ಶಿಮಂತೂರು ನೂತನ ತೀರ್ಥ ಮಂಟಪ ಸಮರ್ಪಣೆ

ಶಿಮಂತೂರು: ನೂತನ ತೀರ್ಥ ಮಂಟಪವನ್ನು ಶ್ರೀಮನ್ ಮದ್ವಾಚಾರ್ಯ ಸಂಸ್ಥಾನ ಪಲಿಮಾರು ಮಠಾಧೀಶರಾದ ಶ್ರೀಶ್ರೀ ವಿದ್ಯಧೀಶ ಶ್ರೀಪಾದರು ಲೋಕರ್ಪಣೆ ಗೈದರು. ಪಾಂಡು ಕೆ. ಶೆಟ್ಟಿ ಮತ್ತು ಮೋಹಿನಿ ಪಿ. ಶೆಟ್ಟಿ ತಮ್ಮ ತಂದೆ ತಾಯಿಯವರ ಸ್ಮರಣಾರ್ಥ ೧೬ಲಕ್ಷ ಮೊತ್ತವನ್ನು ಉದಾರವಾಗಿ ದೇಣಿಗೆಯನ್ನು ನೀಡಿರುತ್ತಾರೆ.
ಶಿಮಂತೂರು ಶ್ರೀಮಂತ ಹೃದಯವಂತರ ನಾಡಾಗಿದ್ದು ಈ ದೇವಸ್ಥಾನವೂ ಕೂಡ ಅತ್ಯಂತ ಶ್ರೀಮಂತ ದೇವಸ್ಥಾನವಾಗಿದೆ. ದೇವಸ್ಥಾನವು ಅತ್ಯಂತ ಶುಚಿಯಗಿದ್ದು ಎಲ್ಲರೂ ಒಗ್ಗೂಡಿ ದೇವಸ್ಥಾನ ಮತ್ತು ಊರಿನ ಅಭಿವೃದ್ಧಿಯನ್ನು ಮಾಡುವಂತಾಗಲಿ ಎಂದು ಶುಭ ಆಶೀರ್ವಚನಗೈದರು.
ನೂತನ ತೀರ್ಥಮಂಟಪದ ಸೇವಾಕರ್ತ ಪಾಂಡು ಕೆ. ಶೆಟ್ಟಿ, ಮೋಹಿನಿ ಪಿ. ಶೆಟ್ಟಿ, ದೇವಸ್ಥಾನದ ಆಡಳಿತಾಧಿಕಾರಿ ವಾಣಿ ವಿ. ಆಳ್ವ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಉದಯ ಬಿ. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ವಿಶ್ವನಾಥ ರಾವ್, ಜೊತೆ ಕಾರ್ಯದರ್ಶಿ ಶಂಕರ್ ಶೆಟ್ಟಿ, ಶಿಮರಾಮ ಶೆಟ್ಟಿ, ಮುಂಬಯಿ ಸಮಿತಿಯ ಉಪಾಧ್ಯಕ್ಷ ಜಯ ಎ. ಶೆಟ್ಟಿ, ಕೋಶಾಧಿಕಾರಿ ಜಯಕರ್ ವಿ.ಶೆಟ್ಟಿ, ಸಮಿತಿ ಸದಸ್ಯರಾದ ಪದ್ಮಿನಿ ವಿ ಶೆಟ್ಟಿ, ಶಶಿಕಲ ಉಪಸ್ಥಿತರಿದ್ದರು.

Kinnigoli-09051601 Kinnigoli-09051602 Kinnigoli-09051603 Kinnigoli-09051604 Kinnigoli-09051605

 

Comments

comments

Comments are closed.

Read previous post:
Kinnigoli-07051601
ಏಳಿಂಜೆ ಬ್ರಹ್ಮಕಲಶ ಪೂರ್ವಭಾವಿ ಸಭೆ

ಕಿನ್ನಿಗೋಳಿ : ಮುಂದಿನ ವರ್ಷ 2017 ಜನವರಿ ಅಥವಾ ಫೆಬ್ರವರಿ ತಿಂಗಳಿನಲ್ಲಿ ಏಳಿಂಜೆ ಶ್ರೀ ಲಕ್ಷ್ಮೀಜನಾರ್ದನ ಮಹಾಗಣಪತಿ ದೇವಳದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ದೇವಳದ ಆಡಳಿತ ಮೊಕ್ತೇಸರ...

Close