ಯುಪಿಯಸ್ ಸಿ ಪರೀಕ್ಷೆ – ಮಿಶಾಲ್ 387ನೇ ರ‍್ಯಾಂಕ್

ಮೂಡಬಿದ್ರೆ: ಬಜಪೆ ಸಮೀಪದ ನೀರುಡೆ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದ ಮಿಶಾಲ್ ಕ್ವೀನಿ ಡಿಕೋಸ್ತಾ 2015 ನೇ ಸಾಲಿನ ಯುಪಿಯಸ್ ಸಿ ಪರಿಕ್ಷೆಯಲ್ಲಿ 387ನೇ ರ‍್ಯಾಂಕ್ ಪಡೆದು ದಕ್ಷಿಣ ಕನ್ನಡ ಜಿಲ್ಲೆಯೇ ಬೆರಗಾಗುವಂತೆ ಮಾಡಿದ್ದಾಳೆ,.

ಮೂಡಬಿದ್ರೆ ಸಮೀಪದ ನೀರುಡೆ ಕೊಪ್ಪಲ ನಿವಾಸಿ ಲಾಜರಸ್ ಡಿಕೋಸ್ತಾ ಮತ್ತು ನ್ಯಾನ್ಸಿ ಫಾಲ್ಸಿ ಡಿಕೋಸ್ತಾ ಅವರ ಮೂವರು ಮಕ್ಕಳಲ್ಲಿ ಮಿಶಾಲ್ ಎರಡನೇಯವರು. ಸೈಂಟ್ ಪ್ರಾನ್ಸಿಸ್ ಕ್ಸೇವಿಯರ್ ಹೈಯರ್ ಫೈಮರಿ ಶಾಲೆಯಲ್ಲಿ ಏಳನೇ ತರಗತಿ ಕಲಿತು ಹೈಸ್ಕೂಲ್ ವಿದ್ಯಾಭ್ಯಾಸವನ್ನು ಲಿಟ್ಲ್ ಫ್ಲವರ್ ಹೈಸ್ಕೂಲ್ ಕಿನ್ನಿಗೋಳಿಯಲ್ಲಿ ಪೂರೈಸಿದ್ದರು. ಪಿಯುಸಿಯನ್ನು ಮೂಡಬಿದ್ರೆಯ ಪ್ರತಿಷ್ಠಿತ ಆಳ್ವಾಸ್ ಕಾಲೇಜಿನಲ್ಲಿ ಮುಗಿಸಿ, ಇನ್ಫಾರ್ಮೇಶನ್ ಸೈನ್ಸ್ ಆಂಡ್ ಇಂಜಿನಿಯರಿಂಗ್ ವಿಧ್ಯಾಭ್ಯಾಸವನ್ನು ಬೆಂಗಳೂರಿನ ಆರ್‌ಇಸಿಇಇ ಕಾಲೇಜಿನಲ್ಲಿ ಮಾಡಿದ್ದರು.
ಚಿಕ್ಕಂದಿನಿಂದಲೇ ವಿದ್ಯಾಭ್ಯಾಸದಲ್ಲಿ ಮುಂದಿದ್ದ ಈಕೆ ಫ್ರೈಮರಿ, ಹೈಸ್ಕೂಲ್ ಮತ್ತು ಪಿಯುಸಿಗಳಲ್ಲಿ ಶೇ.90ಕ್ಕೂ ಹೆಚ್ಚಿನ ಅಂಕಗಳನ್ನು ಪಡೆದು ಅಗ್ರ ಶ್ರೇಣಿಯಕಲ್ಲಿ ಪಾಸಾಗಿದ್ದರು. ಕ್ರೀಡೆಯಲ್ಲೂ ಹೆಚ್ಚಿನ ಆಸಕ್ತಿ ಹೊಂದಿದ್ದು ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಬಹುಮಾನಗಳನ್ನು ಗಳಿಸಿದ್ದರು. ರಾಜ್ಯ ಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಭಾಗವಹಿಸಿ ಚಾಂಪಿಯನ್ ಆಗಿ ಮಿಂಚಿದ್ದರು.
ಲಾಜರಸ್ ಡಿಕೋಸ್ತಾ ಹಿರಿಯರಿಂದ ಬಳುವಳಿಯಾಗಿ ಬಂದಿದ್ದ ಕೃಷಿಯನ್ನು ಮೂಲ ಕಸುಬಾಗಿ ನಿರ್ವಹಿಸುತ್ತಾ ಎಲ್ ಐ ಸಿ ಯ ಏಜೆಂಟರಾಗಿದ್ದುಕೊಂಡು ಮಕ್ಕಳ ವಿಧ್ಯಾಭ್ಯಾಸಕ್ಕೆ ಪೂರಕವಾದ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಿಕೊಟ್ಟಿದ್ದರು ಇಬ್ಬರು ಹೆಣ್ಣು ಮತ್ತು ಓರ್ವ ಗಂಡು ಮಕ್ಕಳಲ್ಲಿ ಹಿರಿಯವಳು ನಿಶಾಲ್ ರಾಣಿ ಡಿಕೋಸ್ತಾ, ಇಂಜಿನಿಯರಿಂಗ್ ವಿಧ್ಯಾಬ್ಯಾಸ ಪೂರೈಸಿ ಬೆಂಗಳೂರಿನ ಸೋನಿ ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾಳೆ. ಮಗ ಕ್ವೀನ್‌ಸನ್ ಹನಿ ಡಿಕೋಸ್ತಾ ಮೆಕ್ಯಾನಿಕಲ್ ಇಂಜಿನಿಯರಿಂಗ ವಿಧ್ಯಾಬ್ಯಾಸ ಮುಗಿಸಿ ಕೆಲವು ತಿಂಗಳಿಂದ ಬೆಂಗಳೂರಿನ ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ಹುದ್ದೆ ನಿರ್ವಹಿಸುತ್ತಿದ್ದಾರೆ. ಮಿಶಾಲ್ ರ ತಂದೆ ಹೈದರಾಬಾದ್‌ನಲ್ಲಿ ಕೆಲಸ ನಿರ್ವಹಿಸುತ್ತ ವೇಳೆ ಅಲ್ಲಿನ ಮೂಲಭೂತ ಸೌಲಭ್ಯಗಳನ್ನು ಮನಗಂಡು ಐಎಎಸ್ ಕಲಿತು ಉತ್ತಮ ಭ್ರಷ್ಠಾಚಾರ ರಹಿತ ಸಮಾಜ ಸೇವೆ ನೀಡುವ ಕನಸು ಕಂಡಿದ್ದರು. ಆದರೆ ಅಂದಿನ ದಿನಗಳಲ್ಲಿ ಆರ್ಥಿಕವಾಗಿ ಹಿಂದಿಳಿದಿದ್ದ ಕಾರಣಗಳಿಂದ ಅವರ ಕನಸು ನನಸಾಗಲಿಲ್ಲ. ತನ್ನ ತಂದೆಯ ಕನಸು ಹಾಗೂ ನನ್ನ ಕನಸಿನಂತೆ ಒಂದೊಂದೇ ಮೆಟ್ಟಿಲುಗಲನ್ನು ಮೇಲೇರುತ್ತಾ ಬಂದಿದ್ದೇನೆ. ಮುಂದಿನ ದಿನಗಳಲ್ಲಿ ಐಎಎಸ್ ಆಗಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ನನ್ನದು ಎನ್ನುತ್ತಾರೆ ಮಿಶಾಲ್.
ಮಿಶಾಲ್ ಕ್ವೀನಿ ಡಿಕೋಸ್ತಾ ಚಿಕ್ಕಂದಿನಿಂದಲೂ ಚುರುಕ ಸ್ವಭಾವದವಳಾಗಿದ್ದು ತಂದೆಯೊಂದಿಗೆ ಕೃಷಿ ಕೆಲಸಗಳಿಗೆ ಸಹಾಯವಾಗುತ್ತಿದ್ದಳು. ಯಾವುದೇ ಕೆಲಸವಿರಲಿ ಹಿಂಜರಿಕೆ ಎಂಬುದು ಅವಳಲ್ಲಿಲ್ಲ, ಬದುಕಿನ ಕಷ್ಟವನ್ನು ಅರಿತವಳು, ಸಮಾಜದ ಬಗ್ಗೆ ವಿಶೇಷ ಕಾಳಜಿ ಹೊಂದಿದವಳು ಈಗ ಅತೀ ಅಪರೂಪದ ಸಾಧನೆ ಮಾಡಿದ್ದಾಳೆ, ಯುವತಿಯ ಸಾಧನೆ ಅವಿಭಜಿತ ದ.ಕ.ಜಿಲ್ಲೆಯ ಜನರು ಕೊಂಡಾಡುವಂತಾಗಿದೆ.

Moodabidre-12051601 Moodabidre-12051602 Moodabidre-12051603 Moodabidre-12051604 Moodabidre-12051605 Moodabidre-12051606

Comments

comments

Comments are closed.

Read previous post:
Shimanthoor-10051604
ಶಿಮಂತೂರು ಅಷ್ಟಬಂಧ ಬ್ರಹ್ಮ ಕಲಶಾಭೀಶೇಕ ಧಾರ್ಮಿಕ ಸಭೆ

ಮೂಲ್ಕಿ: ಗ್ರಾಮದ ಅಭಿವೃದ್ಧಿ ಹಾಗೂ ಶಾಂತಿ ಸೌಹಾರ್ದತೆಗೆ ದೇವಳಗಳು ಮೂಲ ಕೇಂದ್ರ ಎಂದು ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು. ಶಿಮಂತೂರು ಶ್ರೀ...

Close