ಸೆ.28 ರಂದು ಸಂಸ್ಮರಣಾ ಸಮಾರಂಭ

ಕಿನ್ನಿಗೋಳಿ: ಕೀರ್ತಿಶೇಷ ದಿ. ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಅವರ ಮುಂಬಯಿ ಅಭಿಮಾನಿ ಬಳಗದ ಆಶ್ರಯದಲ್ಲಿ 15ನೇ ವರ್ಷದ ಸಂಸ್ಮರಣಾ, ಸನ್ಮಾನ, ಗೌರವಾರ್ಪಣೆ ಹಾಗೂ ಯಕ್ಷಗಾನ ಬಯಲಾಟ ಪದ್ಮನಾಭ ಕಟೀಲು ಮುಂದಾಳತ್ವದಲ್ಲಿ ಮುಂಬಯಿ ಬಂಟರ ಭವನದಲ್ಲಿ ಸೆಪ್ಟೆಂಬರ್ 28 ರಂದು ನಡೆಯಲಿದೆ ಎಂದು ಕಟೀಲು ದೇವಳ ಅರ್ಚಕ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಕಟೀಲಿನಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು.
ಸೆ. 28 ರಂದು ಮದ್ಯಾಹ್ನದಿಂದ ರಾತ್ರಿಯವರೆಗೆ 15 ಕ್ಕೂ ಹೆಚ್ಚು ತೆಂಕು ಮತ್ತು ಬಡಗು ತಿಟ್ಟು ಮೇಳಗಳ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಶ್ರೀದೇವಿ ಮಹಾತ್ಮ್ಯೆ ಯಕ್ಷಗಾನ ಬಯಲಾಟ ನಡೆಯಲಿದೆ. ಕಳೆದ 14 ವರ್ಷಗಳಲ್ಲಿ 90 ಕ್ಕೂ ಹೆಚ್ಚು ಕಲಾವಿದರಿಗೆ ಸನ್ಮಾನ ಮಾಡಲಾಗಿದೆ. 15 ನೇ ವರ್ಷದ ಕಾರ್ಯಕ್ರಮ ವಿಭಿನ್ನ ರೀತಿಯಲ್ಲಿ ನಡೆಯಲಿದ್ದು ಈಗಾಗಲೇ ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ ಎಂದರು.
ಈ ಸಂದರ್ಭ ಯಕ್ಷಗಾನ ಮತ್ತು ನಾಟಕ ತಂಡದ ಸಂಚಾಲಕ ಪ್ರಕಾಶ್ ಎಮ್. ಶೆಟ್ಟಿ ಸುರತ್ಕಲ್ , ಯಕ್ಷಗಾನ ಸಂಘಟಕರಾದ ಪದ್ಮನಾಭ ಕಟೀಲು, ಶಾಂತಾರಾಮ ಕಡ್ವ ಮೂಡಬಿದಿರೆ, ಪ್ರಭಾಕರ ಡಿ. ಸುವರ್ಣ, ಕಿನ್ನಿಗೋಳಿ ಯಕ್ಷಲಹರಿ ಅಧ್ಯಕ್ಷ ಪಿ. ಸತೀಶ್ ರಾವ್, ಪತ್ರಕರ್ತ ಶರತ್ ಶೆಟ್ಟಿ ಉಪಸ್ಥಿತರಿದ್ದರು.

Comments

comments

Comments are closed.

Read previous post:
Kinnigoli-09051603
ಶಿಮಂತೂರು ನೂತನ ತೀರ್ಥ ಮಂಟಪ ಸಮರ್ಪಣೆ

ಶಿಮಂತೂರು: ನೂತನ ತೀರ್ಥ ಮಂಟಪವನ್ನು ಶ್ರೀಮನ್ ಮದ್ವಾಚಾರ್ಯ ಸಂಸ್ಥಾನ ಪಲಿಮಾರು ಮಠಾಧೀಶರಾದ ಶ್ರೀಶ್ರೀ ವಿದ್ಯಧೀಶ ಶ್ರೀಪಾದರು ಲೋಕರ್ಪಣೆ ಗೈದರು. ಪಾಂಡು ಕೆ. ಶೆಟ್ಟಿ ಮತ್ತು ಮೋಹಿನಿ ಪಿ....

Close