ಕಿನ್ನಿಗೋಳಿ ಬಂದ್

ಕಿನ್ನಿಗೋಳಿ : ದ.ಕ ಜಿಲ್ಲೆಗೆ ಹಾನಿಕಾರಕವಾದ ಎತ್ತಿನ ಹೊಳೆ ಯೋಜನೆಯನ್ನು ವಿರೋಧಿಸಿ ನೇತ್ರ್ರಾವತಿ ಸಂರಕ್ಷಣಾ ಸಮಿತಿಯ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡ ದ.ಕ. ಜಿಲ್ಲಾ ಬಂದ್ ಮೂಲ್ಕಿ ಹೋಬಳಿಯಲ್ಲಿ ಸಂಪೂರ್ಣ ಯಶಸ್ವಿಯಾಗಿದೆ.
ಖಾಸಗಿ ಸರ್ವಿಸ್ ಬಸ್ಸುಗಳು ಬಸ್ಸು ಸಂಚಾರ ಸ್ಥಗಿತಗೊಳಿಸಿರುವುದರಿಂದ ಬಂದ್ ಬಹುತೇಕ ಯಶಸ್ವಿಯಾಗಿದೆ. ಕಿನ್ನಿಗೋಳಿ, ಪಕ್ಷಿಕೆರೆ, ಮೂರುಕಾವೇರಿ, ಪರಿಸರದಲ್ಲಿ ಹೆಚ್ಚಿನ ಅಂಗಡಿ ಮುಂಗಟ್ಟುಗಳು ಬಂದ್‌ಗೆ ಬೆಂಬಲ ನೀಡಿ ವ್ಯವಹಾರಗಳನ್ನು ಮುಚ್ಚಿದ್ದು ಬ್ಯಾಂಕ್ ಹಾಗೂ ಸರಕಾರಿ ಕಛೇರಿಗಳು ತೆರೆದಿತ್ತು. ಬಸ್ಸು ಸಂಚಾರವಿಲ್ಲದ ಕಾರಣ ಜನರು ಖಾಸಗಿ ವಾಹನಗಳಲ್ಲಿ ಪ್ರಯಾಣಿಸುತ್ತಿರುವುದು ಕಂಡು ಬಂದಿದೆ. ರಿಕ್ಷಾ,ಕಾರು ಹಾಗೂ ಟೆಂಪೋಗಳ ಸಂಘಟನೆಗಳು ಬಂದ್ ಗೆ ಬೆಂಬಲ ವ್ಯಕ್ತಪಡಿಸಿ ರಸ್ತೆಗೆ ಇಳಿಯಲಿಲ್ಲ.
ಕಿನ್ನಿಗೋಳಿ ಬಸ್ಸು ನಿಲ್ದಾಣದಲ್ಲಿ ಬಸ್ಸು ಸಂಚಾರವಿಲ್ಲದ ಕಾರಣ ಬಿಕೋ ಅನ್ನುತ್ತಿತ್ತು. ಕಿನ್ನಿಗೋಳಿಯಲ್ಲಿ ಗುರುವಾರ ವಾರದ ಸಂತೆಯಾದರೂ ಅಂಗಡಿ ವ್ಯಾಪಾರಸ್ಥರು. ಸ್ವಯಂ ಪ್ರೇರಿತರಾಗಿ ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ ಒಣ ಮೀನು ವ್ಯಾಪಾರಸ್ಥರು ಮಾತ್ರ ಅಂಗಡಿಗಳನ್ನು ತೆರೆದು ಗಿರಾಕಿಗಳಿಗಾಗಿ ಕಾಯುತ್ತಿದ್ದರು.

ಮೂಲ್ಕಿ ಪೋಲಿಸ್ ಠಾಣಾಧಿಕಾರಿ ರಾಮಚಂದ್ರ ನಾಯಕ್ ನೇತೃತ್ವದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆಯಾಗಿ ಅಲ್ಲಲ್ಲಿ ಬಿಗಿ ಪೋಲಿಸ್ ಬಂದೋ ಬಸ್ತ್ ಏರ್ಪಡಿಸಲಾಗಿತ್ತು.

Kinnigoli-19051601 Kinnigoli-19051602 Kinnigoli-19051603

Comments

comments

Comments are closed.

Read previous post:
Kinnigoli-18051602
ಐಕಳ ಮನೆ ಹಾನಿ

ಕಿನ್ನಿಗೋಳಿ : ಮಂಗಳವಾರ ರಾತ್ರಿ ಸುರಿದ ಬಾರಿ ಗಾಳಿ ಮಳೆಗೆ ಕಿನ್ನಿಗೋಳಿ ಸಮೀಪದ ಐಕಳ ಪಂಚಾಯಿತಿ ವ್ಯಾಪ್ತಿಯ ಪಟ್ಟೆ ಪುನ್ಕೆದಡಿ ನಿವಾಸಿ ಶಾಂತ ಪೂಜಾರ್ತಿ ಅವರ ಮನೆ ಮೇಲೆ...

Close