ಶಿಮಂತೂರು ಕ್ಷೇತ್ರ ಮಹಾತ್ಮೆ ಯಕ್ಷಗಾನ

ಮೂಲ್ಕಿ: ಯಕ್ಷಗಾನ ಪ್ರಸಂಗಗಳು ಕ್ಷೇತ್ರದ ಮಹಾತ್ಮೆಯನ್ನು ಪ್ರಚಾರ ಪಡಿಸುವುದರೊಂದಿಗೆ ಯುವ ಪೀಳಿಗೆಗೆ ಕ್ಷೇತ್ರದ ಪಾವಿತ್ರತೆಯ ಬಗ್ಗೆ ಮಾಹಿತಿಯನ್ನು ನೀಡುತ್ತದೆ ಎಂದು ಅಂತರಾಷ್ಟ್ರೀಯ ಕಬ್ಬಡಿ ಪಟು ಜಯ ಶೆಟ್ಟಿ ಶಿಮಂತೂರು ಹೇಳಿದರು.
ಶಿಮಂತೂರು ಶ್ರೀ ಅದಿ ಜನಾರ್ಧನ ದೇವಳದಲ್ಲಿ ಜರಗಲಿರುವ ಅಷ್ಟಬಂದ ಬ್ರಹ್ಮ ಕಲಶೋತ್ಸವ ಸಮಾರಂಭದ ಪ್ರಯುಕ್ತ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ಕೃಪಾ ಪೋಷಿತ ಯಕ್ಷಗಾನ ಮಂಡಳಿ ಅವರಿಂದ ನಡೆದ ಶಿಮಂತೂರು ಕ್ಷೇತ್ರ ಮಹಾತ್ಮೆ ಯಕ್ಷಗಾನದ ಚೊಚ್ಚಲ ಪ್ರದರ್ಶನದ ಸಂದರ್ಭ ಯಕ್ಷಗಾನದ ಕಥೆ, ಛಂದಸ್ಸು ಹಾಗೂ ತರಬೇತಿ ನೀಡಿದ ಮಹನೀಯರನ್ನು ಸನ್ಮಾನಿಸಿ ಮಾತನಾಡಿದರು.
ಗ್ರಾಮಸ್ಥರು ಯಕ್ಷಗಾನ ಪ್ರಸಂಗವನ್ನು ವೀಕ್ಷಿಸಿ ಅದರಲ್ಲಿ ನ್ಯೂನ್ಯತೆಗಳು ಮತ್ತು ವಿಷಯ ಸೇರ್ಪಡೆಯ ಬಗ್ಗೆ ಮಾಹಿತಿ ನೀಡಬೇಕು ಎಂದರು.
ಈ ಸಂದರ್ಭ ಯಕ್ಷಗಾನದ ಕತೆ ಬರೆದ ಶಿಮಂತೂರು ಚಂದ್ರಹಾಸ ಸುವರ್ಣ, ಪ್ರಸಂಗ ರಚಿಸಿದ ಸಾಹಿತಿ ಎನ್.ಪಿ.ಶೆಟ್ಟಿ, ಹಾಗೂ ತರಬೇತಿ ನೀಡಿದ ಬಲ್ಲಿರೇನಯ್ಯ ಪತ್ರಿಕೆಯ ಸಂಪಾದಕ ತಾರಾನಾಥ ವರ್ಕಾಡಿ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಎನ್.ಪಿ.ಶೆಟ್ಟಿ ಪ್ರಥಮ ಪ್ರದರ್ಶನದಲ್ಲಿ ಯಾವುದೇ ಪ್ರಸಂಗಗಳು ಪರಿಪೂರ್ಣತೆ ಗಳಿಸಲು ಸಾಧ್ಯವಿಲ್ಲ ಇದರಲ್ಲಿ ಪ್ರಯೋಗಶೀಲತೆ ಹಾಗೂ ಅನುಭವದಿಂದ ಪ್ರಸಂಗ ಜನ ಮೆಚ್ಚುಗೆ ಗಳಿಸಲು ಸಾಧ್ಯವಿದೆ ಎಂದು ಪ್ರಸಂಗ ಬರೆಯಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಜೀಣೋದ್ದಾರ ಸಮಿತಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ವಿಶ್ವನಾಥ ರಾವ್, ಶಿಕ್ಷಕ ಲಕ್ಷ್ಮೀಕಾಂತ ಮತ್ತಿತರರು ಉಪಸ್ಥಿತರಿದ್ದರು.

Kinnigoli-05051606

Comments

comments

Comments are closed.

Read previous post:
Kinnigoli-05051604
ಶಿಮಂತೂರು ಹೊರೆ ಕಾಣಿಕೆ ಸಮರ್ಪಣೆ

ಮೂಲ್ಕಿ: ಮೂಲ್ಕಿಗೇರುಕಟ್ಟೆ ಶ್ರೀ ಚಂದ್ರಶೇಖರ ಸ್ವಾಮೀಜಿಯವರ ಆಶ್ರಮದಿಂದ ಶಿಮಂತೂರಿನ ಶ್ರೀ ಆದಿ ಜನಾರ್ಧನ ದೇವಳದಲ್ಲಿ ಮೇ 9 ರ ವರೆಗೆ ಜರಗಲಿರುವ ಬ್ರಹ್ಮ ಕಲಶಾಭಿಷೇಕ ಸಮಾರಂಭಕ್ಕೆ ಆನ್ನ...

Close