ಶಿಮಂತೂರು ತೋರಣ-ಉಗ್ರಾಣ ಮುಹೂರ್ತ

ಮೂಲ್ಕಿ: ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಪ್ರಕ್ರಿಯೆಯಿಂದ ಸಾನಿಧ್ಯ ವೃದ್ಧಿಯಾಗುವ ಕಾರಣ ಭಕ್ತರಿಗೆ ಸಂಪೂರ್ಣ ಅನುಗ್ರಹ ದೊರೆಯುವ ಜೊತೆಗೆ ಮಳೆ ಬೆಳೆ ಸಮೃದ್ಧಿಯಾಗಿ ಸರ್ವತ್ರ ಶಾಂತಿ ನೆಮ್ಮದಿ ಉಂಟಾಗಲಿದೆ ಎಂದು ಶ್ರೀ ಕ್ಷೇತ್ರ ಕಟೀಲಿನ ಅರ್ಚಕರಾದ ಅನಂತಪದ್ಮನಾಭ ಅಸ್ರಣ್ಣ ಹೇಳಿದರು.
ಶಿಮಂತೂರು ಶ್ರೀ ಆದಿ ಜನಾರ್ದನ ದೇವಳದಲ್ಲಿ ಸಹಸ್ರ ಪರಿಕಲಶ ಅಷ್ಟಬಂಧ ಬ್ರಹ್ಮಕಲಶಾಭಿಷೇಕದ ಪೂರ್ವಭಾವಿಯಾಗಿ ಬುಧವಾರ ನಡೆದ ತೋರಣ ಮುಹೂರ್ತ ಹಾಗೂ ಉಗ್ರಾಣ ಮುಹೂರ್ತ ಹಾಗೂ ಅಗ್ನಿಜನ್ಯಕ್ರೀಯೆಯ ಸಂದರ್ಭ ಹಮ್ಮಿಕೊಳ್ಳಲಾದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅಸ್ರಣ್ಣರು ಆಶೀರ್ವಚಿಸಿದರು.
ಸಮಾರಂಭದ ಮುಖ್ಯ ಅತಿಥಿ ಮೂಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು ಮಾತನಾಡಿ, ತುಳುನಾಡಿನ ಇತಿಹಾಸದಲ್ಲಿ ಶಿಮಂತೂರು ದೇವಳಕ್ಕೆ ಐತಿಹಾಸಿಕ ಹಿನ್ನೆಲೆಯಿದೆ. ಪರಶುರಾಮ ಸೃಷ್ಠಿಯಲ್ಲಿ ನಿರ್ಮಾಣಗೊಂಡ ಪುರಾತನ ದೇವಾಲಯವು ಬಹಳ ಪ್ರಸಿದ್ದಿಯನ್ನು ಪಡೆದಿದ್ದು ವಿಶ್ವದಾದ್ಯಂತ ಭಕ್ತರನ್ನು ಹೊಂದಿದೆ ಎಂದರು.
ಕಾರ್ನಾಡು ಶ್ರೀ ಹರಿಹರ ಕ್ಷೇತ್ರದ ಆಡಳಿತ ಮೊಕ್ತೇಸರ ಎಮ್.ಎಚ್.ಅರವಿಂದ ಪೂಂಜಾ ಮಾತನಾಡಿ, ವಿವಿಧ ಧಾರ್ಮಿಕ ಸಾಮಾಜಿಕ ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಸಹಕರಿಸುವ ಶಿಮಂತೂರು ದೇವಳವು ಅವಿಭಜಿತ ದ.ಕ. ಜಿಲ್ಲೆಯ ಎಲ್ಲಾ ದೇವಳಗಳಿಗೆ ಮಾದರಿಯಾಗಿದೆ ಎಂದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಉದಯ ಬಿ. ಶೆಟ್ಟಿ ಮಾತನಾಡಿ, ಗ್ರಾಮದ ಒಗ್ಗಟ್ಟು, ಏಕತೆ, ಪ್ರತೀಕವಾಗಿ ನಡೆಯುವ ಬ್ರಹ್ಮಕಲಶೋತ್ಸವದಲ್ಲಿ ಇಡೀ ಗ್ರಾಮವೇ ಒಂದಾಗಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಶ್ರಮಿಸುತ್ತಾ ಬಂದಿದೆ ಎಂದರು.
ವಿಶ್ವ ಬಂಟರ ಸಂಘದ ಉಪಾಧ್ಯಕ್ಷ ಐಕಳ ಹರೀಶ್ ಶೆಟ್ಟಿ,ಬಪ್ಪನಾಡು ದೇವಳದ ಆಡಳಿತ ಮೊಕ್ತೇಸರ ಎನ್.ಎಸ್.ಮನೋಹರ ಶೆಟ್ಟಿ, ದೇವಳದ ಆಡಳಿತಾಧಿಕಾರಿ ವಾಣಿ ಆಳ್ವ, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಜಯ ಎ. ಶೆಟ್ಟಿ, ಅರ್ಚಕ ಎ. ಶ್ರೀನಿವಾಸ ಭಟ್, ಮುಂಬೈ ಉದ್ಯಮಿಗಳಾದ ಶೇಕರ್ ಶೆಟ್ಟಿ, ಸುಧಾಕರ ಹೆಗ್ಡೆ ಆದಿಧನ್, ಪಾಂಡು ಕೆ.ಶೆಟ್ಟಿ, ಮತ್ತು ಸಾಹಿತಿ ಎನ್.ಪಿ. ಶೆಟ್ಟಿ, ಉದಯಕುಮಾರ್ ಶೆಟ್ಟಿ ಆದಿಧನ್ ಮತ್ತಿತರರು ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿ ಸದಸ್ಯ ಚಂದ್ರಹಾಸ ಸುವರ್ಣ ಸ್ವಾಗತಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ವಿಶ್ವನಾಥ್ ರಾವ್ ಕಾರ್ಯಕ್ರಮ ನಿರ್ವಹಿಸಿದರು.
ಶ್ರೀ ದೇವಳದ ತಂತ್ರಿಗಳಾದ ಬ್ರಹ್ಮಶ್ರೀ ಶಿಬರೂರು ವೇದವ್ಯಾಸ ತಂತ್ರಿ ತೋರಣ ಮುಹೂರ್ತ ಹಾಗೂ ಉಗ್ರಾಣ ಮುಹೂರ್ತದ ವಿಧಿವಿಧಾನ ನೆರವೇರಿಸಿದರು. Kinnigoli-05051601

Comments

comments

Comments are closed.

Read previous post:
Kinnigoli-04051601
ಸಂಘಟನೆ ಮೂಲಕ ಸಮಾಜದ ಅಭಿವೃದ್ಧಿ

ಕಿನ್ನಿಗೋಳಿ: ಸಂಘಟನೆ ಮೂಲಕ ಸ್ಪಂದಿಸಿ ಸಮಾಜದ ಅಭಿವೃದ್ಧಿಗೆ ಸಹಕರಿಸಬೇಕು. ಎಂದು ಮುಂಬಯಿ ಉದ್ಯಮಿ ಐಕಳ ಹರೀಶ್ ಶೆಟ್ಟಿ ಹೇಳಿದರು. ಮಂಗಳವಾರ ಕಿನ್ನಿಗೋಳಿ ಸಮೀಪದ ಮೂರುಕಾವೇರಿ ಶ್ರೀ ಮಹಾಮ್ಮಾಯೀ ದೇವಳದ...

Close