ಶಿಸ್ತು ಸಂಸ್ಕಾರ ಬ್ರಾಹ್ಮಣತ್ವದ ಮೂಲ ತತ್ವ

ಕಿನ್ನಿಗೋಳಿ : ಜೀವನ ಪರ್ಯಂತ ಶಿಸ್ತು ಮತ್ತು ಸಂಸ್ಕಾರ ಪೂರ್ಣ ಬದುಕು ಬ್ರಾಹ್ಮಣತ್ವದ ಮೂಲ ತತ್ವವಾಗಿದೆ ಬ್ರಾಹ್ಮಣ ವರ್ಗದವರ ಶ್ರೇಯೋಬಿವೃದ್ಧಿ ಹಾಗೂ ಸಂಘಟನೆಗಾಗಿ ವಿಪ್ರ ಸಂಪದ ನಡೆಸುತ್ತಿರುವ ಕಾರ್ಯ ಸ್ತುತ್ಯರ್ಹ ಎಂದು ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು.
ಪುನರೂರು ಶ್ರೀ ವಿಶ್ವನಾಥ ದೇವಳದ ಪ್ರಾಂಗಣದಲ್ಲಿ ಪುನರೂರು,ತೋಕೂರು, ಕೆರೆಕಾಡು ವಲಯದ ವಿಪ್ರ ಸಂಪದ ಪುನರೂರು ಆಶ್ರಯದಲ್ಲಿ ನಡೆದ ವಿಪ್ರ ಸಮಾಗಮ ೨೦೧೬ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭ ಚಲನ ಚಿತ್ರ ಮತ್ತು ಕಿರುತೆರೆ ನಟಿ ಲಕ್ಷ್ಮೀ ಭಟ್ ಅವರನ್ನು ಸನ್ಮಾನಿಸಲಾಯಿತು. ವಿಪ್ರ ಸಮಾಜ ಭಾಂದವರಿಗಾಗಿ ನಡೆಸಿದ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಉದ್ಯಮಿ ಬಜ್ಪೆ ರಾಘವೇಂದ್ರ ಆಚಾರ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಹಿರಿಯ ಸಂಘಟಕ ಪಟೇಲ್ ವಾಸುದೇವ ರಾವ್ ಪುನರೂರು, ಉದ್ಯಮಿ ಕೃಷ್ಣ ಭಟ್ ಕದ್ರಿ, ಸುಧಾಕರ ರಾವ್ ಪೇಜಾವರ, ಜ್ಯೋತಿಷ್ಯರಾದ ಉಷಾ ವಿಶ್ವನಾಥ ಭಟ್, ವಿಪ್ರ ಸಂಪದ ಅಧ್ಯಕ್ಷ ಸುರೇಶ್ ರಾವ್ ನೀರಳಿಕೆ ಉಪಸ್ಥಿತರಿದ್ದರು.
ಪಟೇಲ್ ವಾಸುದೇವ ರಾವ್ ಪುನರೂರು ಸ್ವಾಗತಿಸಿದರು. ಗಣಪತಿ ಆಚಾರ್ ವಂದಿಸಿದರು. ಶಿಲ್ಪಾ ರಾವ್ ಕಾರ್ಯಕ್ರಮ ನಿರೂಪಿಸಿದರು.

Kinnigoli-18051601

Comments

comments

Comments are closed.