ಮೂಲ್ಕಿ-ಕಕ್ವದಲ್ಲಿ ಮಳೆಗೆ ಹಾನಿ

ಮೂಲ್ಕಿ: ಅತಿಕಾರಿಬೆಟ್ಟು ಗ್ರಾಮ ಪಂಚಾಯಿತಿ ಕಕ್ವ ಮುರ ಎಂಬಲ್ಲಿ ಸುರಿದ ಭಾರೀ ಮಳೆ ಬಿರುಗಾಳಿಗೆ ರಮಣಿ ಪೂಜಾರ್ತಿ ಎಂಬವರ ಮನೆಯ ಮೇಲೆ ಮರ ಬಿದ್ದು ಹಾಗೂ ಮನೆಯಂಗಳದಲ್ಲಿ ನಿಲ್ಲಿಸಿದ್ದ ಬೈಕಿಗೂ ಹಾನಿಯಾಗಿದೆ.
ಭಾನುವಾರ ಬೆಳಗ್ಗೆ ಸುಮಾರು 3 ಗಂಟೆಗೆ ಸುರಿದ ಭಾರೀ ಮಳೆ ಹಾಗೂ ಬಿರುಗಾಳಿಗೆ ರಮಣಿ ಅವರ ಮನೆಯ ಎದುರು ಇದ್ದ ಬಾರಿ ಗಾತ್ರದ ಮರ ಮನೆಯ ಮೇಲೆ ಬಿದ್ದಿದೆ. ಮನೆಯಲ್ಲಿ 3 ವರ್ಷದ ಮಗು ಸಹಿತ 12 ಜನ ಭಾರೀ ಅಪಾಯದಿಂದ ಪಾರಾಗಿದ್ದಾರೆ. ಮರ ಬಿದ್ದ ರಭಸಕ್ಕೆ ಮನೆಯ ಒಂದು ಪಾರ್ಶ್ವ ನೆಲಸಮವಾಗಿದ್ದು, ಮನೆಯ ಎದುರು ನಿಲ್ಲಿಸಿದ್ದ ಬೈಕು ಜಖಂಗೊಂಡು ಒಟ್ಟಾರೆ ಅಲ್ಪ ನಷ್ಟ ಸಂಭವಿಸಿದೆ. ಸ್ಥಳಕ್ಕೆ  ಪಂಚಾಯಿತಿ ಅಧಿಕಾರಿ ಹಾಗೂ ಉಪಾಧ್ಯಕ್ಷ, ಪಂಚಾಯಿತಿ ಸದಸ್ಯ ಭೇಟಿ ನೀಡಿದ್ದಾರೆ.
ಮೂಲ್ಕಿ ಪರಿಸರದ ಪಂಜಿನಡ್ಕ, ಚಿತ್ರಾಪು, ಕಿನ್ನಿಗೋಳಿ, ಹಳೆಯಂಗಡಿ ಭಾರಿ ಮಳೆಯಿಂದ ಮರದ ಗೆಲ್ಲು ಬಿದ್ದು ವಿದ್ಯುತ್ ಪೂರ‍್ಯಕೆ ಕೈಗೊಟ್ಟಿತು.

Mulki-16051606 Mulki-16051607

Comments

comments

Comments are closed.

Read previous post:
Kinnigoli-16051605
ಹಳೆಯಂಗಡಿ ಮೆಡಿಕಲ್ ಗೆ ಆಕಸ್ಮಿಕ ಬೆಂಕಿ

ಮೂಲ್ಕಿ: ಹಳೆಯಂಗಡಿ ಒಳಪೇಟೆಯಲ್ಲಿರುವ ಮೆಡಿಕಲ್ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ  ಸ್ಥಳೀಯರು  ನೀರು ಹಾಯಿಸಿ ಬೆಂಕಿ ನಂದಿಸಿದ್ದಾರೆ.    ಹಳೆಯಂಗಡಿ ಒಳಪೇಟೆಯ ಬಾರ್ ಪಕ್ಕದಲ್ಲಿ ಹೊಸದಾಗಿ ಆರಂಭಗೊಂಡ ಅಭಿ...

Close