ಮೂಲ್ಕಿ: ಸಾಹಿತ್ಯ ಸಂಜೆ

ಮೂಲ್ಕಿ: ಸಾಹಿತ್ಯ ಜಿಂತನಾ ಕೂಟಗಳು ಸಾಹಿತ್ಯ ಮತ್ತು ಸಮಾಜದ ಅಭಿವೃದ್ಧಿಗೆ ಪೂರಕ ವಿಷಯಗಳನ್ನು ತಿಳಿಸುವುದರಿಂದ ಸಂಸ್ಕೃತಿ ಮತ್ತು ಸಂಸ್ಕಾರದ ಉನ್ನತಿ ಸಾಧ್ಯವಾಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.
ಶಾಂಭವೀ ಸಾಹಿತ್ಯ ಕಲಾ ವೇದಿಕೆ ಮೂಲ್ಕಿ ಮತ್ತು ಮೂಲ್ಕಿ ರೋಟರಿ ಕ್ಲಬ್ ಇವರ ಸಂಯುಕ್ತ ಆಶ್ರಯದಲ್ಲಿ ಐಸಿರಿ ವೇದಿಕೆಯಲ್ಲಿ ನಡೆದ ಸಾಹಿತ್ಯ ಸಂಜೆ ಕಾರ್ಯುಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಾನಪದ ವಿದ್ವಾಂಸ ಡಾ.ವೈ.ಎನ್.ಶೆಟ್ಟಿಯವರು ಮಾತನಾಡಿ, ಪೂರ್ವಿಕರು ನೀಡಿರುವ ಆಚಾರ ವಿಚಾರಗಳು ಹಾಗೂ ಸಂಸ್ಕಾರ ಸಂಪೂರ್ಣ ವೈಜ್ಞಾನಿಕ ತಳಹದಿಯನ್ನು ಹೊಂದಿದ್ದು ಇಲ್ಲಿನ ಕಟ್ಟಳೆಗಳು ಈ ಕರಾವಳಿ ಮಣ್ಣಿನ ಸೊಗಡಾಗಿದ್ದು ಎಲ್ಲಾ ಜಾತಿ ಧರ್ಮದ ಜನತೆ ಆಚರಿಸುವಂತವುಗಳಾಗಿವೆ ಎಂದರು.
ಈ ಸಂದರ್ಭ ಭಾರತೀಯ ಬದುಕಿನಲ್ಲಿ ಸಂಸ್ಕಾರಗಳು ಮತ್ತು ಸೀಮಂತೋನ್ನಯನ ವಿಷಾರವಾಗಿ ಪ್ರಭಂದ ಮಂಡಿಸಿದ ಹಿರಿಯ ವಿದ್ವಾಂಸ ಡಾ.ಸೋಂದಾ ಭಾಸ್ಕರ ಭಟ್ ಮಾತನಾಡಿ, ಭಾರತ ದೇಶ ವಿಶ್ವಮಾನ್ಯವಾಗಲು ಇಲ್ಲಿ ಭಾಷೆ ಸಂಸ್ಕೃತ ಮತ್ತು ಇಲ್ಲಿನ ಸಂಸ್ಕಾರಗಳು ಕಾರಣ ಜನ ಜೀವನದಲ್ಲಿ ಮುಖ್ಯವಾಗಿರುವ ಷೋಡಷ ಸಂಸ್ಕಾರಗಳು ತಾಯಿಯ ಗರ್ಭದಿಂದ ಪ್ರಾರಂಭಗೊಂಡು ವ್ಯಕ್ತಿಯ ಮರಣದ ವರೆಗಿನ ಮುಖ್ಯ ಸಂಸ್ಕಾರಗಳಾಗಿದ್ದು ಇವು ಅತೀವ ವೈಜ್ಞಾನಿಕ ಮತ್ತು ಆರೋಗ್ಯ ಪೂರ್ಣ ಜೀವನ ನಿರ್ವಹಣೆಗೆ ಪೂರಕವಾಗಿವೆ ಎಂದರು.
ತುಳು ಜಾನಪದ ಬದುಕಿನಲ್ಲಿ ಬಯಕೆ(ಸೀಮಂತ) ಎಂಬ ವಿಷಯವಾಗಿ ಪ್ರಭಂದ ಮಂಡಿಸಿದ ಹಿರಿಯ ಪತ್ರಕರ್ತ ಪರಮಾನಂದ ಸಾಲ್ಯಾನ್ ಸಸಿಹಿತ್ಲು ಮಾತನಾಡಿ, ಕರಾವಳಿಯ ಜನತೆ ತಮ್ಮ ಜೀವನದ ಅನುಭವವನ್ನು ಧಾರೆ ಎರೆದು ರೂಪಿಸಿದ ಕಟ್ಟುಪಾಡುಗಳು ಹಾಗೂ ಸಂಸ್ಕಾರಗಳಲ್ಲಿ ಬಯಕೆ ಬಹುಮುಖ್ಯವಾಗಿದೆ ಹೊಸಜೀವವನ್ನು ಸ್ವಾಗತಿಸುವ ಪ್ರಕ್ರಿಯೆಗೆ ಪೂರ್ವಭಾವಿಯಾಗಿ ತಾಯಿಯ ಮನಸ್ಸಿನ ಭಯ ನಿವಾರಣೆಯ ಜೊತೆಗೆ ಆಕೆಯ ಆಸೆ ಆಕಾಂಕ್ಷೆಗಳನ್ನು