ಮಕ್ಕಳಿಗೆ ಯಕ್ಷಗಾನದಲ್ಲಿ ಆಸಕ್ತಿ ಹುಟ್ಟಿಸಿ ಪ್ರೋತ್ಸಾಹಿಸಿ

 ಕಿನ್ನಿಗೋಳಿ: ಎಳೆ ಪ್ರಾಯದ ಮಕ್ಕಳಿಗೆ ಯಕ್ಷಗಾನದಲ್ಲಿ ಆಸಕ್ತಿ ಹುಟ್ಟಿಸಿ ಪ್ರೋತ್ಸಾಹಿಸಿ ಕಲೆಯ ಬೆಳವಣಿಗೆ ಹಾಗೂ ಪುರಾಣ ಕತೆಗಳನ್ನು ಲೋಕಕ್ಕೆ ಮನದಟ್ಟು ಮಾಡುವ ಮೂಲಕ ಎಲ್ಲರನ್ನೂ ಸಜ್ಜನರನ್ನಾಗಿಸುವ ಮಕ್ಕಳ ಮೇಳದ ಸಾಧನೆ ಮೆಚ್ಚತಕ್ಕದ್ದು ಎಂದು ಯುವ ಜನಾ ಕ್ರೀಡಾ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು.
ಕೆರೆಕಾಡು ಶ್ರೀ ವಿನಾಯಕ ಯಕ್ಷಕಲಾ ತಂಡ ಮಕ್ಕಳ ಮೇಳದ ಅಷ್ಟಮ ವರ್ಷದ ಪ್ರಯುಕ್ತ ಭಾನುವಾರ ನಡೆದ ಯಕ್ಷ ಕೌಮುದಿ – 2016 ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಸಂದರ್ಭ ಯುವ ಭಾಗವತ ರವಿಚಂದ್ರ ಕನ್ನಡಿಕಟ್ಟೆ , ಪ್ರಕಾಶ್ ಒಂಟಿಕಟ್ಟೆ ಯಕ್ಷಕೌಮುದಿ- 2016 ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಹಲವು ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ ಮಮತಾ ಶರತ್ ಶೆಟ್ಟಿ , ಉಷಾ ನರೇಂದ್ರ ಕೆರೆಕಾಡು, ಸಮಾಜ ಸೇವಕ ಮಾಧವ ಶೆಟ್ಟಿಗಾರ್, ಅತಿಕಾರಿಬೆಟ್ಟು ಗ್ರಾ. ಪಂ. ಅಧ್ಯಕ್ಷೆ ಶಾರದಾ ವಸಂತ್, ಪಡುಬಿದ್ರಿ ಉದ್ಯಮಿ ನರಸಿಂಹ ಭಟ್, ಹಿರಿಯ ನಾಗರಿಕರಾದ ಸೌಭಾಗ್ಯವತಿ, ಸುರಕ್ಷಾ ಎಸ್. ಆಚಾರ್ಯ ಅವರಿಗೆ ಶ್ರೀ ವಿನಾಯಕ ಯಕ್ಷರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಯುಗಪುರುಷದ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ಪತ್ರಕರ್ತ ಶೇಖರ ಅಜೆಕಾರು, ಹೊಸಂಗಡಿ ಗ್ರಾ. ಪಂ. ಅಧ್ಯಕ್ಷ ಹರಿಪ್ರಸಾದ್, ಕಿಲ್ಪಾಡಿ ಗ್ರಾ. ಪಂ. ಶ್ರೀಕಾಂತ್ ರಾವ್ ಉಪಸ್ಥಿತರಿದ್ದರು.
ಕೆರೆಕಾಡು ಶ್ರೀ ವಿನಾಯಕ ಯಕ್ಷಕಲಾ ತಂಡ ಮಕ್ಕಳ ಮೇಳದ ಅಧ್ಯಕ್ಷ ಜಯಂತ ಅಮೀನ್ ಕೆರೆಕಾಡು ಸ್ವಾಗತಿಸಿದರು. ಉಪಾಧ್ಯಕ್ಷ ಉಮೇಶ್ ಆಚಾರ್ಯ, ರೇಷ್ಮಾ ಬಂಗೇರ ಸಮ್ಮಾನ ಪತ್ರ ವಾಚಿಸಿದರು. ಪತ್ರಕರ್ತ ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-09051607

Comments

comments

Comments are closed.

Read previous post:
Kinnigoli-09051606
ಕಿನ್ನಿಗೋಳಿ ಲಾರಿ ಮಾಲಕರ ಸಂಘ ಉದ್ಘಾಟನೆ

ಕಿನ್ನಿಗೋಳಿ: ಸಂಘಟಿತ ಹೋರಾಟದಿಂದ ಯಶಸ್ಸು ಸಾಧಿಸಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಯುವಜನಾ ಕ್ರೀಡಾ ಸಚಿವ ಕೆ ಅಭಯಚಂದ್ರ ಜೈನ್ ಹೇಳಿದರು. ಕಿನ್ನಿಗೋಳಿ ರಾಜಾಂಗಣ ಸಭಾಭವನದಲ್ಲಿ ಭಾನುವಾರ ನಡೆದ...

Close