ಸಾಮೂಹಿಕ ಸತ್ಯನಾರಾಯಣ ಪೂಜೆ

ಮೂಲ್ಕಿ: ದೇವಾಡಿಗ ಸಮಾಜ ಸೇವಾ ಸಂಘವು ಸಮಾಜದ ಅರ್ಹ ಫಲಾನುಭವಿಗಳನ್ನು ಗುರುತಿಸಿ ಶಿಕ್ಷಣ ಮತ್ತು ಆರೋಗ್ಯ ಹಾಗೂ ಆರ್ಥಿಕವಾಗಿ ಅಭಿವೃದ್ಧಿಪಡಿಸುವ ಕಾರ್ಯಗಳನ್ನು ಮಾಡುತ್ತಾ ಬಂದಿದೆ ಎಂದು ಅಧ್ಯಕ್ಷ ಬಿ. ಸಂಜೀವ ದೇವಾಡಿಗ ಹೇಳಿದರು.

ದೇವಾಡಿಗ ಸಮಾಜ ಸೇವಾ ಸಂಘ ವಾರ್ಷಿಕವಾಗಿ ನಡೆಯಲ್ಪಡುವ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಸಮಾಜದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಸಂದರ್ಭ ಬಾರಕೂರು ಶ್ರೀ ಏಕನಾಥೇಶ್ವರೀ ದೇವಸ್ಥಾನದ ಟ್ರಸ್ಟಿ ನರಸಿಂಹ ದೇವಾಡಿಗ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿ ವೇತನವನ್ನು ವಿತರಿಸಿ, ವಿದ್ಯಾರ್ಥಿಗಳು ಸಂಘದಿಂದ ಪಡೆದ ಸಹಾಯವನ್ನು ಉತ್ತಮವಾಗಿ ವಿನಿಯೋಗಿಸಿ ಶೈಕ್ಷಣಿಕ ಸಾಧಕರಾಗಿ ಮುಂದುವರಿದು ಸಮಾಜವನ್ನು ಅಭಿವೃದ್ಧಿ ಪಡಿಸುವ ಕಾರ್ಯದಲ್ಲಿ ಮುಂದಿನ ದಿನಗಳಲ್ಲಿ ಸಹಭಾಗಿಗಳಾಗಬೇಕು ಎಂದರು.

ಬಿ. ವಿಶ್ವನಾಥ್, ದೊಡ್ಡಣ್ಣ ಮೊಲಿ, ಮುದ್ದಣ್ಣ ದೇವಾಡಿಗ, ಆನಂದ ಮೊಲಿ, ತಾರಾನಾಥ್ ದೇವಾಡಿಗ, ಅರುಣ್ ಕುಮಾರ್, ಖಜಾಂಜಿ ದಿನೇಶ್ ದೇವಾಡಿಗ, ರವೀಂದ್ರ ಒಡೆಯರಬೆಟ್ಟು ಉಪಸ್ಥಿತರಿದ್ದರು.

ಸಂಘದ ಕಾರ್ಯಾದರ್ಶಿ ಬಿ. ಬಾಲಕೃಷ್ಣ ದೇವಾಡಿಗ ಸ್ವಾಗತಿಸಿದರು. ಮಹಿಳಾ ಸಂಘಟನಾ ಅಧ್ಯಕ್ಷೆ ನಾಗರತ್ನ ಪ್ರಸ್ತಾವಣೆ ನೀಡಿದರು. ಸಂಘಟನಾ ಕಾರ್ಯದರ್ಶಿ ಗಣೇಶ್ ದೇವಾಡಿಗ ಕುಬೆವೂರು ವಂದಿಸಿದರು ಯುವಸಂಘಟನಾ ಕಾರ್ಯದರ್ಶಿ ಗಿರೀಶ್ ದೇವಾಡಿಗ ಕಾರ್ಯಕ್ರಮವನ್ನು ನಿರ್ವಹಿಸಿದರು.

Mulki-06051601

Comments

comments

Comments are closed.

Read previous post:
Kinnigoli-05051606
ಶಿಮಂತೂರು ಕ್ಷೇತ್ರ ಮಹಾತ್ಮೆ ಯಕ್ಷಗಾನ

ಮೂಲ್ಕಿ: ಯಕ್ಷಗಾನ ಪ್ರಸಂಗಗಳು ಕ್ಷೇತ್ರದ ಮಹಾತ್ಮೆಯನ್ನು ಪ್ರಚಾರ ಪಡಿಸುವುದರೊಂದಿಗೆ ಯುವ ಪೀಳಿಗೆಗೆ ಕ್ಷೇತ್ರದ ಪಾವಿತ್ರತೆಯ ಬಗ್ಗೆ ಮಾಹಿತಿಯನ್ನು ನೀಡುತ್ತದೆ ಎಂದು ಅಂತರಾಷ್ಟ್ರೀಯ ಕಬ್ಬಡಿ ಪಟು ಜಯ ಶೆಟ್ಟಿ...

Close