ಖಂಡೇವು ಮೀನು ಬೇಟೆ

ಸುರತ್ಕಲ್: ಸುರತ್ಕಲ್ ಸಮೀಪದ ಖಂಡಿಗೆ ಶ್ರೀ ಧರ್ಮರಸು ಉಳ್ಳಾಯ ದೈವಸ್ಥಾನದ ಜಾತ್ರಾ ಮಹೋತ್ಸವದಂದು ಮೀನು ಹಿಡಿಯುವ ಜಾತ್ರೆ ನಡೆಯಿತು.
ತುಳುನಾಡಿನಲ್ಲಿ ಎರ್ಮಾಳು ಜೆಪ್ಪು ಖಂಡೇವು ಅಡೆಪು ನಾಣ್ಣುಡಿ ಜಾರಿಯಲ್ಲಿದೆ. ಉಡುಪಿ ಜಿಲ್ಲೆಯ ಎರ್ಮಾಳು ದೇವಳದಲ್ಲಿ ಜಾತ್ರೆ ಪ್ರಾರಂಭಗೊಳ್ಳುವ ಮೂಲಕ ಅವಿಭಜಿತ ದ.ಕ. ಉಡುಪಿ ಜಿಲ್ಲೆಯಲ್ಲಿ ಜಾತ್ರೆಗಳು ಪ್ರಾರಂಭಗೊಂಡು ಖಂಡಿಗೆ ಶ್ರೀ ಧರ್ಮರಸು ಕ್ಷೇತ್ರದ ಜಾತ್ರೆಯೊಂದಿಗೆ ಎಲ್ಲಾ ಜಾತ್ರೆಗಳು ಮುಕ್ತಾಯವಾಗುತ್ತದೆ, ಚೇಳಾಯರು ಗ್ರಾಮದ ಖಂಡಿಗೆಯ ಇತಿಹಾಸ ಪ್ರಸಿದ್ಧ ಶ್ರೀ ಧರ್ಮರಸು ಕ್ಷೇತ್ರವು ಪಾವಂಜೆ ರಾಷ್ಟ್ರೀಯ ಹೆದ್ದಾರಿ ಸೇತುವೆ ಸಮೀಪ ನಂದಿನಿ ನದಿಯ ತಟದಲ್ಲಿದ್ದು ದೈವಸ್ಥಾನದಲ್ಲಿ ವರ್ಷಾವಧಿ ಜಾತ್ರೆ ಪ್ರತಿ ವರ್ಷ ಮೇ ತಿಂಗಳಲ್ಲಿ ಬರುವ ವೃಷಭ ಸಂಕ್ರಮಣದಂದು ನಡೆಯುತ್ತದೆ. ಈ ನದಿಯಲ್ಲಿ ಮೀನು ಹಿಡಿಯುವ ಪದ್ದತಿ ಹಿಂದಿನಿಂದಲೂ ಬೃಹತ್ ಮಟ್ಟದಲ್ಲಿ ನಡೆಯುತ್ತದೆ. ವೃಷಭ ಸಂಕ್ರಮಣದಂದು ಬೆಳಿಗ್ಗೆ 7 ರ ಸುಮಾರಿಗೆ ದೈವಳದಲ್ಲಿ ಸಂಭಂದ ಪಟ್ಟವರು ದೈವಕ್ಕೆ ಪ್ರಾಥನೆ ಸಲ್ಲಿಸಿ ನಂದಿನಿ ನದಿಯ ದಡಕ್ಕೆ ಆಗಮಿಸಿ ನದಿಗೆ ಪ್ರಸಾದ ಹಾಕಿ ಅದೇ ಸಂದರ್ಭ ಸುಡು ಮದ್ದು ಸಿಡಿಸಲಾಗುತ್ತದೆ ತಕ್ಷಣ ಮೀನು ಹಿಡಿಯಲು ಬಂದ ಜನರು ನದಿಗೆ ಧುಮುಕಿ ಮೀನು ಹಿಡಿಯಲು ತೊಡಗುತ್ತಾರೆ, ಬೆಳಿಗ್ಗೆ 7 ಗಂಟೆಯಿಂದ ಮದ್ಯಾಹ್ನದವರೆಗೂ ಮೀನು ಹಿಡಿದು, ಹಿಡಿದ ಮೀನನ್ನು ಮನೆಗೆ ತೆಗೆದು ಕೊಂಡು ಹೋಗಿ, ಸತ್ತ ತಮ್ಮ ಪ್ರೇತಾತ್ಮಗಳಿಗೆ ಬಡಿಸುವ ಕ್ರಮ ಇಲ್ಲಿಯದು, ಇದು ಈಗಲೂ ಹೆಚ್ಚಿನ ಮನೆಗಳಲ್ಲಿ ಆಚರಿಸಿಕೊಂಡೂ ಬರುತ್ತಿದ್ದಾರೆ, ಕೆಲವರು ವ್ಯಾಪಾರದ ದೃಷ್ಟಿಯಿಂದ ಇಲ್ಲಿ ಹಿಡಿದ ಮೀನನ್ನು ಅಲ್ಲಿಯೇ ಮಾರುತ್ತಾರೆ. ವರ್ಷದಲ್ಲಿ ಒಂದು ದಿನ ಇಲ್ಲಿನ ಮೀನನ್ನು ಪದಾರ್ಥ ಮಾಡಿ ತಿನ್ನುವುದೇ ಇಲ್ಲಿನ ದೈವದ ಪ್ರಸಾದವೆಂದು ಭಕ್ತರು ನಂಬುವುದರಿಂದ ಜಾತ್ರೆಗೆ ವಿಶೇಷ ಪ್ರಾಮುಖ್ಯತೆ ದೊರೆತಿದೆ, ಇಲ್ಲಿನ ಮೀನು ಅತ್ಯಂತ ರುಚಿಕರವಾಗಿರುತ್ತದೆ.
ಬೆಳಿಗ್ಗೆ ಮೀನು ಹಿಡಿಯುವ ಜಾತ್ರೆಯಾದರೆ ಕ್ಷೇತ್ರದಲ್ಲಿ ರಾತ್ರಿ ಧಾರ್ಮಿಕ ಕಾರ್ಯಕ್ರಮ ಬಳಿಕ ಧ್ವಜಾವರೋಹಣ ನಡೆಯುತ್ತದೆ ಅಲ್ಲಿಗೆ ತುಳುನಾಡಿನಲ್ಲಿ ಹೆಚ್ಚಿನ ಜಾತ್ರೆ, ನೇಮೋತ್ಸವಗಳು ಅಂತ್ಯಗೊಳ್ಳುತ್ತಿದೆ. ಏನೇ ಆಗಲಿ ಆಧುನಿಕ ಯುಗದಲ್ಲೂ ಇಂತಹ ಸಂಸ್ಕ್ರತಿಯೊಂದು ನಡೆದುಕೊಂಡು ಬರುತಿರುದು ವಿಶೇಷವೇ ಸರಿ.

