ಶಿಮಂತೂರು ಅಷ್ಟಬಂಧ ಬ್ರಹ್ಮ ಕಲಶಾಭೀಶೇಕ ಧಾರ್ಮಿಕ ಸಭೆ

ಮೂಲ್ಕಿ: ಗ್ರಾಮದ ಅಭಿವೃದ್ಧಿ ಹಾಗೂ ಶಾಂತಿ ಸೌಹಾರ್ದತೆಗೆ ದೇವಳಗಳು ಮೂಲ ಕೇಂದ್ರ ಎಂದು ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.
ಶಿಮಂತೂರು ಶ್ರೀ ಆದಿ ಜನಾರ್ದನ ದೇವಸ್ಥಾನದಲ್ಲಿ ಸಹಸ್ರ ಪರಿಕಲಶ ಅಷ್ಟಬಂಧ ಬ್ರಹ್ಮ ಕಲಶಾಭೀಶೇಕ ಸಂದರ್ಭ ಸೋಮವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ನಮ್ಮ ಶಾಂತಿ ಸೌಹಾರ್ದತೆಗೆ ಮೂಲ ಕೇಂದ್ರವಾದ ದೇಗುಲಗಳನ್ನು ಕಾಲಕಾಲಕ್ಕೆ ಸರಿಯಾಗಿ ಅಭಿವೃದ್ಧಿಗೋಳಿಸಿ ಸುಸ್ಥಿತಿಯಲ್ಲಿರಿಸುವುದು ಆದ್ಯ ಕರ್ತವ್ಯವಾಗಿದ್ದು ಶಿಮಂತೂರು ಗ್ರಾಮಸ್ಥರು ಈ ಬಗ್ಗೆ ಮಾದರಿಯಾಗಿದ್ದಾರೆ ಎಂದರು.
ಸಂಸದ ನಳಿನ್ ಕುಮಾರ್ ಕಟೀಲು ಮತನಾಡಿ, ಶಿಮಂತೂರು ಗ್ರಾಮಸ್ಥರು ಹೃದಯ ಶ್ರೀಮಂತಿಕೆ ಉಳ್ಳವರು ಇಲ್ಲಿನ ಜನರ ಒಗ್ಗಟ್ಟು ಮಾದರಿಯಾಗಿದೆ. ಸಣ್ಣ ಗ್ರಾಮವಾದರೂ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಿ ಕ್ಷತ್ರದ ಮುಖಾಂತರ ಸಮಾಜಕ್ಕೆ ಸೇವೆ ನೀಡುವ ಕಾರ್ಯ ಸ್ತುತ್ಯರ್ಹ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಯುವಜನಸೇವೆ ಮತ್ತು ಮೀನುಗಾರಿಕಾ ಸಚಿವರಾದ ಅಭಯಚಂದ್ರ ಜೈನ್ ರವರು ಮಾತನಾಡಿ,ಕರಾವಳಿಯ ಜನತೆ ಸಾಹಸ ಪ್ರವೃತ್ತಿಯವರು ಹೊರರಾಜ್ಯ ಹಾಗೂ ದೇಶಗಳಲ್ಲಿ ಹೋಗಿ ಪ್ರಾಮಾಣಿಕ ವ್ಯಕ್ತಿತ್ವದಿಂದ ಅಭಿವೃದ್ಧಿ ಕಂಡುಕೊಂಡವರು ಅವರಿಂದಾಗಿ ಗ್ರಾಮೀಣ ಪ್ರದೇಶದ ಕ್ಷೇತ್ರವಾಗಿದ್ದರೂ ಮೂಲಭೂತ ಸೌಕರ್ಯದಲ್ಲಿ ಅಭಿವೃದ್ಧಿ ಕಂಡಿರುವ ಪ್ರದೇಶವಾಗಿದೆ ಇಲ್ಲಿನ ಸಂಘಟನಾತ್ಮಕ ಕಾರ್ಯಗಳು ಮಾದರಿ ಎಂದರು.
ಕ್ಷೇತ್ರದ ತಂತ್ರಿಗಳಾದ ಶಿಬರೂರು ವೇದವ್ಯಾಸ ತಂತ್ರಿ, ಮಾಜಿ ಸಚಿವ ಅಮರನಾಥ ಶೆಟ್ಟಿ, ರಾಮವಂದ್ರ ಭಟ್ ದಾನಿಗಳನ್ನು ಗೌರವಿಸಿದರು.
ಕ್ಷೇತ್ರದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಉದಯ ಬಿ.ಶೆಟ್ಟಿ,ಉಪಾಧ್ಯಕ್ಷ ಜಯ.ಎ.ಶೆಟ್ಟಿ, ಕಾರ್ಯದರ್ಶಿ ವಿಶ್ವನಾಥ ರಾವ್, ಮುಂಬೈ ಸಮಿತಿಯ ಶಿಮಂತೂರು ಚಂದ್ರಹಾಸ ಸುವರ್ಣ,ಶ್ರೀಪತಿ ಭಟ್ ವೇದಿಕೆಯಲ್ಲಿದ್ದರು. ಶಿಮಂತೂರು ಚಂದ್ರಹಾಸ ಸುವರ್ಣ ಸ್ವಾಗತಿಸಿದರು. ಉದಯ ಬಿ.ಶೆಟ್ಟಿ ವರದಿ ಮಂಡಿಸಿದರು. ಜಯ.ಎ.ಶೆಟ್ಟಿ ದಾನಿಗಳ ಹೆಸರು ವಾಚಿಸಿದರು. ವಿಶ್ವನಾಥ ರಾವ್ ವಂದಿಸಿದರು.ಲಕ್ಷ್ಮೀಕಾಂತ ನಿರೂಪಿಸಿದರು.

Shimanthoor-10051604

Comments

comments

Comments are closed.

Read previous post:
Shimanthoor-10051603
ಶಿಮಂತೂರು ಅಷ್ಟಬಂಧ ಬ್ರಹ್ಮ ಕಲಶಾಭೀಶೇಕ

ಶಿಮಂತೂರು: ಸೋಮವಾರ ಶಿಮಂತೂರು ಶ್ರೀ ಆದಿ ಜನಾರ್ದನ ದೇವಳದಲ್ಲಿ ಸಹಸ್ರ ಪರಿಕಲಶ ಅಷ್ಟಬಂಧ ಬ್ರಹ್ಮ ಕಲಶಾಭೀಶೇಕ ನಡೆಯಿತು.

Close