ಕೆಮ್ರಾಲ್ ಮನೆಗೆ ಸಿಡಿಲು

ಕಿನ್ನಿಗೋಳಿ: ಭಾನುವಾರ ಮುಂಜಾನೆ ಸಿಡಿಲು ಗುಡುಗು ಸಹಿತ ಸುರಿದ ಮಳೆಗೆ ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುರಗಿರಿ ಸಮೀಪದ ಪಡ್ಪು ನಿವಾಸಿ ತಿಮಪ್ಪ ಪೂಜಾರಿ ಅವರ ಮನೆಗೆ ಸಿಡಿಲು ಬಡಿದು ಹಾನಿಯಾಗಿದೆ.
ಮುಂಜಾನೆ ಸುಮಾರು 3 ಗಂಟೆಯ ಹೊತ್ತಿಗೆ ಮನೆಯವರು ಮಲಗಿದ್ದ ಸಂದರ್ಭ ಮನೆಗೆ ಸಿಡಿಲು ಬಡಿದು ಮನೆಯ ಮುಂಬಾಗದ ಗೋಡೆ ಬಿರುಕು ಬಿದ್ದಿದೆ, ಪಂಪು ಹಾಗೂ ಮನೆಯ ವಯರಿಂಗ್ ಸಂಪೂರ್ಣ ಸುಟ್ಟು ಹೋಗಿದ್ದು ಮನೆಯ ಒಳಗಿದ್ದ ವಸ್ತುಗಳಿಗೆ ಹಾನಿಯಾಗಿದೆ. ಮನೆ ಮುಂಬಾಗದ ತೆಂಗಿನ ಮರಕ್ಕೂ ಸಿಡಿಲು ಬಡಿದಿದೆ. ಸ್ಥಳಕ್ಕೆ ಜನಪ್ರತಿನಿಧಿಗಳು ಭೇಟಿ ನೀಡಿದ್ದಾರೆ.

Kinnigoli-16051603

Comments

comments

Comments are closed.

Read previous post:
Kinnigoli-16051602
ವಿಪ್ರ ಸಮಾಗಮ- 2016 ಉದ್ಘಾಟನೆ

ಕಿನ್ನಿಗೋಳಿ: ಸಂಘಟನಾ ಶಕ್ತಿಯಿಂದ ಸಮಾಜದ ಏಳಿಗೆ ಹಾಗೂ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕಟೀಲು ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು. ಪುನರೂರು ವಿಶ್ವನಾಥ ದೇವಳದಲ್ಲಿ ಪುನರೂರು ವಿಪ್ರ ಸಂಪದ ಆಶ್ರಯದಲ್ಲಿ...

Close