ಮೂಲ್ಕಿ ಬೆಂಕಿ ಆಕಸ್ಮಿಕ

ಮೂಲ್ಕಿ: ಮೂಲ್ಕಿ ಕಡವಿನ ಬಾಗಿಲು ಬಳಿ ನದಿ ತೀರದ ಮೂರು ಹಂಚಿನ ಮನೆಗಳಿಗೆ ಆಕಸ್ಮಿಕ ಬೆಂಕಿ ತಗಲಿ ಸಂಪೂರ್ಣ ಬೆಂಕಿಗಾಹುತಿಯಾಗಿದ್ದು ಲಕ್ಷಾಂತರ ರೂ ನಷ್ಟ ಸಂಭವಿಸಿದೆ.
ಮೂಲ್ಕಿ ಕಡವಿನ ಬಾಗಿಲಿನ ನದಿ ತೀರದಲ್ಲಿ ಶಾಂತ, ಯೋಗಿನಿ ಮತ್ತು ರಮಣಿಯವರ ಹಂಚಿನ ಮನೆಗಳು ಒಂದಕ್ಕೊಂದು ತಾಗಿ ಕೊಂಡಿದೆ. ಅದರಲ್ಲಿ ಶಾಂತ ಅವರ ಮನೆಯಲ್ಲಿ ಮಾತ್ರ ವಿದ್ಯುತ್ ಸಂಪರ್ಕವಿದ್ದು ಶನಿವಾರ ಬೆಳಗ್ಗಿನ ಜಾವಾ 3 ಗಂಟೆಯ ಸುಮಾರಿಗೆ ರಮಣಿ ಅವರ ಮನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ತಗಲಿದ್ದು ಬಳಿಕ ಬೆಂಕಿನ ಕೆನ್ನಾಲಗೆಯು ಮನೆಯಲ್ಲಿನ ಮಾಡಿನ ಫಕ್ಕಾಸಿಗೆ ತಗಲಿ ಬದಿಯಲ್ಲಿರುವ ಯೋಗಿನಿ ಮತ್ತು ಶಾಂತರವರ ಮನೆಗೆ ಹರಡಿದೆ. ಮೂರು ಮನೆಗಳ ಮಾಡಿಗೆ ಬೆಂಕಿ ತಗಲಿ ಮರ, ಫಕ್ಕಾಸು, ರೀಪು, ಮನೆಯಲ್ಲಿದ್ದ ಬಟ್ಟೆ, ಬರೆಗಳು, ಗೋದ್ರೇಜ್ ಕಪಾಟು ಸೇರಿದಂತೆ ಎಲ್ಲಾ ವಸ್ತುಗಳು ಬೆಂಕಿಗಾಹುತಿಯಾಗಿದೆ. ಬೆಳಗ್ಗಿನ ಜಾವಾ ಹೊಗೆ ಬರುತ್ತಿದ್ದುದನ್ನು ಕಂಡ ಕೂಡಲೇ ಮನೆಯವರು ಎಚ್ಚೆತ್ತು ಬಳಿಕ ಸ್ಥಳೀಯರು ಸೇರಿ ನೀರು ಹಾಯಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೂರು ಮನೆಗಳು ಸಂಪೂರ್ಣ ಬೆಂಕಿಗಾಹುತಿಯಾಗಿದ್ದು ಲಕ್ಷಾಂತರ ರೂ ನಷ್ಟ ಸಂಭವಿಸಿದೆ. ಮೂಲ್ಕಿಯ ಕಂದಾಯ ನಿರೀಕ್ಷಕರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೂರು ಕುಟುಂಬಗಳು ಆರ್ಥಿಕವಾಗಿ ಹಿಂದುಳಿದಿದ್ದು ಬೆಂಕಿ ಅನಾಹುತದಿಂದಾಗಿ ತುಂಬಾ ತೊಂದರೆ ಅನುಭವಿಸುವಂತಾಗಿದೆ.

Mulki-14051601 Mulki-14051602 Mulki-14051603 Mulki-14051604 Mulki-14051605 Mulki-14051606

Comments

comments

Comments are closed.

Read previous post:
ಬಪ್ಪನಾಡು ದೇವಳ ಮೇ 15 ಸೀಯಾಳಾಭಿಷೇಕ

ಮೂಲ್ಕಿ: ಮೂಲ್ಕಿ ಸೀಮೆಯ ಒಂಭತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಳದ ಭಕ್ತರ ವತಿಯಿಂದ ಭೀಕರ ಬರಗಾಲವನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಮಳೆಗಾಗಿ ಮೇ 15 ರ ಬೆಳಿಗ್ಗೆ 8...

Close