ಮೂಲ್ಕಿ: ರಕ್ತದಾನ ಶಿಬಿರ

ಮೂಲ್ಕಿ: ಜಿ.ಎಸ್.ಬಿ. ಸಭಾ ಮೂಲ್ಕಿ ಮತ್ತು ವೆನ್‌ಲಾಕ್ ಆಸ್ಪತ್ರೆ ಮಂಗಳೂರು ಸಂಯೋಜನೆಯಲ್ಲಿ ರಕ್ತದಾನ ಶಿಬಿರವು ಭಾನುವಾರ ಬೆಳಿಗ್ಗೆ ಮೂಲ್ಕಿ ಕೆನರಾ ಬ್ಯಾಂಕ್ ಮಹಡಿಯಲ್ಲಿರುವ ಶ್ರೀಧರ ಪದ್ಮನಾಭ ಕಾಮತ್ ಸ್ಮಾರಕ(ಜಿ.ಎಸ್.ಬಿ) ಸಭಾಗೃಹದಲ್ಲಿ ನಡೆಯಿತು. ಮೂಲ್ಕಿ ಶ್ರೀ ವೆಂಕಟರಮಣ ದೇವಳದ ಗೋಕುಲ್ ಕಾಮತ್ ಪ್ರಥಮ ದಾನಿಯಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಜಿಲ್ಲಾ ರಕ್ತ ನಿಧಿ ಕೇಂದ್ರದ ಹಿರಿಯ ಸರ್ಜನ್ ಡಾ. ಶರತ್ ಕುಮಾರ್ ರಾವ್ ಜೆ, ತಾಂತ್ರಿಕ ನಿರ್ವಾಹಕ ಆಂಟನಿ ಡಿಸೋಜಾ, ಜಿ.ಎಸ್.ಬಿ. ಸಭಾ ಅಧ್ಯಕ್ಷ ಸತ್ಯೇಂದ್ರ ಶೆಣೈ,ಉಪಾಧ್ಯಕ್ಷ ಜಿ.ಜಿ.ಕಾಮತ್,ಮೂಲ್ಕಿ ವೆಂಕಟರಮಣ ದೇವಸ್ಥಾನದ ಟ್ರಸ್ಟಿ ನಾರಾಯಣ ಶೆಣೈ,ಹರೀಶ್ ಕಾಮತ್, ವಿಶ್ವನಾಥ ಶೆಣೈ, ಯು.ಬಾಬುರಾಯ ಶೆಣೈ, ಯು.ಸುರೇಂದ್ರ ಶೆಣೈ, ಪಣಜಿ ಕರ್ನಾಟಕ ಬ್ಯಾಂಕ್ ಪ್ರಭಂದಕರಾದ ಪಾಂಡುರಂಗ ಭಟ್,ಮವಿಷ್ಣುದಾಸ ಭಟ್,ಡಾ.ಚಂದ್ರಕಾಂತ ಭಟ್ ಉಪಸ್ಥಿತರಿದ್ದರು.

Mulki-16051605

Comments

comments

Comments are closed.

Read previous post:
Mulki-16051604
ಬಪ್ಪನಾಡು : ಸಾಮೂಹಿಕ ಪ್ರಾರ್ಥನೆ

ಮೂಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮಳೆಗಾಗಿ ಪ್ರಾರ್ಥಿಸಿ ಬಪ್ಪನಾಡು 9 ಮಾಗಣೆಯ ಗ್ರಾಮಸ್ಥರಿಂದ ಭಾನುವಾರ ಸೀಯಾಳಾಭಿಷೇಕ ನಡೆಯಿತು.ಕ್ಷೇತ್ರದ ಅರ್ಚಕ ನರಸಿಂಹ ಭಟ್ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು....

Close