ಸತ್ಯನಿಷ್ಠ ಚಿಂತನೆಯಿಂದ ಸಮಾಜದ ಅಭಿವೃದ್ದಿ

ಕಿನ್ನಿಗೋಳಿ: ದೇವರ ಮೇಲಿನ ನಂಬಿಕೆಯ ಆಚರಣೆಗಳು, ಶ್ರದ್ಧಾ ಭಕ್ತಿ, ಪ್ರಾಮಾಣಿಕತೆ, ಸತ್ಯನಿಷ್ಠ ಚಿಂತನೆ ಹಾಗೂ ಸಮಾಜಮುಖಿ ಕಾರ್ಯಗಳಿಂದ ಸಮಾಜ ಅಭಿವೃದ್ದಿ ಹೊಂದುವುದು ಎಂದು ಯುವಜನ ಕ್ರೀಡಾ ಹಾಗೂ ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು.
ಕಿನ್ನಿಗೋಳಿ ಸಮೀಪದ ಮಾರಡ್ಕ ಶ್ರೀ ಮಾರಿಯಮ್ಮ ದೇವಳದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ವರ್ಷವಾಧಿ ಮಾರಿಪೂಜೆ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಟೀಲು ದೇವಳ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಆಶೀರ್ವಚನಗೈದರು. ಕಟೀಲು ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜು ಪ್ರಿನ್ಸಿಪಾಲ್ ಎಮ್. ಬಾಲಕೃಷ್ಣ ಶೆಟ್ಟಿ ಧಾರ್ಮಿಕ ಉಪನ್ಯಾಸ ನೀಡಿದರು.
ಈ ಸಂದರ್ಭ ರಾಜ್ಯ ಮಟ್ಟದ ಪ್ರಶಸ್ತಿ ವಿಜೇತೆ ಗೀತಾ ಎಸ್. ಪಾಂಗಳ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ದ.ಕ. ಜಿ.ಪಂ. ಮಾಜಿ ಸದಸ್ಯ ಈಶ್ವರ್ ಕಟೀಲ್, ಕಿನ್ನಿಗೋಳಿ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ಅಧ್ಯಕ್ಷ ನಿಡ್ಡೋಡಿ ಚಾವಡಿಮನೆ ಶ್ರೀ ಜಗನ್ನಾಥ ಶೆಟ್ಟಿ, ದ.ಕ ಜಿ. ಪಂ. ಸದಸ್ಯೆ ಕಸ್ತೂರಿ ಪಂಜ, ತಾ.ಪಂ. ಸದಸ್ಯೆ ಶುಭಲತಾ ಶೆಟ್ಟಿ, ಮೆನ್ನಬೆಟ್ಟು ಗ್ರಾ.ಪಂ. ಅಧ್ಯಕ್ಷೆ ಸರೋಜಿನಿ ಗುಜರನ್, ಉಪಾಧ್ಯಕ್ಷ ಮೋರ್ಗನ್ ವಿಲಿಯಂ, ಮೆನ್ನಬೆಟ್ಟು ಗ್ರಾ.ಪಂ. ಸದಸ್ಯರಾದ ಸುನಿಲ್ ಸಿಕ್ವೇರಾ, ಸುಶೀಲಾ, ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಉದ್ಯಮಿಗಳದ ಡೊಲ್ಪಿ ಸಾಂತುಮಯೋರ್, ಧನಂಜಯ ಶೆಟ್ಟಿಗಾರ್, ಪುನರೂರು ಮಸೀದಿ ಎಸ್.ಎಸ್.ಎಫ್ ಅಧ್ಯಕ್ಷ ಅಶ್ರಫ್ ರಝ ಅಮ್ಜಾಧಿ, ಇಂಜೀನಿಯರ್ ರಿಜ್ವಾನ್ ಅಹಮದ್ ಪುನರೂರು ಉಪಸ್ಥಿತರಿದ್ದರು.
ಮಾರಡ್ಕ ಶ್ರೀ ಮಾರಿಯಮ್ಮ ದೇವಳ ಸಮಿತಿ ಅಧ್ಯಕ್ಷ ರೋನಾಲ್ಡ್ ಡಿಸೋಜ ಸ್ವಾಗತಿಸಿದರು. ಪತ್ರಕರ್ತ ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli--03051609

Comments

comments

Comments are closed.

Read previous post:
Mulki 03051608
ಶ್ರಿಂಗೇರಿ ಸಿರಿಮನೆ ಜಲಪಾತ ಅಭಿಯಾನ

ಮೂಲ್ಕಿ: ಮೂಲ್ಕಿ ವಿಜಯಾ ಕಾಲೇಜಿನ ಎನ್‌ಸಿಸಿ ನೌಕಾದಳ ಕ್ಯಾಡೆಟ್‌ಗಳು ಶ್ರಿಂಗೇರಿ ಬಳಿಯ ಸಿರಿಮನೆ ಜಲಪಾತಕ್ಕೆ ಒಂದು ದಿನದ ಅಭಿಯಾನವನ್ನು ಕಾಲೇಜು ನೌಕಾದಳದ ಅಧಿಕಾರಿ ಲೆಪ್ಟಿನೆಂಟ್ ಹೆಚ್.ಜಿ.ನಾಗರಾಜ ನಾಯಕ್...

Close