ನಿಡ್ಡೋಡಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ

ನಿಡ್ಡೋಡಿ : ನಿಡ್ಡೋಡಿ ಶ್ರೀ ನಾರಾಯಣಗುರು ಪ್ರಸಾದಿತ ಸಂಘದ ವಾರ್ಷಿಕೋತ್ಸವ ಪ್ರಯುಕ್ತ ನಡೆದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಶಿರ್ತಾಡಿ ಸೋಮನಾಥ ಶಾಂತಿ ಅವರ ಪೌರೋಹಿತ್ಯದಲ್ಲಿ ನಡೆಯಿತು.
ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಜಯ ಪೂಜಾರಿ ಅಧ್ಯಕ್ಷತೆ ವಹಿಸಿದ್ದು ಸೋಮನಾಥ ಶಾಂತಿ ಆಶೀರ್ವಚನ ನೀಡಿದರು.
ಯು.ಪಿ.ಎಸ್.ಸಿ 2015ನೇ ಸಾಲಿನ ಪರೀಕ್ಷೆಯಲ್ಲಿ 387 ನೇ ರ‍್ಯಾಂಕ್ ಪಡೆದ ಮಿಶಾಲ್ ಕ್ವೀನಿ ಡಿಕೋಸ್ಟಾ, ಯುವ ಯಕ್ಷಗಾನ ಭಾಗವತ ರವಿಚಂದ್ರ ಕನ್ನಡಿಕಟ್ಟೆ ಹಾಗೂ ರಾಜ್ಯೋತ್ಸವ ಪ್ರಶಸ್ತಿ ವಿಜೇತ ರಾಜಶೇಖರ ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು. ಅನಾರೋಗ್ಯ ಪೀಡಿತ ಶ್ರೀಶ್ ಎಂಬ ಮಗುವಿಗೆ ವೈದ್ಯಕೀಯ ನೆರವನ್ನು ನೀಡಲಾಯಿತು, ಊರಿನ ಹತ್ತು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು,
ಈ ಸಂದರ್ಭ ರಾಜಶೇಖರ ಕೋಟ್ಯಾನ್, ರವಿಚಂದ್ರ ಕನ್ನಡಿಕಟ್ಟೆ, ಸುಂದರ ಪೂಜಾರಿ, ಸುಕುಮಾರ್ ಸನಿಲ್, ಎಸ್.ಎನ್.ಸಾಲ್ಯಾನ್, ದ.ಕ.ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ ಉಪಸ್ಥಿತರಿದ್ದರು.
ಶೇಖರ ಪೂಜಾರಿ ಅಜಾರು ಕಾರ್ಯಕ್ರಮ ನಿರೂಪಿಸಿದರು, ಸಂತೋಷ್ ಪಡೀಲು ಸ್ವಾಗತಿಸಿದರು, ಅಶ್ವತ್ಥ್ ಧನ್ಯವಾದವಿತ್ತರು. ಕಾರ್ಯಕ್ರಮದ ಬಳಿಕ ನಾರಾಯಣಗುರು ಚಲನಚಿತ್ರ ಪ್ರದರ್ಶಿತವಾಯಿತು.

Niddodi-17051601

Comments

comments

Comments are closed.

Read previous post:
Mulki-17051602
ಮೂಲ್ಕಿ: ಸಾಹಿತ್ಯ ಸಂಜೆ

ಮೂಲ್ಕಿ: ಸಾಹಿತ್ಯ ಜಿಂತನಾ ಕೂಟಗಳು ಸಾಹಿತ್ಯ ಮತ್ತು ಸಮಾಜದ ಅಭಿವೃದ್ಧಿಗೆ ಪೂರಕ ವಿಷಯಗಳನ್ನು ತಿಳಿಸುವುದರಿಂದ ಸಂಸ್ಕೃತಿ ಮತ್ತು ಸಂಸ್ಕಾರದ ಉನ್ನತಿ ಸಾಧ್ಯವಾಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್...

Close