ಪೂರೈಸುವುದು ಬಯಕೆಯ ಮುಖ್ಯ ಕಾರ್ಯವಾಗಿದೆ ಎಂದರು. ಬಲ್ಲಿರೇನಯ್ಯ ಯಕ್ಷ ಮಾಸಿಕದ ಸಂಪಾದಕ ಮತ್ತು ಯಕ್ಷ ಕಲಾವಿದ ತಾರಾನಾಥ ವರ್ಕಾಡಿ ಅನ್ಯ ಮತಗಳಲ್ಲಿ ಗರ್ಭಸ್ಥ ಸ್ತ್ರೀಯರಿಗೆ ಸಂಸ್ಕಾರಗಳು ಎಂಬ ವಿಷಯವಾಗಿ ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ರವರು ಸ್ವ ರಚಿತ ಕವನ ವಾಚಿಸಿ, ಅಂದಿನ ಕಷ್ಟದ ದಿನಗಳಲ್ಲಿ ಗರ್ಭಿಣಿ ಸ್ತ್ರೀಯರು ಶ್ರಮ ಜೀವನದ ಜೊತೆಗೆ ಆರೋಗ್ಯಪೂರ್ಣತೆಯಿಂದ ಬದುಕು ಸಾಗಿಸಿದ ಪರಿ ಇಂದಿನ ದಿನದ ಗರ್ಬಿಣಿಯರು ಸುಖ: ಜೀವನದಲ್ಲಿ ಆರೋಗ್ಯ ಕಳೆದುಕೊಂಡುಮದ್ದಿಗೆ ಶರಣಾಗುವ ಅವಸ್ಥೆಯನ್ನು ತಮ್ಮ ಕವಿತೆಯಲ್ಲಿ ಬಣ್ಣಿಸಿದರು.
ಕವಿಗಳಾದ ಅಂಡಾರು ಗಂಗಾಧರ ಶೆಟ್ಟಿ, ಸೌದಾಮಿನಿ, ಪ್ರೊ.ಸುಧಾರಾಣಿ,ಡಾ.ಹರಿ ಪ್ರಸಾದ್ ಶೆಟ್ಟಿ, ರಾಜಲಕ್ಷ್ಮಿ ಜಿಂಗಾದೆ ಕವನ ವಾಚಿಸಿದರು.
ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಧ್ಯಕ್ಷ ಪ್ರದೀಪಕುಮಾರ್ ಕಲ್ಕೂರಾ,ಯುಗಪುರುಷ ಪ್ರಧಾನ ಸಂಪಾದಕ .ಕೆ.ಭುವನಾಭಿರಾಮ ಉಡುಪ,ವಿಜಯಾ ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಆರ್.ಶಂಕರ್,ಉದ್ಯಮಿ ಜೀವನ್.ಕೆ.ಶೆಟ್ಟಿ ಅತಿಥಿಗಳಾಗಿದ್ದರು.ಮೂಲ್ಕಿ ರೋಟರಿ ಅಧ್ಯಕ್ಷ ರವಿಚಂದ್ರ ಸ್ವಾಗತಿಸಿದರು. ಶಾಂಭವೀ ಸಾಹಿತ್ಯ ಕಲಾ ವೇದಿಕೆಯ ಅಧ್ಯಕ್ಷ ಎನ್.ಪಿ.ಶೆಟ್ಟಿ ಪ್ರಸ್ತಾವನೆ ಮಂಡಿಸಿದರು. ಪ್ರೊ.ವಿಷ್ಣು ಮೂರ್ತಿ ನಿರೂಪಿಸಿದರು. ಅಶೋಕ್ ಕುಮಾರ್ ಶೆಟ್ಟಿ ವಂದಿಸಿದರು ಬಳಿಕ ರಂಗ ಸುದರ್ಶನ ಸಸಿಹಿತ್ಲು ರವರಿಂದ ಅಮರ್ ಸಿರಿಕುಲು ಎಂಬ ಗೀತಾ ನಾಟಕ ನಡೆಯಿತು.

Mulki-17051602

Comments

comments

Comments are closed.

Read previous post:
Mulki-17051601
ಸಾಪ್ತಾಯಿಕ ಭಜನಾ ಕಾರ್ಯಕ್ರಮ

ಮೂಲ್ಕಿ: ಗ್ರಾಮೀಣ ವಲಯದ ಜನಜೀವನ ಉನ್ನತಿ ಹಾಗೂ ಸಂಘಟನೆಗಾಗಿ ಕಾರ್ನಾಡು ಹರಿಹರ ಕ್ಷೇತ್ರದಲ್ಲಿ ಯುವಕ ವೃಂದ ಸ್ಥಾಪಿಸಿ ವಿವಿಧ ಸೇವಾ ಕಾರ್ಯಗಳು ಮತ್ತು ಭಜನಾ ಸಂಕೀರ್ಥನೆ ಪ್ರಾರಂಭಿಸಿದ...

Close