ಎಳತ್ತೂರಿನಲ್ಲಿ ಯೂತ್ ಸಮಾಗಮ

ಕಿನ್ನಿಗೋಳಿ: ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಸಂಘಸಂಸ್ಥೆಗಳ ಕಾರ್ಯ ಶ್ಲಾಘನೀಯ, ವಿದ್ಯಾರ್ಥಿಗಳು ಪಡೆದ ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪಿಸಿಕೊಂಡು ದೇಶಕ್ಕೆ ಗೌರವ ತರಬೇಕು ಎಂದು ಗ್ಯಾನ್ ಪ್ರಚಾರಕ ಸಿಆರ್ ಸನಿಲ್ ಆಶಿರ್ವಚನ ನೀಡಿ ಮಾತನಾಡಿದರು.
ಪರಮಪೂಜ್ಯ ಸದ್ಗುರು ಬಾಬಾ ಹರ್‌ದೇವ್‌ಸಿಂಗ್‌ಜೀ ಮಹಾರಾಜರ ಆರ್ಶೀವಾದದೊಂದಿಗೆ ಭಾನುವಾರ ಕಿನ್ನಿಗೋಳಿ ಸಮೀಪದ ಎಳತ್ತೂರು ಸತ್ಸಂಗ ಭವನದಲ್ಲಿ ನಡೆದ ‘ಯೂತ್ ಸಮಾಗಮ’ ಹಾಗೂ ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅತಿಕಾರಿಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು ವಹಿಸಿದ್ದರು.
ಈ ಸಂದರ್ಭ ಕಿನ್ನಿಗೋಳಿ ಜಿ.ಪಂ.ಮಾಜಿ ಸದಸ್ಯ ಪ್ರಮೋದ್ ಕುಮಾರ್. ಕಿನ್ನಿಗೋಳಿ ಗ್ರಾ.ಪಂ. ಮಾಜಿ ಸದಸ್ಯ ಗಣೇಶ್ ತಾಳಿಪಾಡಿ, ಉದ್ಯಮಿ ರವಿಶೆಟ್ಟಿ ಜತ್ತಬೆಟ್ಟು ಎಳತ್ತೂರು, ಕಿನ್ನಿಗೋಳಿ ವಲಯದ ಬಿಜೆಪಿ ಅಧ್ಯಕ್ಷ ಸಂತೋಷ್ ಶೆಟ್ಟಿ, ಗ್ಯಾನ್ ಪ್ರಚಾರಕ್ ಸದಾಶಿವ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.
ಸಂದೀಪ್ ಕೋಟ್ಯಾನ್ ಸ್ವಾಗತಿಸಿ ಗಣೇಶ ವಂದಿಸಿದರು. ಸಂಜಯ ಕಾರ್ಯಕ್ರಮ ನಿರೂಪಿಸಿದರು.

Kinnigoli-230516012

Comments

comments

Comments are closed.

Read previous post:
Kinnigoli-230516011
ಉಲ್ಲಂಜೆ ತೊರೆ ಸ್ವಚ್ಚತಾ ಅಭಿಯಾನ

ಕಿನ್ನಿಗೋಳಿ: ಕಟೀಲು ಗ್ರಾ.ಪಂ., ಮೆನ್ನಬೆಟ್ಟು ಗ್ರಾ.ಪಂ., ಆದರ್ಶ ಬಳಗ ಕೊಡೆತ್ತೂರು, ಭ್ರಾಮರಿ ಮಹಿಳಾ ಮಂಡಳಿ ರಾಜರತ್ನಪುರ, ಶ್ರೀ ವೀರ ಮಾರುತಿ ವ್ಯಾಯಾಮ ಶಾಲೆ ರಾಜರತ್ನಪುರ, ಬಾಲ ಗಣೇಶೋತ್ಸವ ಸಮಿತಿ...

Close