ರಸ್ತೆ ಕಾಮಗಾರಿ ವೀಕ್ಷಣೆ

ಮೂಲ್ಕಿ: ಮೀನುಗಾರಿಕಾ ಇಲಾಖೆಯ ಅನುದಾನದಲ್ಲಿ ಸಸಿಹಿತ್ಲುವಿನಿಂದ ಮುಂಡದವರೆಗೆ 30 ಲಕ್ಷ ವೆಚ್ಚದಲ್ಲಿ 800 ಮೀ ಉದ್ದದ ರಸ್ತೆ ನಿರ್ಮಾಣ, ಫೇವರ್ ಫಿನಿಶ್ ಡಾಮರೀಕರಣ, ಮುಂಡ ಬಳಿ ಜಲ ಸಾಹಸ ಕ್ರೀಡೆಗೆ 1 ಕೋಟಿ ಅನುದಾನ, ಸಸಿಹಿತ್ಲುವಿನಲ್ಲಿ ಮೀನುಗಾರಿಕಾ ದೋಣೆಗಳಿಗೆ ತಂಗಲು 1,5 ಕೋಟಿ ವೆಚ್ಚದಲ್ಲಿ ಜೆಟ್ಟಿ ನಿರ್ಮಾಣ, ಸಮುದ್ರ ಕೊರೆತ ತಡೆ ಗಟ್ಟಲು 6 ಕೋಟ ವೆಚ್ಚದಲ್ಲಿ ತಡಡೆಗೋಡೆ, ಹಳೆಯಂಗಡಿಯಿಂದ ಸಸಿಹಿತ್ಲು ಸಂಪರ್ಕ ರಸ್ತೆಗೆ 8 ಕೋಟಿ ವೆಚ್ಚದಲ್ಲಿ ಸೇತುವೆ, ಮುಕ್ಕದ ರಾಷ್ಟ್ರೀಯ ಹೆದ್ದಾರಿಯಿಂದ ಸಸಿಹಿತ್ಲುವರೆಗ 4 ಕೋಟಿ ವೆಚ್ಚದಲ್ಲಿ ಸುನಾಮಿ ಫಂಡ್ ನಲ್ಲಿ ರಸ್ತೆ ಕಾಂಕ್ರೀಟಿಕರಣ ಸೇರಿದಂತೆ ಹಳೆಯಂಗಡಿ ಗ್ರಾಮ ಪಂಚಾಯತ್ ನ ಸಸಿಹಿತ್ಲುವಿಗೆ ಮೀನುಗಾರಿಕಾ ಇಲಾಖೆಯಿಂದ ರಾಜ್ಯದಲ್ಲಿ ಅತೀ ಹೆಚ್ಚು ಒಟ್ಟು 25 ಕೋಟಿ ಅನುದಾನ ಮಂಜೂರಾಗಿದೆಯೆಂದು ರಾಜ್ಯ ಯುವಜನ ಮತ್ತು ಮೀನುಗಾರಿಕಾ ಹಾಗೂ ಯುವಜನ ಸಚಿವ ಕೆ ಅಭಯಚಂದ್ರ ಜೈನ್ ತಿಳಿಸಿದರು.
ಮೀನುಗಾರಿಕಾ ಇಲಾಖೆಯಿಂದ ಸಸಿಹಿತ್ಲುವಿನಿಂದ ಮುಂಡದವರೆಗೆ 30 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ರಸ್ತೆಯ ಕಾಮಗಾರಿ ವೀಕ್ಷಣೆ ಹಾಗೂ 27 ರಿಂದ ಸಸಿಹಿತ್ಲುವಿನ ಮುಂಡದಲ್ಲಿ ನಡೆಯಲಿರುವ ರಾಷ್ತ್ರ ಮಟ್ಟದ ಸರ್ಫಿಂಗ್ ಕ್ರೀಡಾಕೂಟದ ಪೂರ್ವಭಾವಿ ತಯಾರಿ ಪರಿಶೀಲನೆಗೆ ಆಗಮಿಸಿದಾಗ ಮಾಧ್ಯಮದವರಿಗೆ ತಿಳಿಸಿದ ಅವರು ಮೀನುಗಾರಿಕಾ ಇಲಾಖೆಯಿಂದ ಕ್ರೀಡೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಾಯಿ ದೋಣಿ, ಕಾರಂಜಿ, ಸೈಕ್ಲಿಂಗ್ ಸೇರಿದಂತೆ ಜಲ ಸಾಹಸ ಕ್ರೀಡೆಗೆ 1 ಕೋಟಿ ಅನುದಾನ ನೀಡಲಾಗುವುದು ಹಾಗೂ ಇದರ ನಿರ್ವಹಣೆಗೆ ಪಿಲಿಕುಳದಲ್ಲಿ ನಿರ್ವಹಣೆ ಮಾಡುತ್ತಿರುವ ಜಂಗಲ್ ಲಾಡ್ಜ್ ಅಥವಾ ಖಾಸಗಿಯವರಿಗೆ ನೀಡಲಾಗುವುದು.ಇಲ್ಲಿ ಪ್ರವಾಸೋದ್ಯಮಕ್ಕೆ ಉತ್ತಮ ಅವಕಾಶವಿರುವ ನಿಟ್ಟಿನಲ್ಲಿ ಸಸಿಹಿತ್ಲುವಿನಿಂದ ಚಿತ್ರಾಪುಗೆ ಬಾರ್ಜ್ ವ್ಯವಸ್ತೆ ಮಾಡಲಾಗುವುದು. ಸಸಿಹಿತ್ಲುವಿನಲ್ಲಿ ನಿರ್ಮಾಣವಾಗಲಿರುವ ಜೆಟ್ಟಿಯಿಂದ ಮೀನುಗಾರರಿಗೆ ದೋಣಿ ನಿಲ್ಲಿಸಲು ಹಾಗೂ ಬಲೆಗಳನ್ನು ಇಡಲು ವ್ಯವಸ್ತೆ ಮಾಡಲಾಗುವುದು.ಸಮುದ್ರ ತಟದಲ್ಲಿ ಸೈಕ್ಲಿಂಗ್, ಜಾಗಿಂಗ್ ಗೆ ಪೂರಕ ವ್ಯವಸ್ತೆ ಮಾಡಲಾಗುವುದು, ಹೈಮಾಸ್ಕ್ ದೀಪ ಅವಡಿಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಸೂಕ್ತ ವ್ಯವಸ್ತೆ ಮಾಡಲಾಗುವುದು ಎಂದು ಅವರು ಹೇಳಿದರು.
ಹಳೆಯಂಗಡಿ ಪಂಚಾಯತ್ ಅಧ್ಯಕ್ಷೆ ಜಲಜಾ,ಮಾಜೆ ಅಧ್ಯಕ್ಷ ವಸಂತ ಬೆರ್ನಾಡ್,ಮಾಜಿ ಉಪಾಧ್ಯಕ್ಷ ಅಬ್ದುಲ್ ಖಾದರ್ ಮತ್ತಿತರರಿದ್ದರು.

Kinnigoli-210516016

Comments

comments

Comments are closed.

Read previous post:
Kinnigoli-210516011
ಕಟೀಲು SSLC ಶೇ 94.34

 ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆ ಮನು ಕಶ್ಯಪ್(613) ಸಮಿತ್ ಆಚಾರ್ಯ(608) ಚಿತ್ರಾಕ್ಷಿ(603) ವಿಶ್ವನಾಥ್(593) ವಾಣಿಶ್ರೀ (592)

Close