ಮೀನು ಹಿಡಿಯಲು ಒಂದು ತಿಂಗಳು ನಿಷೇದ
ಮೇಷ ಸಂಕ್ರಮಣ ದಿಂದ ವ್ರಷಭ ಸಂಕ್ರಮಣದ ತನಕ ಇಲ್ಲಿ ಮೀನು ಹಿಡಿಯಲು ನಿಷೇದವಿದೆ, ಮೇಷ ಸಂಕ್ರಮಣದಂದು ನದಿಗೆ ಪ್ರಸಾದ ಹಾಕಿದ ನಂತರ ಇಲ್ಲಿ ಮೀನು ಹಿಡಿಯುದನ್ನು ನಿಲ್ಲಿಸಲಾಗುತ್ತದೆ, ಇದನ್ನು ಮೀರಿ ನಡೆಯುವಂತಿಲ್ಲ, ಹಿಂದೆ ಈ ನಂಬಿಕೆಯನ್ನು ಮೀರಿ ಮೀನು ಹಿಡಿದ ಪರಿಣಾಮ ಮೀನು ಹಿಡಿಯುತ್ತಿದ್ದ ಬಲೆಯಲ್ಲಿ ನಾಗರಹಾವು ಬಂದ ಉದಾಹರಣೆಗಳಿವೆಯಂತೆ.

