ಏಳಿಂಜೆ ಬ್ರಹ್ಮಕಲಶ ಪೂರ್ವಭಾವಿ ಸಭೆ

ಕಿನ್ನಿಗೋಳಿ : ಮುಂದಿನ ವರ್ಷ 2017 ಜನವರಿ ಅಥವಾ ಫೆಬ್ರವರಿ ತಿಂಗಳಿನಲ್ಲಿ ಏಳಿಂಜೆ ಶ್ರೀ ಲಕ್ಷ್ಮೀಜನಾರ್ದನ ಮಹಾಗಣಪತಿ ದೇವಳದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ದೇವಳದ ಆಡಳಿತ ಮೊಕ್ತೇಸರ ಏಳಿಂಜೆ ಕೋಂಜಾಲುಗುತ್ತು ಪ್ರಭಾಕರ ಎಸ್. ಶೆಟ್ಟಿ ದೇವಳದ ಬ್ರಹ್ಮಕಲಶ ಬಗ್ಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷಚತೆ ವಹಿಸಿ ಮಾತನಾಡಿದರು.
ಈ ಸಂದರ್ಭ 1008 ಮಹಾ ಗಣಯಾಗ, ದೇವರಿಗೆ ನೂತನ ಬ್ರಹ್ಮ ರಥ, ರಾಜಗೋಪುರ, ಪುಷ್ಕರಿಣಿ, ಕಲ್ಯಾಣ ಮಂಟಪದ ರೂಪುರೇಷೆ ಬಗ್ಗೆ ಗ್ರಾಮಸ್ಥರು ಮತ್ತು ಊರ ಪರವೂರ ಭಕ್ತಾಧಿಗಳ ಸಮ್ಮುಖದಲ್ಲಿ ಚರ್ಚಿಸಲಾಯಿತು.
ಏಳಿಂಜೆ ಕೋಂಜಾಲುಗುತ್ತು ದಿವಾಕರ ಶೆಟ್ಟಿ, ಏಳಿಂಜೆ ಕೋಂಜಾಲುಗುತ್ತು ದಯಾನಂದ ಶೆಟ್ಟಿ, ಮುಂಬಯಿ ಉದ್ಯಮಿ ಐಕಳ ಹರೀಶ್ ಶೆಟ್ಟಿ, ಕುಂರ್ಬಿಲ್‌ಗುತ್ತು ರಾಮಣ್ಣ ಶೆಟ್ಟಿ, ಯುಗಪುರುಷದ ಕೆ. ಭುವನಾಭಿರಾಮ ಉಡುಪ, ಉದ್ಯಮಿ ಪುರಂದರ ಶೆಟ್ಟಿ, ರಘುರಾಮ ಅಡ್ಯಂತಾಯ, ಅರ್ಚಕ ಗಣೇಶ್ ಭಟ್ ಉಪಸ್ಥಿತರಿದ್ದರು.
ಅರ್ಚಕ ಸದಾನಂದ ಭಟ್ ಪ್ರಸ್ತಾವನೆಗೈದರು. ಏಳಿಂಜೆ ಕೋಂಜಾಲುಗುತ್ತು ಅನಿಲ್ ಶೆಟ್ಟಿ ವಂದಿಸಿದರು. ವೈ. ಯೋಗೀಶ್ ರಾವ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Kinnigoli-07051601

Comments

comments

Comments are closed.

Read previous post:
Kinnigoli--06051603
ಶ್ರೀ ರಾಮ ಯುವಕ ವೃಂದ ವಾರ್ಷಿಕೋತ್ಸವ

ಕಿನ್ನಿಗೋಳಿ: ಯುವ ಸಂಘಟನೆಗಳು ಜನಪರ ಕಾರ್ಯಗಳನ್ನು ಹಮ್ಮಿಕೊಂಡು ಗ್ರಾಮ ಹಾಗೂ ಸಮಾಜದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಯುವಜನಾ ಕ್ರೀಡಾ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು. ಗುರುವಾರ ಕಿನ್ನಿಗೋಳಿ...

Close