ಸಾಪ್ತಾಯಿಕ ಭಜನಾ ಕಾರ್ಯಕ್ರಮ

ಮೂಲ್ಕಿ: ಗ್ರಾಮೀಣ ವಲಯದ ಜನಜೀವನ ಉನ್ನತಿ ಹಾಗೂ ಸಂಘಟನೆಗಾಗಿ ಕಾರ್ನಾಡು ಹರಿಹರ ಕ್ಷೇತ್ರದಲ್ಲಿ ಯುವಕ ವೃಂದ ಸ್ಥಾಪಿಸಿ ವಿವಿಧ ಸೇವಾ ಕಾರ್ಯಗಳು ಮತ್ತು ಭಜನಾ ಸಂಕೀರ್ಥನೆ ಪ್ರಾರಂಭಿಸಿದ ದಿ.ಎಂ.ಆರ್.ಎಚ್ ಪೂಂಜ ಮತ್ತು ಗುಂಡಾಲು ಮಹಾಬಲ ಶೆಟ್ಟಿ ಹಾಗೂ ಅವರಿಗೆ ಸಹಕಾರಿಯಾಗಿದ್ದ ದಿ.ರತ್ನಾಕರ ಬಿ.ರಾವ್ ರವರ ದೂರ ದರ್ಶಿತ್ವ ದಿಂದ ಸಂಘಟನೆ ಬೆಳೆದು ಭಜನಾ ಸುವರ್ಣ ಮಹೋತ್ಸವ ಆಚರಿಸುತ್ತಿದೆ ಎಂದು ಸಾಹಿತಿ ಎನ್.ಪಿ.ಶೆಟ್ಟಿ ಹೇಳಿದರು.
ಶ್ರೀ ಹರಿಹರ ಕ್ಷೇತ್ರ ಯುವಕ ವೃಂದ ಮತ್ತು ಮಹಿಳಾ ಮಂಡಳಿಯ ಸಂಯೋಜನೆಯಲ್ಲಿ ನಡೆಯುತ್ತಾ ಬಂದಿರುವ ಸೋಮವಾರದ ಸಾಪ್ತಾಯಿಕ ಭಜನಾ ಕಾರ್ಯಕ್ರಮದ ಸುವರ್ಣ ಮಹೋತ್ಸವ ಆಚರಣೆಯ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಜನಾ ಸಂಕೀರ್ಥನೆಯನ್ನು ಕ್ಷೇತ್ರದ ಆಡಳಿತ ಮೊಕ್ತೇಸರ ಎಂ.ಎಚ್.ಅರವಿಂದ ಪೂಂಜಾ,ಯುವಕ ವೃಂದದ ಅಧ್ಯಕ್ಷ ಹರ್ಷರಾಜ ಶೆಟ್ಟಿ ಜಿಎಂ,ದಿ.ರತ್ನಾಕರ ಬಿ ರಾವ್ ರವರ ಪುತ್ರ ಕೃಷ್ಣರಾಜ್ ರಾವ್ ಜಂಟಿಯಾಗಿ ಭಜನಾ ದೀಪ ಉದ್ಘಾಟಿಸಿದರು.
ಈ ಸಂದರ್ಭ ಅತಿಥಿಗಳಾಗಿ ಸುರೇಂದ್ರ ಶೆಣೈ ಕಾರ್ನಾಡು, ಸತೀಶ ಭಂಡಾರಿ ಮೂಲ್ಕಿ,ಆನಂದ ದೇವಾಡಿಗ ಬಪ್ಪನಾಡು, ಕ್ಷೇತ್ರದ ಅರ್ಚಕ ರಾಜಾರಾಮ ಭಟ್, ಮೊಕ್ತೇಸರರಾದ ಕೃಷ್ಣ ಆರ್ ಶೆಟ್ಟಿ, ರವಿ ಕುಮಾರ್,ಸುಂದರ ಶೆಟ್ಟ, ಸುಧೀರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಹರ್ಷರಾಜ ಶೆಟ್ಟಿ ನಿರೂಪಿಸಿದರು.

Mulki-17051601

Comments

comments

Comments are closed.

Read previous post:
Kinnigoli-17051601
ಕಿನ್ನಿಗೋಳಿ ಮಳೆ ಹಾನಿ

ಕಿನ್ನಿಗೋಳಿ : ಸೋಮವಾರ ರಾತ್ರಿ ಸುರಿದ ಭಾರಿ ಗಾಳಿ ಮಳೆಗೆ ಕಿನ್ನಿಗೋಳಿ ಸಮೀಪದ ಕಿಲೆಂಜೂರು ಮಾಗಂದಡಿ ಸದಾನಂದ ಪೂಜಾರಿ ಎಂಬುವವರ ಮನೆಗೆ ಮರದ ರೆಂಬೆ ಬಿದ್ದು ಅಪಾರ ನಷ್ಟವಾಗಿದೆ,...

Close