ಖಂಡಿಗೆ ಬಹಳ ಪ್ರಸಿದ್ದವಾದ ಜಾತ್ರೆ ಇಲ್ಲಿನ ನಂದಿನಿ ನದಿಯಲ್ಲಿ ಮೀನು ಹಿಡಿಯುದು ವಿಶೇಷ, ಇದು ತುಳು ನಾಡಿನ ಸಂಸ್ಕ್ರತಿಯಲ್ಲೊಂದು, ಪವಿತ್ರ ನಂದಿನಿ ನದಿಯಲ್ಲಿ ಮೀನು ಹಿಡಿಯಲೆಂದೇ ಜಾತಿ ಧರ್ಮದ ಬೇಧವನ್ನು ಮರೆತು ಹಿಂದು, ಮುಸ್ಲಿಮ್, ಕ್ರೈಸ್ತರು ಒಟ್ಟಾಗಿ ಮೀನು ಹಿಡಿಯುತ್ತಾರೆ, ಮುಂದಿನ ದಿನಗಳಲ್ಲಿಯೂ ನದಿ ಅಪವಿತ್ರವಾಗದಂತೆ ನೋಡಿಕೊಂಡು ಈ ಸಂಸ್ಕ್ರತಿಯನ್ನು ಮುಂದುವರಿಸಿಕೊಂಡು ಹೋಗುತ್ತೇವೆ.
ಅದಿತ್ಯ ಮುಕ್ಕಾಲ್ದಿ, ಖಂಡಿಗೆ ಬೀಡು.

ನಾನು ಸುಮಾರು 42 ವರ್ಷದಿಂದ ಪ್ರತೀ ವರ್ಷ ಇಲ್ಲಿ ಮೀನು ಹಿಡಿಯುತ್ತೇನೆ, ಹಿಂದಿನ ದಿನಗಳಲ್ಲಿ ಸುಸಜ್ಜಿತ ಸಂಚಾರದ ವ್ಯವಸ್ಥೆ ಇಲ್ಲದಿದ್ದಾಗ ಹಿಂದಿನ ರಾತ್ರಿಯೇ ಇಲ್ಲಿಗೆ ಬಂದು ಪಕ್ಕದ ಗುಡ್ಡದಲ್ಲಿ ಆಸರೆ ಪಡೆದುಕೊಂಡು ಗೆಡ್ಡೆ ಗೆಣಸನ್ನು ತಿಂದು ಮುಂಜಾನೆ ನದಿಗೆ ಇಳಿಯುತ್ತಿದ್ದ ಕಾಲವೇ ಒಂದಿತ್ತು. ಇಂದಿನ ದಿನಗಳಲ್ಲಿ ಮೀನಿನ ಪ್ರಮಾಣ ಕಡಿಮೆಯಾದರೂ ಈ ಕ್ರಮ ಮುಂದುವರಿದಿದೆ
ದಯಾನಂದ ಸುವರ್ಣ.

Mulki-14051607 Mulki-14051608 Mulki-14051609 Mulki-140516010 Mulki-140516011 Mulki-140516012

Comments

comments

Comments are closed.

Read previous post:
Mulki-14051603
ಮೂಲ್ಕಿ ಬೆಂಕಿ ಆಕಸ್ಮಿಕ

ಮೂಲ್ಕಿ: ಮೂಲ್ಕಿ ಕಡವಿನ ಬಾಗಿಲು ಬಳಿ ನದಿ ತೀರದ ಮೂರು ಹಂಚಿನ ಮನೆಗಳಿಗೆ ಆಕಸ್ಮಿಕ ಬೆಂಕಿ ತಗಲಿ ಸಂಪೂರ್ಣ ಬೆಂಕಿಗಾಹುತಿಯಾಗಿದ್ದು ಲಕ್ಷಾಂತರ ರೂ ನಷ್ಟ ಸಂಭವಿಸಿದೆ. ಮೂಲ್ಕಿ...

Close