ಕಿನ್ನಿಗೋಳಿ ಲಾರಿ ಮಾಲಕರ ಸಂಘ ಉದ್ಘಾಟನೆ

ಕಿನ್ನಿಗೋಳಿ: ಸಂಘಟಿತ ಹೋರಾಟದಿಂದ ಯಶಸ್ಸು ಸಾಧಿಸಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಯುವಜನಾ ಕ್ರೀಡಾ ಸಚಿವ ಕೆ ಅಭಯಚಂದ್ರ ಜೈನ್ ಹೇಳಿದರು.
ಕಿನ್ನಿಗೋಳಿ ರಾಜಾಂಗಣ ಸಭಾಭವನದಲ್ಲಿ ಭಾನುವಾರ ನಡೆದ ಕಿನ್ನಿಗೋಳಿ ಲಾರಿ ಮಾಲಕರ ಸಂಘ ( ರಿ ) ಉದ್ಘಾಟಿಸಿ ಮಾತನಾಡಿದರು.
ತ್ವರಿತ ಗತಿಯಲ್ಲಿ ಬೆಳೆಯುತ್ತಿರುವ ಕಿನ್ನಿಗೋಳಿ ಪಟ್ಟಣ ಆಗಿರುವುದರಿಂದ ನಗರ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ಚಿಂತನೆ ನಡೆಯುತ್ತಿದೆ ಎಂದರು.
ಈ ಸಂದರ್ಭ 27 ವರ್ಷಗಳಿಂದ ಅಪಘಾತ ರಹಿತ ಲಾರಿ ಚಾಲಕ ಪದ್ಮನಾಭ ಪೂಜಾರಿ ಅವರಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು. ಅನಾರೋಗ್ಯದಿಂದ ಬಳಲುತ್ತಿದ್ದ ಗಂಗಾಧರ ಗೌಡ ಅವರ ಚಿಕಿತ್ಸೆಗೆ ಹಾಗೂ ಅಹಮ್ಮದ್ ಮತ್ತು ಉಮ್ಮರ್ ಅವರಿಗೆ ಸಹಾಯ ಹಸ್ತ ನೀಡಲಾಯಿತು.
ಉತ್ತರ ಸಂಚಾರಿ ಪೋಲೀಸ್ ಠಾಣೆಯ ನಿರೀಕ್ಷಕ ಮಂಜುನಾಥ ಸಂಚಾರಿ ನಿಯಮದ ಬಗ್ಗೆ ಉಪನ್ಯಾಸ ನೀಡಿದರು.
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ, ಜಿ. ಪಂ. ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ತಾ. ಪಂ. ಸದಸ್ಯ ದಿವಾಕರ ಕರ್ಕೇರ, ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಕಾನೂನು ಸಲಹೆಗಾರ ದುರ್ಗಾಪ್ರಸಾದ್ ಹೆಗ್ಡೆ, ಉಪಾಧ್ಯಕ್ಷರಾದ ಕೆ. ಯು. ಮೂಸಬ್ಬ , ಅಬ್ದುಲ್ ಹಮೀದ್ ಉಪಸ್ಥಿತರಿದ್ದರು. ಕಿನ್ನಿಗೋಳಿ ಕಿನ್ನಿಗೋಳಿ ಲಾರಿ ಮಾಲಕರ ಸಂಘದ ಅಧ್ಯಕ್ಷ ಸಂತೋಷ್‌ಕುಮಾರ್ ಹೆಗ್ಡೆ ಸ್ವಾಗತಿಸಿದರು. ಕಾರ್ಯದರ್ಶಿ ಅಬೂಬಕ್ಕರ್ ವರದಿ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ಬರ್ಟನ್ ಬ್ಯಾಪ್ಟಿಸ್ಟ್ ಸಿಕ್ವೇರಾ ವಂದಿಸಿದರು.
ಶಿಕ್ಷಕ ಸಾಯಿನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-09051606

Comments

comments

Comments are closed.

Read previous post:
ಸೆ.28 ರಂದು ಸಂಸ್ಮರಣಾ ಸಮಾರಂಭ

ಕಿನ್ನಿಗೋಳಿ: ಕೀರ್ತಿಶೇಷ ದಿ. ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಅವರ ಮುಂಬಯಿ ಅಭಿಮಾನಿ ಬಳಗದ ಆಶ್ರಯದಲ್ಲಿ 15ನೇ ವರ್ಷದ ಸಂಸ್ಮರಣಾ, ಸನ್ಮಾನ, ಗೌರವಾರ್ಪಣೆ ಹಾಗೂ ಯಕ್ಷಗಾನ ಬಯಲಾಟ ಪದ್ಮನಾಭ ಕಟೀಲು...

Close