ ಉತ್ತಮ ಎಸೆತಗಾರ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು ತಾ. ಪಂ. ಸದಸ್ಯ ದಿವಾಕರ ಕರ್ಕೇರಾ ಪ್ರಶಸ್ತಿ ವಿತರಿಸಿದರು. ಗುತ್ತಕಾಡು -ಶಾಂತಿನಗರ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾರಾಯಣ ಪೂಜಾರಿ, ಬಿಜೆಪಿ ಅಲ್ಪ ಸಂಖ್ಯಾತರ ಯುವಮೋರ್ಚಾ ಅಧ್ಯಕ್ಷ ಅಬ್ದುಲ್ ಬಶೀರ್, ಗುತ್ತಿಗೆದಾರ ಟಿ. ಎ. ಹನೀಫ್, ಇಮ್ರಾನ್, ಉದ್ಯಮಿ ಸುಭಾಷ್, ಅಬಕಾರಿ ಅಧಿಕಾರಿ ರಜಾಕ್, ಇಮ್ರಾನ್ ಗುತ್ತಕಾಡು, ಅಧ್ಯಕ್ಷ ಹಫೀಝ್, ಗೌರವಾಧ್ಯಕ್ಷ ಸೌಫಲ್, ರಮೀಝ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-03051604

Comments

comments

Comments are closed.

Read previous post:
Kinnigoli-03051603
ಎಳತ್ತೂರು ಕೋರ್ದಬ್ಬು ನೇಮ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಎಳತ್ತೂರು ಕೋರ್ದಬ್ಬು ದೈವಸ್ಥಾನ ನೇಮದ ಸಂದರ್ಭ ಕಳೆದ 50 ವರ್ಷಗಳಿಂದ ದೈವದ ಆರಾಧನೆ ನಡೆಸಿಕೊಂಡು ಬಂದಿರುವ ನಾಥು ಮುಖಾರಿ ಅವರನ್ನು ಬಂಗಾರದ ಬಳೆ...

Close