ವಿಪ್ರ ಸಮಾಗಮ- 2016 ಉದ್ಘಾಟನೆ

ಕಿನ್ನಿಗೋಳಿ: ಸಂಘಟನಾ ಶಕ್ತಿಯಿಂದ ಸಮಾಜದ ಏಳಿಗೆ ಹಾಗೂ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕಟೀಲು ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು.
ಪುನರೂರು ವಿಶ್ವನಾಥ ದೇವಳದಲ್ಲಿ ಪುನರೂರು ವಿಪ್ರ ಸಂಪದ ಆಶ್ರಯದಲ್ಲಿ ಭಾನುವಾರ ನಡೆದ ವಿಪ್ರಸಮಾಗಮ – 2016 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪುನರೂರು ದೇವಳ ಆಡಳಿತ ಮೊಕ್ತೇಸರ ಪಟೇಲ್ ವೆಂಕಟೇಶ ರಾವ್, ಧರ್ಮದರ್ಶಿ ಹರಿಕೃಷ್ಣ ಪುನರೂರು, ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಉದ್ಯಮಿ ಕೃಷ್ಣ ಭಟ್ ಕದ್ರಿ, ಶ್ಯಾಮಸುಂದರ್ ರಾವ್, ವಿಪ್ರಸಂಪದ ಅಧ್ಯಕ್ಷ ಸುರೇಶ್ ರಾವ್ ನೀರಳಿಕೆ, ದೇವಪ್ರಸಾದ್ ಪುನರೂರು, ಪಟೇಲ್ ವಾಸುದೇವ ರಾವ್, ಪಟೇಲ್ ವಿಶ್ವನಾಥ ರಾವ್, ಉಪಾಧ್ಯಕ್ಷರಾದ ಭಾರತೀ ರಾವ್, ವಿಶ್ವನಾಥ್ ಭಟ್, ಕಾರ್ಯದರ್ಶಿ ಸುಧಾಕರ ರಾವ್, ಕಾಶಿ ವಿಶ್ವನಾಥ ರಾವ್, ರಾಘವೇಂದ್ರ ರಾವ್, ಮುರಳೀಧರ ಆಚಾರ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-16051602

Comments

comments

Comments are closed.

Read previous post:
Kinnigoli-16051601
ಪುನರೂರು: ವಿಪ್ರ ಸಂಪದ ಶಾಲಾ ಪುಸ್ತಕ ವಿತರಣೆ

ಕಿನ್ನಿಗೋಳಿ:  ಪುನರೂರು ವಿಪ್ರ ಸಂಪದ ಆಶ್ರಯದಲ್ಲಿ ಶನಿವಾರ ನಡೆದ ವೇದ ಪಾಠ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಪುನರೂರು ದೇವಳದ ಮೊಕ್ತೇಸರ ಪಟೇಲ್ ವೆಂಕಟೇಶ್ ರಾವ್ 40 ಕ್ಕೂ ಮಿಕ್ಕಿ...

Close